• Home
  • »
  • News
  • »
  • state
  • »
  • Malali Mosque: ಮಸೀದಿ ಕಮಿಟಿ ಸಲ್ಲಿಸಿದ್ದ ಅರ್ಜಿ ವಜಾ; ಜ್ಞಾನವಾಪಿ ಮಾದರಿಯಲ್ಲೇ ವಿಚಾರಣೆ

Malali Mosque: ಮಸೀದಿ ಕಮಿಟಿ ಸಲ್ಲಿಸಿದ್ದ ಅರ್ಜಿ ವಜಾ; ಜ್ಞಾನವಾಪಿ ಮಾದರಿಯಲ್ಲೇ ವಿಚಾರಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನ್ಯಾಯಾಲಯ ವಿಹೆಚ್​​ಪಿ ಅರ್ಜಿ ಸ್ವೀಕರಿಸಿ ಜನವರಿ 8, 2023ಕ್ಕೆ ಮುಂದಿನ ವಿಚಾರಣೆ ನಡೆಸಿದೆ. ಜ್ಞಾನವಾಪಿ ಮಾದರಿಯಲ್ಲೇ ಸಾಗಲಿದೆ ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಯಲಿದೆ.

  • News18 Kannada
  • Last Updated :
  • Dakshina Kannada, India
  • Share this:

ಮಂಗಳೂರಿನ ಮಳಲಿ ಮಸೀದಿ ಪ್ರಕರಣ (Malali Mosque Row Case) ನ್ಯಾಯಾಲಯದಲ್ಲಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಮಳಲಿ ಮಸೀದಿಯ ಅರ್ಜಿ ವಿಚಾರಣೆ ಸಿವಿಲ್ ಕೋರ್ಟ್​ (Civil Court) ವ್ಯಾಪ್ತಿಯಲ್ಲಿಯೇ ನಡೆಯಲಿದೆ. ಮಸೀದಿ ಕಾಮಗಾರಿ ತಡೆಯಾಜ್ಞೆ ಕೋರಿ ಮತ್ತು ಅದರ ಸಮೀಕ್ಷೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ (Vishwa hindu parishat) ಅರ್ಜಿ ಸಲ್ಲಿಸಿತ್ತು. ವಿಹೆಚ್​ಪಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿ ಕಮೀಟಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ವಿಹೆಚ್​​ಪಿ ಅರ್ಜಿ ಸ್ವೀಕರಿಸಿ ಜನವರಿ 8, 2023ಕ್ಕೆ ಮುಂದಿನ ವಿಚಾರಣೆ ನಡೆಸಿದೆ. ಜ್ಞಾನವಾಪಿ ಮಾದರಿಯಲ್ಲೇ ಸಾಗಲಿದೆ ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಯಲಿದೆ.


ಮಳಲಿ ಮಸೀದಿಯಲ್ಲಿ ಪತ್ತೆಯಾಗಿರುವ ದೇವಾಲಯದ ರಚನೆ ಬಗ್ಗೆ ಮೊದಲು ಪರಿಶೀಲನೆಯಾಗಬೇಕು. ಅದರ ವಸ್ತುಸ್ಥಿತಿ ಪರಿಶೀಲಿಸಲು ಕೋರ್ಟ್‌ ಕಮಿಷನರ್‌ ಒಬ್ಬರನ್ನು ನೇಮಿಸಬೇಕು. ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಕಮಿಷನರ್‌ ನೇಮಕ ಮಾಡುವ ಕುರಿತು ಪರಿಗಣಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿ ಆಡಳಿತ ಮಂಡಳಿ ಮನವಿ ಮಾಡಿಕೊಂಡಿತ್ತು.


ಆದೇಶ ಹೊರಡಿಸಿದಂತೆ ಹೈಕೋರ್ಟ್​ ನಿರ್ದೇಶನ


ಅಸಲು ದಾವೆಯ ಸಿಂಧುತ್ವ ಕುರಿತು ಯಾವುದೇ ಆದೇಶ (Order) ಹೊರಡಿಸದಂತೆ ಹೈಕೋರ್ಟ್‌ (High Court) ಮಂಗಳೂರಿನ ಸಿವಿಲ್‌ ಕೋರ್ಟ್‌ಗೆ (Civil Court) ಜೂನ್​ 14ರಂದು ನಿರ್ದೇಶನ ನೀಡಿತ್ತು.


ಮಂಗಳೂರಿನ ತೆಂಕಳೈಪಡಿ ಗ್ರಾಮದ ಧನಂಜಯ್‌ ಹಾಗೂ ಬಡುಗಳೈಪಡಿ ಗ್ರಾಮದ ಮನೋಜ್‌ ಕುಮಾರ್‌ (Manoj Kumar) ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು.


malali mosque row mosque committee plea rejected mrq
ಮಳಲಿ ಮಸೀದಿ


1991ರ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆಯ ಅನುಸಾರ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಆದ್ದರಿಂದ ಅದನ್ನು ವಜಾಗೊಳಿಸಬೇಕು ಎಂದು ಮಸೀದಿ ಅರ್ಜಿ ಸಲ್ಲಿಸಿತ್ತು.


ಹಿಂದೂ ಸಂಘಟನೆಗಳಿಂದ ತಾಂಬೂಲ ಪ್ರಶ್ನೆ


ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಮಳಲಿ ಮಸೀದಿ ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ದೃಢೀಕರಣಕ್ಕಾಗಿ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಕೇಳಲಾಗಿತ್ತು.


ಕೇರಳದ ಪ್ರಖ್ಯಾತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ನಡೆದ ಪ್ರಶ್ನಾಚಿಂತನೆ ನಡೆದಿತ್ತು. ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವಾಲಯವಿತ್ತು, ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಹೇಳಿದ್ದರು.


ಇದನ್ನೂ ಓದಿ:  Malali Mosque: ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು: SDPI ರಾಜ್ಯಾಧ್ಯಕ್ಷ


ಈ ಹಿಂದೆ ಇದೇ ಜಾಗದಲ್ಲಿ ಮಠ ಇತ್ತಂತೆ


ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ಆದರೆ ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ ಅಂತ ಜ್ಯೋತಿಷಿ ಜಿ.ಪಿ. ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದರು.


ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ವಿವಾದದಿಂದಾಗಿ ದೇವಾಲಯ ನಾಶಪಡಿಸಿ, ಮಸೀದಿ ಕಟ್ಟಲಾಗಿದೆ. ಹೀಗಾಗಿ ಇಲ್ಲಿ ದೇವಾಲಯವನ್ನು ಮರುಸ್ಥಾಪಿಸಬೇಕಿದೆ ಎಂದು ತಿಳಿಸಿದ್ದರು.


malali mosque row mosque committee plea rejected mrq
ಮಳಲಿ ಮಸೀದಿ


ತಾಂಬೂಲ ಪ್ರಶ್ನೆಗೆ ಎಸ್‌ಡಿಪಿಐ ವಿರೋಧ


ಇನ್ನು ಮಳಲಿ ಮಸೀದಿ ಕುರಿತಾಗಿ ಹಿಂದೂಪರ ಸಂಘಟನೆಗಳು ತಾಂಬೂಲ ಪ್ರಶ್ನೆ ಕೇಳಿದ್ದಕ್ಕೆ ಎಸ್‌ಡಿಪಿಐ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌ಡಿಪಿಐ ರಾಜ್ಯ ಪ್ರಧಾನಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಕೊರೋನಾ ಬಂದಾಗ ತಾಂಬೂಲ ಪ್ರಶ್ನೆ ಕೇಳುವವರು ಎಲ್ಲಿ ಹೋಗಿದ್ರು ಅಂತ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ:  Malali Mosque: ಮಳಲಿ ದರ್ಗಾ ವಿಚಾರವನ್ನು ಶಾಂತಿಯಿಂದ ಮುಗಿಸಲು ನಿರ್ಧಾರ; ಭರತ್ ಶೆಟ್ಟಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಏನಾಯ್ತು?


ಎಲ್ಲೋ ಮಸೀದಿಯೊಂದರ ಜಾಗದಲ್ಲಿ ದೇವರಿದ್ದಾನೆ ಅಂತ ತಾಂಬೂಲ ಪ್ರಶ್ನೆ ಬಂದಿದೆ. ಆದರೆ ದೇವರು ಎಲ್ಲಾ ಕಡೆ ಇದ್ದಾನೆ. ಹಾಗಂತ ಜಿಲ್ಲಾಡಳಿತ, ಕಚೇರಿ ಎಸ್ಪಿ ಕಚೇರಿ ಅದನ್ನೆಲ್ಲಾ ದೇವಸ್ಥಾನ ಮಾಡೋಕೆ ಹೋಗ್ತಿರಾ ಅಂತ ಪ್ರಶ್ನಿಸಿದ್ದಾರೆ.

Published by:Mahmadrafik K
First published: