Male Mahadeshwara Temple: ಈ ಬಾರಿಯೂ ಮಹದೇಶ್ವರನ ದೀಪಾವಳಿ ಮಹಾರಥೋತ್ಸವ ರದ್ದು

ನ.3 ರ ರಾತ್ರಿ ಬೆಟ್ಟದಲ್ಲಿ ಭಕ್ತರು ರಾತ್ರಿ ವಾಸ್ತವ್ಯ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಉಳಿದಂತೆ ಭಕ್ತರು ಬಂದು ದೇವರ ದರ್ಶನ ಪಡೆಯಬಹುದಾಗಿದೆ‌. ಇದಲ್ಲದೆ ಸಾಂಪ್ರದಾಯಿಕ ವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಲರುವೆ ಉತ್ಸವ ನಡೆಯಲಿದ್ದು  ಸ್ಥಳೀಯರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ

ಮಲೆ ಮಹದೇಶ್ವರ ದೇವಸ್ಥಾನ

ಮಲೆ ಮಹದೇಶ್ವರ ದೇವಸ್ಥಾನ

  • Share this:
ಚಾಮರಾಜನಗರ (ಅ.31) ಕೊರೋನಾ (Corona Virus) ಹರಡುವ ಆತಂಕ ಇರುವುದರಿಂದ ಈ ಬಾರಿಯು ಸಹ ಮಲೈ ಮಹದೇಶ್ವರ ಬೆಟ್ಟದಲ್ಲಿ (Male Mahadeshwara hill) ದೀಪಾವಳಿ ಜಾತ್ರೆ ಹಾಗೂ ಮಹಾರಥೋತ್ಸವ (Deepavai Celebration And Maha Rathotsava) ರದ್ದುಗೊಳಿಸಲಾಗಿದೆ. ನವೆಂಬರ್ 3 ರಿಂದ 5 ರವರೆಗೆ ದೀಪಾವಳಿ ಜಾತ್ರೆ ನಡೆಯಬೇಕಿತ್ತು.  ಲಕ್ಷಾಂತರ ಮಂದಿ (Devotees) ಸೇರುವ ನಿರೀಕ್ಷೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೆಲವು ಮಾರ್ಪಾಡು ಗಳೊಂದಿಗೆ ಜಾತ್ರೆ , ರಥೋತ್ಸವ ಹಾಗೂ ತೆಪ್ಪೋತ್ಸವ ರದ್ದುಗೊಳಿಸಲಾಗಿದೆ. ನ.3 ರ ರಾತ್ರಿ ಬೆಟ್ಟದಲ್ಲಿ ಭಕ್ತರು ರಾತ್ರಿ ವಾಸ್ತವ್ಯ ಮಾಡುವುದನ್ನು ಸಹ ನಿಷೇಧಿಸಲಾಗಿದೆ

ನವೆಂಬರ್ 3 ರಂದು ಮಲೈ ಮಹದೇಶ್ವರ ನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ,  ನ.4 ರಂದು ಅಮಾವಾಸ್ಯೆ ಹಾಗೂ ಹಾಲರುವೆ ಹಾಗು ನ.5 ರಂದು ವಿಶೇಷ ಪೂಜೆ ಪುರಸ್ಕಾರ ಗಳು ನಡೆಯಲಿವೆ. ಆದರೆ ನ. 3 ರ ಮಧ್ಯಾಹ್ನ 12 ರಿಂದ ನ.4 ರ  ಮಧ್ಯಾಹ್ನ12 ರವರೆಗೆ ಒಂದು ದಿನದ ಮಟ್ಟಿಗೆ ಹೊರ ಊರಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಭಕ್ತರ ರಾತ್ರಿ ವಾಸ್ತವ್ಯಕ್ಕೆ ನಿಷೇಧ

ನ.3 ರ ರಾತ್ರಿ ಬೆಟ್ಟದಲ್ಲಿ ಭಕ್ತರು ರಾತ್ರಿ ವಾಸ್ತವ್ಯ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಉಳಿದಂತೆ ಭಕ್ತರು ಬಂದು ದೇವರ ದರ್ಶನ ಪಡೆಯಬಹುದಾಗಿದೆ‌. ಇದಲ್ಲದೆ ಸಾಂಪ್ರದಾಯಿಕ ವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಲರುವೆ ಉತ್ಸವ ನಡೆಯಲಿದ್ದು  ಸ್ಥಳೀಯರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ:  RIP Puneeth Rajkumar; ಬೆಟ್ಟದ ಹೂ ಬಾಡುವ ಬಗ್ಗೆ ಭವಿಷ್ಯ ನುಡಿದಿದ್ದ ಅಜ್ಜಯ್ಯ; ಆ ಪೂಜೆ ಮಾಡಿಸಿದ್ರೆ ಉಳಿಯುತ್ತಿದ್ರೇನೋ ಎಂದ ಶ್ರೀಗಳು!

ದೇವರ ದರ್ಶನ, ದಾಸೋಹ, ಲಾಡು ಸೇವೆ, ಹುಲಿವಾಹನ ಸೇವೆ, ರುದ್ರಾಕ್ಷಿ ಮಂಟಪ, ಬಸವ ವಾಹನ ಸೇವೆ, ಚಿನ್ನದ ತೇರಿನ ಸೇವೆ ಇರಲಿದೆ. ಬೆಟ್ಟಕ್ಕೆ ಬರುವ ಭಕ್ತರು ಆದಷ್ಟು ವಾಸ್ಯವ್ಯ ಮಾಡುವುದಕ್ಕೆ ಆದ್ಯತೆ ನೀಡದೆ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡು ಹೋಗಬಹುದಾಗಿದೆ.

ಹಬ್ಬದ ಪೂಜಾ ಕೈಂಕರ್ಯಗಳು ನಡೆಯಲಿವೆ

ಕೋರೋನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ  ವರ್ಷ ಮೂರು ದಿನಗಳ ಕಾಲ ನಡೆಯಬೇಕಿದ್ದ ದೀಪಾವಳಿ ಜಾತ್ರೆ ಹಾಗೂ ರಥೋತ್ಸವಗಳನ್ನು ಪೂರ್ಣ ಪ್ರಮಾಣದಲ್ಲಿ  ರದ್ದುಪಡಿಸಲಾಗಿತ್ತು.  ಆದರೆ ಈ ಬಾರಿ ಅಕ್ಟೋಬರ್ 3 ರಿಂದ 5 ರವರೆಗೆ ದೀಪಾವಳಿ ಜಾತ್ರೆ ನಿಗಧಿಯಾಗಿದ್ದು ಜಾತ್ರೆ ಹಾಗೂ  ಮಹಾರಥೋತ್ಸವ ಇರುವುದಿಲ್ಲ. ಉಳಿದಂತೆ ಸಾಂಪ್ರದಾಯಿಕವಾಗಿ ನಡೆಯಬೇಕಿರುವ ದೀಪಾವಳಿ ಹಬ್ಬದ ಪೂಜಾಕೈಂಕರ್ಯಗಳು ನಡೆಯಲಿವೆ.

ಇದನ್ನೂ ಓದಿ:  ಮತ್ತೆ ಕೋಟ್ಯಾಧೀಶನಾದ ಮಲೆ ಮಹದೇಶ್ವರ; ಭಾರೀ ಮೊತ್ತದ ಕಾಣಿಕೆ ಸಂಗ್ರಹ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹದೇಶ್ವರ ನ ದರ್ಶನ ಪಡೆಯಲು ಬರುವ ಭಕ್ತರ ಅನುಕೂಲಕ್ಕಾಗಿ ರಾಜ್ಯದ ವಿವಿಧ ಡಿಪೋಗಳಿಂದ 300 ಕೆ.ಎಸ್.ಆರ್.ಟಿ.ಸಿ. ಬಸ್ (KSRTC Bus) ಸೌಲಭ್ಯ ಕಲ್ಪಿಸಲಾಗಿದೆ. ಪಾದಯಾತ್ರೆ ಯಲ್ಲಿ ಬರುವ ಭಕ್ತರಿಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಕಾಲುದಾರಿಯಲ್ಲಿ  ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾಳಬೆಟ್ಟದಲ್ಲಿ ಮೆಡಿಕಲ್ ಕ್ಯಾಂಪ್ (Medical Camp)  ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

 ಸಹಾಯವಾಣಿ ಸಂಖ್ಯೆ 18604254350  

ಪ್ರತಿಬಾರಿಯಂತೆ ದೀಪಾಲಂಕಾರ ಇರಲಿದ್ದು, ಭಕ್ತರಿಗೆ ನೆರಳಿನ ವ್ಯವಸ್ಥೆ, ಬೆಟ್ಟಕ್ಕೆ ಬರುವ ವಾಹನಗಳಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ದೇವರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಬೆಟ್ಟದಲ್ಲಿ ನಡೆಯುವ  ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಿದ್ದಲ್ಲಿ  ಸಹಾಯವಾಣಿ ಸಂಖ್ಯೆ 18604254350 ಗೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ
Published by:Mahmadrafik K
First published: