ಮಲೆ ಮಹದೇಶ್ವರ ಸ್ವಾಮಿ ಈ ವರ್ಷವೂ ಕೋಟ್ಯಧಿಪತಿ; ಕಾಣಿಕೆ ರೂಪದಲ್ಲಿ 1.88 ಕೋಟಿ ರೂ. ಸಂಗ್ರಹ

Male Mahadeshwara Swamy Temple: ಚಾಮರಾಜನಗರದಲ್ಲಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆ ಮಧ್ಯರಾತ್ರಿಯವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಪ್ರತಿವರ್ಷ ಧನುರ್ಮಾಸದಲ್ಲಿ ಹುಂಡಿಯ ಕಾಣಿಕೆ ಎಣಿಕೆ ಮಾಡಲಾಗುತ್ತದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ

  • Share this:
ಚಾಮರಾಜನಗರ (ಡಿ. 28): ಚಾಮರಾಜನಗರದ ಐತಿಹಾಸಿಕ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವರ್ಷವೂ ಮಹದೇಶ್ವರ ಸ್ವಾಮಿ ಕೋಟ್ಯಧಿಪತಿಯಾಗಿದ್ದಾನೆ. ಕಳೆದ ವರ್ಷ ಈ ದೇವಾಲಯದಲ್ಲಿ 1.08 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು. ಈ ವರ್ಷ 1. 88 ಕೋಟಿ ರೂ. ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿತವಾಗಿದೆ. 

ಕಳೆದ ವರ್ಷಕ್ಕಿಂತಲೂ ಹೆಚ್ಚು ಕಾಣಿಕೆ ಹಣ ಬಂದಿದ್ದು, ಹುಂಡಿ ಸಂಗ್ರಹದಲ್ಲಿ ಮಾದಪ್ಪ ಸ್ವಾಮಿ ದಾಖಲೆ ನಿರ್ಮಿಸಿದ್ದಾನೆ. ಈ ಬಾರಿ ಒಟ್ಟು 1,88,21,108 ರೂ., 48 ಗ್ರಾಂ ಚಿನ್ನ, 1 ಕೆ.ಜಿ 800 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಚಾಮರಾಜನಗರದಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ನಿನ್ನೆ ಮಧ್ಯರಾತ್ರಿಯವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಪ್ರತಿವರ್ಷ ಧನುರ್ಮಾಸದಲ್ಲಿ ಹುಂಡಿಯ ಕಾಣಿಕೆ ಎಣಿಕೆ ಮಾಡಲಾಗುತ್ತದೆ. ಈ ಬಾರಿ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆದಿದೆ.

ಜಮ್ಮು ಕಾಶ್ಮೀರದಲ್ಲಿ ಶತ್ರುಗಳ ಗುಂಡೇಟಿಗೆ ಗದಗದ ಯೋಧ ವೀರೇಶ ಕುರಹಟ್ಟಿ ಹುತಾತ್ಮ; ಇಂದು ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ

ಕಳೆದ ವರ್ಷ 1,08,14,553 ರೂ. ಸಂಗ್ರಹವಾಗಿತ್ತು. ಜೊತೆಗೆ 102 ಗ್ರಾಂ ಚಿನ್ನ, 1.596 ಕೆ.ಜಿ. ಬೆಳ್ಳಿ ಕಾಣಿಕೆಯಾಗಿ ಲಭ್ಯವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಕಾಣಿಕೆ ಹೆಚ್ಚಾಗಿದೆ. ಈ ವರ್ಷವೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ.

(ವರದಿ: ನಂದೀಶ್)

 
Published by:Sushma Chakre
First published: