ಮಲಪ್ರಭಾ ಸಕ್ಕರೆ ಕಾರ್ಖಾನೆಯ ಮತ್ತೊಂದು ಯಡವಟ್ಟು; ಕಾರ್ಖಾನೆಗೆ ಸಂಬಂಧವೇ ಇಲ್ಲದ ನೂರಾರು ಜನರ ಹೆಸರಿನಲ್ಲಿ Bank ಸಾಲ

ಪ್ಪತ್ತಿನ ಊಟಕ್ಕೆ ಪರದಾಡೋ ಜನರ ತಲೆ ಮೇಲೆ ಇದೀಗ  ಬ್ಯಾಂಕ್ ನಲ್ಲಿ ಲಕ್ಷಗಟ್ಟಲೇ ಸಾಲ ಇದ್ದು ಜನರು ಕಂಗಾಲಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ (ಜನವರಿ. 20)- ರಾಜ್ಯದಲ್ಲಿ ಕೊರೊನಾ, ಓಮಿಕ್ರಾನ್ ಹಾವಳಿ ಹೆಚ್ಚಾಗಿದ್ದು ಸರಕಾರ ವಿಕ್ ಎಂಡ್ ಲಾಕ್ ಡೌನ್ ಸೇರಿ ಅನೇಕ ನಿರ್ಬಂಧಗಳನ್ನು ಹೇರಿದೆ. ಇದರಿಂದ ದುಡಿಯುವ ವರ್ಗಕ್ಕೆ ದೊಡ್ಡ ಪೆಟ್ಟು ಬಿದ್ದು ದಿನ ನಿತ್ಯ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ (Malaprabha Sahakari Sugar Factory)  ಯಡವಟ್ಟು ಮಾಡಿದ್ದು, ಬಡವರಿಗೆ ಸಂಕಷ್ಟಕ್ಕೆ ತಳ್ಳಿದೆ. ಎಂ ಕೆ ಹುಬ್ಬಳ್ಳಿ ಪಟ್ಟಣದ ನೂರಾರು ಬಡವರ ಹೆಸರಿನಲ್ಲಿ ಕೊಟ್ಯಾಂತರ ರೂಪಾಯಿ ಸಾಲ (debt) ಮಾಡಿದೆ. ಕಾರ್ಖಾನೆಗೆ ಯಾವುದೇ ರೀತಿಯ ಸಂಬಂಧ ಇಲ್ಲವರಿಗೆ ವಿಮೆ, ಸಹಾಯದ ಧನದ ಹೆಸರಿನಲ್ಲಿ ದಾಖಲೆ ಪಡೆದು ಬ್ಯಾಂಕ್ ಆಫ್ ಇಂಡಿಯಾದಲ್ಲಿ (Bank Of india) ಸಾಲ ಮಾಡಿದೆ. ಈಗ ಈ ವಿಚಾರ ಜನರಿಗೆ ಗೊತ್ತಾಗಿದ್ದು, ಬ್ಯಾಂಕ್ ನವರಿಗೆ ಈ ಬಗ್ಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಕಾರ್ಖಾನೆ ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತಿದೆ. ಇದು ನೂರಾರು ಬಡವರಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ಒಪ್ಪತ್ತಿನ ಊಟಕ್ಕೆ ಪರದಾಡೋ ಜನರ ತಲೆ ಮೇಲೆ ಇದೀಗ  ಬ್ಯಾಂಕ್ ನಲ್ಲಿ ಲಕ್ಷಗಟ್ಟಲೇ ಸಾಲ ಇದ್ದು ಜನರು ಕಂಗಾಲಾಗಿದ್ದಾರೆ.

ವಿವಾದಗಳಿಂದಲೇ ಸುದ್ದಿಯಾಗಿರುವ ಸಕ್ಕರೆ ಕಾರ್ಖಾನೆ

ಬೆಳಗಾವಿ ಎಂ ಕೆ ಹುಬ್ಬಳ್ಳಿಯ ಬಳಿ ಇರೋ ಮಲಪ್ರಭಾ ಸಕ್ಕರೆ ಕಾರ್ಖಾನೆ ಇತ್ತೀಚಿಗೆ ಹಲವು ವಿವಾದಗಳಿಂದ ಸುದ್ದಿಯಲ್ಲಿ ಇದೆ. ಬಾಕಿ ಹಣ, ಸಕ್ಕರೆ ಗೋಲಮಾಲ್ ಬಗ್ಗೆ ದೊಡ್ಡ ವಿವಾದ ಸೃಷ್ಠಿಯಾಗಿತ್ತು. ಇದೀಗ ಕಾರ್ಖಾನೆ ಆಡಳಿತ ಮಂಡಳಿ ಸಂಬಂಧವೇ ಇಲ್ಲದ ಬಡವರ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿದೆ. ಎಂ ಕೆ ಹುಬ್ಬಳ್ಳಿ ಪಟ್ಟಣದ 160 ದಲಿತ ಹೆಸರಿನಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿ ಸಾಲ ಮಾಡಿದೆ.

ಒಬ್ಬೊಬ್ಬರ ಹೆಸರಿನಲ್ಲಿ 8 ಲಕ್ಷ ಸಾಲ

ಒಬ್ಬರ ಹೆಸರಿನಲ್ಲಿ 8 ಲಕ್ಷ ಸಾಲವನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಸಾಲ ತೆಗೆಯಲಾಗಿದೆ. ಆದರೇ ಬಗ್ಗೆ ಅಮಾಯಕ ಜನರಿಗೆ ಯಾವುದೇ ಮಾಹಿತಿಯನ್ನು ಕಾರ್ಖಾನೆ ನೀಡಿಲ್ಲ. ಸದ್ಯ  8 ಲಕ್ಷ ಹಣಕ್ಕೆ 25 ಸಾವಿರ ರೂಪಾಯಿ ಬಡ್ಡಿ ಸಹ ಸೇರ್ಪಡೆಯಾಗಿದ್ದು, ಇದಕ್ಕೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಇದನ್ನು ಓದಿ: ದ್ವೇಷ ಮರೆತು ಒಂದಾದ Renukacharya, Yatnal.. ಡಿಕೆಶಿ ವೇಗವನ್ನು ತಡೆಯುವುದೇ ಇವರ ಗುರಿಯಂತೆ!

ಲೋನ್​​ಗೆ ಅರ್ಜಿ ಹಾಕಿದಾಗ ಅಸಲಿ ವಿಚಾರ ಬಹಿರಂಗ

ಎಂ ಕೆ ಹುಬ್ಬಳ್ಳಿ ಪಟ್ಟಣದ ಜನರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಧರಣಿ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್ ನಲ್ಲಿಯೂ ಧರಣಿ ಮಾಡಿದ್ದು, ಸಿಬ್ಬಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 160  ಜನರ ಪೈಕಿ ಓರ್ವರು ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 25 ಸಾವಿರ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಗ್ರಾಹಕರಿಗೆ ನಿಮ್ಮ ಹೆಸರಿನಲ್ಲಿ ಒಂದು ಲೋನ್ ಇದೆ ಮತ್ತೊಂದು ಸಾಲವನ್ನು ಕೊಡಲ್ಲ ಎಂದು ಹೇಳಿತ್ತು.

ಇದನ್ನು ಓದಿ: ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವು: ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ

ಹೋರಾಟ ನಡೆಸುವ ಎಚ್ಚರಿಕೆ 

ಈ ಬಗ್ಗೆ ವಿಚಾರ ನಡೆಸಿದ ವೇಳೆಯಲ್ಲಿ 8 ಸಾಲವನ್ನು ಸಕ್ಕರೆ ಕಾರ್ಖಾನೆ ಮಾಡಿರೋದು ಬೆಳಕಿಗೆ ಬಂದಿದೆ. ರೈತ ಮುಖಂಡೆ ಜಯಶ್ರೀ ಗುರಣ್ಣವರ್ ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಇಲ್ಲವೇ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಮುಖಂಡರು ನೀಡಿದ್ದಾರೆ.
Published by:Seema R
First published: