Chamarajanagara: ಮಹದೇಶ್ವರ ಬೆಟ್ಟದಲ್ಲಿ ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ತಾತ್ಕಾಲಿಕ ವಸತಿಗೃಹ: ಪ್ರಕರಣ ಸುಖಾಂತ್ಯ

ಚಾಮರಾಜನಗರ (Chamarajanagara): ಅವಧಿ ಮೀರಿ ವಾಸವಿದ್ದ ಕಾರಣಕ್ಕೆ  ಮಲೈಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವಸತಿ ಗೃಹದಿಂದ ಹೊರಹಾಕಲ್ಪಟ್ಟಿದ್ದ ಪ್ರಕರಣ ಸುಖಾಂತ್ಯಗೊಂಡಿದೆ

ಬೀದಿಯಲ್ಲಿ ಕುಟುಂಬ

ಬೀದಿಯಲ್ಲಿ ಕುಟುಂಬ

  • Share this:
ಚಾಮರಾಜನಗರ (Chamarajanagara): ಅವಧಿ ಮೀರಿ ವಾಸವಿದ್ದ ಕಾರಣಕ್ಕೆ  ಮಲೈಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವಸತಿ ಗೃಹದಿಂದ ಹೊರಹಾಕಲ್ಪಟ್ಟಿದ್ದ ಪ್ರಕರಣ ಸುಖಾಂತ್ಯಗೊಂಡಿ. ಕಳೆದ ಎಂಟು ದಿನಗಳಿಂದ ನಿರಾಶ್ರಿತರಾಗಿ ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ತಾತ್ಕಾಲಿಕ ವಸತಿ ಗೃಹ ಸೌಲಭ್ಯ ನೀಡಲು ಹಾಗು ಮೃತ ನೌಕರನ ಪುತ್ರ ಶಾಂತಮಲ್ಲೇಶ್ ಗೆ ಗುತ್ತಿಗೆ ಆಧಾರದ ಮೇಲೆ ಕೆಲಸ (Job) ನೀಡಲು ತೀರ್ಮಾನಿಸಲಾಗಿದೆ ಪ್ರಾಧಿಕಾರದ ನೌಕರ ಜಯಸ್ವಾಮಿ ಎಂಬವರು 2019 ರಲ್ಲಿ ಮೃತಪಟ್ಟಿದ್ದರು. ಆದರೆ ಅವರ ಕುಟುಂಬದವರು  ಪ್ರಾಧಿಕಾರದ ವಸತಿಗೃಹದಲ್ಲೇ ವಾಸ ಮುಂದುವರಿಸಿದ್ದರು. ಜಯಸ್ವಾಮಿ ಅವರ ಮರಣಾನಂತರ  ನೀಡಬೇಕಿದ್ದ ಬಾಕಿ ಇರುವ  ಗ್ರ್ಯಾಚ್ಯುಯಿಟಿ (Gratuity),  ಪಿಎಫ್ ಹಣ (PF Amount) ನೀಡಬೇಕು. ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಪಟ್ಟು ಹಿಡಿದಿದ್ದರು‌ ಆದರೆ ನಿಯಮಾನುಸಾರ  ವಸತಿ ಗೃಹ ಖಾಲಿ ಮಾಡಬೇಕು ನಂತರವಷ್ಟೇ ಇತ್ಯರ್ಥಪಡಿಸುವುದಾಗಿ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದರು. 

ವಸತಿಗೃಹ ಖಾಲಿ ಮಾಡುವಂತೆ ನೋಟೀಸ್ ಸಹ ನೀಡಿದ್ದರು. ನೋಟೀಸ್ ಸ್ಪಂದಿಸದ ಕಾರಣ ಜ.14 ರಂದು ವಸತಿಗೃಹ ಖಾಲಿ ಮಾಡಿಸಿ ಬೀಗಮುದ್ರೆ ಹಾಕಲಾಗಿತ್ತು. ಇದಾದ ಬಳಿಕ ನಿರಾಶ್ರಿತರದ ಮೃತ ನೌಕರನ ಕುಟುಂಬದವರು ಪಾತ್ರೆಪಗಡಗಳೊಂದಿಗೆ ಬೀದಿಯಲ್ಲೇ ಕಾಲಕಳೆದಿದ್ದರು.

ಸಂಧಾನ ಸಭೆ

ಈ ಸಂಬಂಧ ಇಂದು ಪ್ರಾಧಿಕಾರದ ಅಧಿಕಾರಿಗಳು ಸಂತ್ರಸ್ತ ಕುಟುಂಬದವರು, ನೌಕರರ ಸಂಘದ ಪದಾಧಿಕಾರಿಗಳು ಹಾಗು ವೀರಶೈವ ಲಿಂಗಾಯತ ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದರು.

ಇದನ್ನೂ ಓದಿ:  Dakshina Kannada: ಎತ್ತಿನಹೊಳೆ ಯೋಜನೆಗೆ ಪರ್ಯಾಯ‌ ಪಶ್ಚಿಮ ವಾಹಿನಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯತ್ನ!

ಈ ಹಿಂದೆ ದಿವಂಗತ ಜಯಸ್ವಾಮಿ ಅವರ ಮಗ ಶಾಂತಮಲ್ಲೇಶ್ ಹೊರಗುತ್ತಿಗೆಯಲ್ಲಿ ಸುಮಾರು 3-4 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು ಸಮರ್ಪಕವಾಗಿ ಕೆಲಸ ನಿರ್ವಹಿಸದ ಹಾಗೂ ಕೆಲಸದ ಒತ್ತಡ ಇಲ್ಲದ್ದರಿಂದ ಕಳೆದ ಒಂದು ವರ್ಷದಿಂದ ಕೆಲವರನ್ನು   ಕೈಬಿಡಲಾಗಿದ್ದು ಅದರಲ್ಲಿ‌ ಇವರೂ ಒಬ್ಬರಾಗಿದ್ದು  ಇದೀಗ ಅವರಿಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲಾಗುವುದು ಎಂದು ಪ್ರಾಧಿಕಾರದ ಜಯವಿಭವಸ್ವಾಮಿ ಭರವಸೆ ನೀಡಿದರು.

ಕುಟುಂಬ ಪಿಎಫ್ ಹಣಕ್ಕೆ ದಾಖಲೆಗಳನ್ನು ಸಲ್ಲಿಸಿಲ್ಲ

ಪಿ.ಎಫ್. ಮೊತ್ತವನ್ನು ಪಡೆಯಲು ಬೇಕಾದ ದಾಖಲೆಗಳನ್ನು ಕುಟುಂಬಕ್ಕೆ ಕೋರಿದರೂ ಈವರೆಗೆ ಸಲ್ಲಿಸಿಲ್ಲ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಸಂಬಂಧಿತ‌ ಸಂಸ್ಥೆಯಿಂದ ಆದಷ್ಟು ಬೇಗ ಬಿಡುಗಡೆ ಮಾಡಲು ಕೋರಿ ಪ್ರಸ್ತಾವನೆ‌ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು

ತಾತ್ಕಾಲಿಕ ನೆಲೆಗಟ್ಟಿನಲ್ಲಿ ಈ ಹಿಂದೆ ತಾತ್ಕಾಲಿಕ ವಸತಿ ಗೃಹವನ್ನು  ದಿವಂಗತ ಜಯಸ್ವಾಮಿ ಅವರ ಮಗನಿಗೆ ನೀಡಲಾಗಿತ್ತು. ಅದನ್ನು ತಿರಸ್ಕರಿಸಿದ್ದರು. ಈಗ ಮತ್ತೆ ತಾತ್ಕಾಲಿಕ ನೆಲೆಗಟ್ಟಿನಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದು ಇದನ್ನು ಒಪ್ಪಿದ ಸಂತ್ರಸ್ತ ಕುಟುಂಬಸ್ಥರು ವಸ್ತುಗಳನ್ನು ಸ್ಥಳಾಂತರಿಸಿ ಪ್ರಾಧಿಕಾರದ ತಾತ್ಕಾಲಿಕ ವಸತಿ ಗೃಹಕ್ಕೆ ಇಂದು ತೆರಳಿದ್ದಾರೆ.

  ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿಕೆ

ಈಗಾಗಲೇ ಗ್ರಾಚ್ಯುಯಿ ಟಿ ಹಣದಲ್ಲಿ ರೂ. 3.11 ಲಕ್ಷ ಪಾವತಿಸಲಾಗಿದೆ. ಉಳಿಕೆ ಹಣ ರೂ 1.35 ಲಕ್ಷದಲ್ಲಿ ಬಾಡಿಗೆ ಹಣ ಮುರಿದುಕೊಂಡು ಉಳಿದ ಹಣವನ್ನು ಪಾವತಿಸಲು ಕೋರಿದ್ದು, ಕೂಡಲೇ ಕ್ರಮವಹಿಸಲಾಗುವುದು. ಈ ಪ್ರಕರಣದಲ್ಲಿ ಪ್ರಾಧಿಕಾರವು ನಿಯಮಾನುಸಾರ ಕ್ರಮ ಕೈಗೊಂಡಿದೆ.

ಇದನ್ನೂ ಓದಿ:  Vaccination ಬಳಿಕ ಮೂವರು ಮಕ್ಕಳ ನಿಗೂಢ ಸಾವು: ಬೆಳಗಾವಿ ಪ್ರಕರಣದಿಂದ ಹೆಚ್ಚಿದ ಆತಂಕ!

ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅಕ್ರಮವಾಗಿ ವಾಸವಿರುವವರನ್ನು ಖಾಲಿ ಮಾಡುವ ವಿಚಾರದಲ್ಲಿ ಪ್ರಾಧಿಕಾರದ ಗಮನಕ್ಕೆ ತರಲಾಗುವುದು ಹಾಗೂ ನೌಕರರ ಸಂಘದವರೊಡನೆ‌ ಸಹಾ ಚರ್ಚಿಸಿ ಇತ್ಯರ್ಥ ಪಡಿಸಲಾಗುವುದು ಹಾಗೂ ಖಾಯಂ ವಸತಿ ಗೃಹಗಳನ್ನು ಖಾಯಂ ನೌಕರರಿಗೆ ಹಂಚಿಕೆ ಮಾಡಲಾಗುವುದು. ಎಂದು ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಪ್ರಕರಣ ಸುಖಾಂತ್ಯ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿರುವ  ವೀರಶೈವ ಲಿಂಗಾಯತ ಮಹಾಸಭಾ ಚಾಮರಾಜನಗರ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಕರಣ ನಡೆದ ಮರುದಿನವೇ ಇದನ್ನು ಇತ್ಯರ್ಥ ಪಡಿಸಲು ಪ್ರಯತ್ನಿಸಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸಂಧಾನಸಭೆ ನಡೆಸಿದ್ದು ಮಹದೇಶ್ವರನ ಕೃಪೆಯಿಂದ ಸುಖಾಂತ್ಯಗೊಂಡಿದೆ‌. ಸಂತ್ರಸ್ತ ಕುಟುಂಬದ ಸದ್ಯದ ಜೀವನಕ್ಕೆ ನಮ್ಮ ಕೈಲಾದ ಧನಸಹಾಯ ಮಾಡಿದ್ದೇವೆ ಎಂದು ತಿಳಿಸಿದರು
Published by:Mahmadrafik K
First published: