ಯುವಕರಿಂದ ಗೋವು ಆಧಾರಿತ ಸ್ವದೇಶಿ ವಸ್ತು ತಯಾರಿಕೆ : ರಾಜೀವ್ ದೀಕ್ಷಿತ್​ರೇ ಇವರಿಗೆ ಪ್ರೇರಣೆ

ಗೋವಿನ ಸಗಣಿ ಮತ್ತು ಗೋ ಮೂತ್ರಗಳಿಂದ ಹಲವು ಉತ್ಪನ್ನಗಳಾದ ಊದಿನಕಡ್ಡಿ, ಧೂಪ, ಹಲ್ಲಿನ ಪುಡಿ, ಸ್ಕೀನ್ ಸಾಬೂನು, ಪಿನಾಯಿಲ್, ಮೊಬೈಲ್ ಬಿಸಿ ತಡೆಯಲು ಪ್ಯಾಡ್ ಗಳನ್ನು ಸೇರಿ 12 ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ಗೋವಿನ ಸಗಣಿ ಮತ್ತು ಗೋ ಮೂತ್ರಗಳಿಂದ ಹಲವು ಉತ್ಪನ್ನಗಳು

ಗೋವಿನ ಸಗಣಿ ಮತ್ತು ಗೋ ಮೂತ್ರಗಳಿಂದ ಹಲವು ಉತ್ಪನ್ನಗಳು

  • Share this:
ರಾಯಚೂರು (ಫೆ.11) :  ಇವತ್ತು ಎಲ್ಲಾ ಕಡೆ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ಅದರಲ್ಲಿಯೂ ಗೋವುಗಳಿಗೆ ಪೂಜನೀಯ ಭಾವನೆ ಇದೆ, ಗೋವುಗಳಿಂದ ದಿನನಿತ್ಯ ಬಳಕೆಯ ವಸ್ತುಗಳ ತಯಾರಿಕೆ ಮಾಡಿ ಅವುಗಳಿಂದಲೂ ಆದಾಯ ನಿರೀಕ್ಷಿಸಲಾಗುತ್ತಿದೆ. ರಾಜೀವ್ ದೀಕ್ಷಿತರು ಮಾತುಗಳಿಂದ ಪ್ರೇರಣೆಗೊಂಡ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಜಂಬಲದಿನ್ನಿಯ ಮೂರು‌ ಜ‌ನ ಯುವಕರು ಗೋವು ಆಧಾರಿತ ಸ್ವದೇಶಿ ವಸ್ತುಗಳ ತಯಾರಿಕೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಸಿರವಾರ ತಾಲೂಕಿನ ಜಂಬಲದಿನ್ನಿ ಗ್ರಾಮದ ಡಾ.ಅಶೋಕ, ಸುರೇಶಗೌಡ,ಅಮರೇಗೌಡ ಮತ್ತು ಸ್ನೇಹಿತರ ಬಳಗ 3 ವರ್ಷದ ಹಿಂದೆ 3 ಹಸುಗಳಿಂದ ಗೋ ಶಾಲೆ ಪ್ರಾರಂಭ ಮಾಡಿ. ಇವರ ಗೋ‌ಶಾಲೆಯಲ್ಲಿ ದೇಶಿಯ ತಳಿಗಳಾದ ದೇವಣಿ, ಕಾಂಕ್ರೇಜ್, ಓಂಗೋಲ್, ಮಲೆನಾಡು ಗಿಡ್ಡ ಸೇರಿದಂತೆ ವಿವಿಧ ತಳಿಯ ಸುಮಾರು 30 ಹಸುಗಳು  ಸಾಕಾಣಿಕೆ ಮಾಡುತ್ತಿದ್ದಾರೆ. ಬೇರೆ ಬೇರೆ ಊರುಗಳಿಗೆ ಭೇಟಿ ನೀಡಿ ಗೋವಿನ ಉತ್ಪನ್ನಗಳನ್ನು ಹೇಗೆ ಮಾಡಬೇಕು ಎಂದು ಮಾಹಿತಿ ಪಡೆದ ಕಳೆದ ಒಂದು ವರ್ಷದ ಶ್ರಮದಿಂದ ಫಲವಾಗಿ. 6 ತಿಂಗಳಿಂದ ಗೋ ಮೂತ್ರದಿಂದ ಆರ್ಕ ತಾವೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಗೋವಿನ ಸಗಣಿ ಮತ್ತು ಗೋ ಮೂತ್ರಗಳಿಂದ ಹಲವು ಉತ್ಪನ್ನಗಳಾದ ಊದಿನಕಡ್ಡಿ, ಧೂಪ, ಹಲ್ಲಿನ ಪುಡಿ, ಸ್ಕೀನ್ ಸಾಬೂನು, ಪಿನಾಯಿಲ್, ಮೊಬೈಲ್ ಬಿಸಿ ತಡೆಯಲು ಪ್ಯಾಡ್ ಗಳನ್ನು ಸೇರಿ 12 ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ.

ನಗರ ಪ್ರದೇಶಗಳಲ್ಲಿ ವಾಯುವ್ಯ ಮಾಲಿನ್ಯ ಪರಿಸರ ಹಾಳಾಗಿದ್ದು ಮತ್ತು ರಾಸಾಯನಿಕ ಮಿಶ್ರಣ ಮಾಡಿದ ಧೂಪ, ಉದಿನಕಡ್ಡಿ ಉಪಯೋಗಿಸಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದರಿಂದ ಇವರ ಗೋ ವಸ್ತುಗಳನ್ನು ಹೈದರಾಬಾದ್, ಬೆಂಗಳೂರು, ಹುಬ್ಬಳಿ ಸೇರಿದಂತೆ ಅನೇಕ ರಾಜ್ಯಗಳಿಂದ ಧೂಪ ಮತ್ತು ಉದಿನಕಡ್ಡಿಗೆ ಬೇಡಿಕೆ ಇದೆ ಎನ್ನುತ್ತಾರೆ.

ಇದನ್ನೂ ಓದಿ :  ಅನಾಥಾಶ್ರಮದಲ್ಲಿ ಬೆಳೆದ ಯುವತಿಗೆ ಬಾಳು ಕೊಟ್ಟ ಯುವಕ

ಇಲ್ಲಿಯವರೆಗೆ ಸುಮಾರು 10 ರಿಂದ 12 ಲಕ್ಷ ರೂಪಾಯಿಗೂ ಹೆಚ್ಚು ಬಂಡವಾಳ ಹಾಕಲಾಗಿದೆ. ಆದರೆ ಈಗ ಜನರಲ್ಲಿ ಇದರ ಬಗ್ಗೆ ಜಾಗೃತಿ ಬರುತ್ತಿರುವುದರಿಂದ ಬೇಡಿಕೆ ಇದೆ. ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿ ಲಾಭ ಬರುತ್ತಿದೆ. ಇನ್ನು ತಮ್ಮ ಹೊಲಗಳಿಗೆ ರಾಸಾಯನಿಕ ಸಿಂಪರಣೆ ಕಡಿಮೆ ಮಾಡಿ ತಾವೇ ತಯಾರಿಸಿದ  ಔಷಧಿಗಳನ್ನು ಬಳಸುತ್ತಿದ್ದಾರೆ. ಎರೆಹುಳಗಳ ತೊಟ್ಟಿ ಮಾಡಿ ಎರೆಹುಳ ಗೊಬ್ಬರ ತಯಾರಿಕೆ ಮಾಡುತ್ತ ಗ್ರಾಮದಲ್ಲಿ ಸಾವಯವ ಕೃಷಿಗೆ ಒತ್ತು ನೀಡುವುದರ ಜೊತೆಗೆ ಜನರಲ್ಲಿ‌ ಜಾಗೃತಿ ಮೂಡಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಸಹ ಅವರಿಗೆ ಸಹಕಾರ ನೀಡುತ್ತಿದ್ದಾರೆ.

ಸ್ಥಳೀಯವಾಗಿ ತಯಾರಿಸುವ ಸ್ವದೇಶಿ ವಸ್ತುಗಳ ತಯಾರಿಕೆ ಹಾಗೂ ಮಾರಾಟ ಮಾಡುತ್ತಿದ್ದಾರೆ. ಹಿಂದುಳಿದ ಪ್ರದೇಶದಲ್ಲಿ ಸ್ವದೇಶಿ ವಸ್ತುಗಳಿಂದ ಸ್ಥಳೀಯವಾಗಿ ಉದ್ಯೋಗ ಕಂಡು ಕೊಳ್ಳುವುದಕ್ಕೆ ಜಂಬಲದಿನ್ನಿಯ ಯುವಕರು ಮಾದರಿಯಾಗಿದ್ದಾರೆ.
First published: