ಜಾಲತಾಣದಲ್ಲಿ ಹೆಚ್ಚುತ್ತಿದೆ ವಿಡಿಯೋ ಕ್ರೇಜ್​: ಕೆಆರ್​ಎಸ್​ನಿಂದ ಬಂತು ಮತ್ತೊಂದು ವಿಡಿಯೋ

news18
Updated:July 17, 2018, 5:27 PM IST
ಜಾಲತಾಣದಲ್ಲಿ ಹೆಚ್ಚುತ್ತಿದೆ ವಿಡಿಯೋ ಕ್ರೇಜ್​: ಕೆಆರ್​ಎಸ್​ನಿಂದ ಬಂತು ಮತ್ತೊಂದು ವಿಡಿಯೋ
news18
Updated: July 17, 2018, 5:27 PM IST
ನ್ಯೂಸ್​ 18 ಕನ್ನಡ

ಮೈಸೂರು (ಜುಲೈ 17): ನಿನ್ನೆಯಷ್ಟೇ ಹಾಸನದ ಹುಡುಗಿ ತಮ್ಮೂರಿನ ಮಳೆ-ಬೆಳೆಯ ಬಗ್ಗೆ ಬಣ್ಣನೆ ಮಾಡುತ್ತ, ಸಿಎಂ ಕುಮಾರಸ್ವಾಮಿಯವರನ್ನು ಹೊಗಳಿ ಅಟ್ಟಕ್ಕೇರಿಸಿದ್ದ ವಿಡಿಯೋ ವೈರಲ್​ ಆಗಿತ್ತು. ಇಂದು ಕೆಆರ್​ಎಸ್​ ಡ್ಯಾಮ್​ನ ನೀರಿನ ಕಲರವದ ಜೊತೆಗೇ ವಿಡಿಯೋ ಮಾಡಿ ಕಳುಹಿಸಿರುವ ಲೋಕೇಶ್​ ಎಂಬ ವ್ಯಕ್ತಿಯ ವಿಡಿಯೋ ಸದ್ದು ಮಾಡುತ್ತಿದೆ.

ಜನರೇ ಹಾಗೆ... ತಾವು ಹೇಗಾದರೂ ಪ್ರಸಿದ್ಧಿ ಗಳಿಸಬೇಕೆಂದು ಏನೇನೋ ಪ್ರಯತ್ನ ಮಾಡುತ್ತಾರೆ. ಕಳೆದ ವಾರ ಕೊಡಗಿನ ಹುಡುಗ ರಾಜ್ಯ ಸರ್ಕಾರವನ್ನು ಟೀಕಿಸಿ ಮಾಡಿದ್ದ ವಿಡಿಯೋ ವೈರಲ್​ ಆಗಿತ್ತು. ನಿನ್ನೆ ಹೆಚ್ಡಿಕೆ ಸರ್ಕಾರವನ್ನು ಹೊಗಳಿ ಮಾಡಿದ ವಿಡಿಯೋ ಕೂಡ ಸಾಕಷ್ಟು ಶೇರ್​ ಆಗಿತ್ತು. ವಿಡಿಯೋ ಮಾಡಿ ಯೂಟ್ಯೂಬ್​ನಲ್ಲಿ ಬಿಟ್ಟರೆ ಸುಲಭವಾಗಿ ಪ್ರಸಿದ್ಧಿ ಗಳಿಸಬಹುದು, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕ್ರೇಜ್​ನಿಂದ ಕಳೆದೊಂದು ವಾರದಿಂದ ತಮ್ಮೂರಿನ ಸಮಸ್ಯೆ, ರಾಜ್ಯ ಸರ್ಕಾರದ ಉತ್ತಮ ಕೆಲಸ, ವಿಫಲತೆಗಳನ್ನು ವಿಡಿಯೋ ಮಾಡಿ ಹರಿಬಿಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.ಸೆಲ್ಫೀ ಕ್ಯಾಮೆರಾ ಬಂದ ಹೊಸತರಲ್ಲಿ ಸೆಲ್ಫೀ ಕ್ರೇಜ್​ ಬಂತು, ನಂತರ ಡಬ್​ಸ್ಮಾಶ್​, ಮ್ಯೂಸಿಕಲಿಯಂತಹ ಆ್ಯಪ್​ಗಳ ಕ್ರೇಜ್​ ಶುರುವಾಯಿತು. ಇದೀಗ ಅದೆಲ್ಲ ಏನೂ ಬೇಡ ಎಂಬಂತೆ ಮೊಬೈಲ್​ ಕ್ಯಾಮೆರಾ ಮೂಲಕ ಆನ್​ಸ್ಪಾಟ್​ ವಿಡಿಯೋ ಚಿತ್ರೀಕರಿಸಿ ಅಪ್​ಲೋಡ್​ ಮಾಡುತ್ತಿದ್ದಾರೆ.

ಅದಕ್ಕೆ ಉದಾಹರಣೆಯೆಂಬಂತೆ ಇಂದು ಮೈಸೂರಿನ ಲೋಕೇಶ್​ ಎಂಬ ಯುವಕ ಕೆಆರ್​ಎಸ್​ಗೆ ಬಾಗಿನ ನೀಡಲು ಮೈಸೂರಿನ ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರನ್ನು ಆಹ್ವಾನಿಸಬೇಕು, ಸಿಎಂ ಕುಮಾರಸ್ವಾಮಿಯವರ ಜೊತೆಗೆ ರಾಜವಂಶಸ್ಥರಿಗೂ ಅವಕಾಶ ನೀಡಬೇಕೆಂಬ ಬೇಡಿಕೆಯಿಟ್ಟಿದ್ದಾರೆ. ಇದೇ ಮನಸ್ಥಿತಿ ಮುಂದುವರಿದರೆ ಮುಂದೆ ತಮ್ಮ ಕೈಯಲ್ಲಿರುವ ಮೊಬೈಲಿನ ಸೆಲ್ಫೀ ಕ್ಯಾಮೆರಾದಿಂದ ಪ್ರತಿಯೊಬ್ಬರೂ ತಮ್ಮ ಮನೆಯ ಸಂಕಷ್ಟ, ಸಂಭ್ರಮ, ಊರಿನ ಹಬ್ಬ-ಸಂಭ್ರಮ-ಸಮಸ್ಯೆಗಳನ್ನು ಅಪ್​ಡೇಟ್​ ಮಾಡತೊಡಗುವುದರಲ್ಲಿ ಅನುಮಾನವಿಲ್ಲ.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ