• Home
  • »
  • News
  • »
  • state
  • »
  • Raj B Shetty: ಸರ್ಕಾರಿ ಶಾಲೆಗೆ ಹೊಸ ರೂಪ​; ಮಕ್ಕಳ ಜೊತೆ ಕೇಕ್​ ಕತ್ತರಿಸಿ ರಾಜ್.ಬಿ ಶೆಟ್ಟಿ ಸಂಭ್ರಮ

Raj B Shetty: ಸರ್ಕಾರಿ ಶಾಲೆಗೆ ಹೊಸ ರೂಪ​; ಮಕ್ಕಳ ಜೊತೆ ಕೇಕ್​ ಕತ್ತರಿಸಿ ರಾಜ್.ಬಿ ಶೆಟ್ಟಿ ಸಂಭ್ರಮ

ಜಾಂಬಳೆ ಶಾಲೆಯಲ್ಲಿ ಮೇಕ್ ಸಮ್ ಒನ್ ಸ್ಮೈಲ್ ತಂಡ

ಜಾಂಬಳೆ ಶಾಲೆಯಲ್ಲಿ ಮೇಕ್ ಸಮ್ ಒನ್ ಸ್ಮೈಲ್ ತಂಡ

ಮೇಕ್ ಸಮ್ ಒನ್ ಸ್ಮೈಲ್ ತಂಡವು 1.20 ಲಕ್ಷ ರೂ. ವೆಚ್ಚದಲ್ಲಿ ಜಾಂಬಳೆ ಶಾಲೆಗೆ ಬಣ್ಣ ಬಳಿದು ಹೊಸ ರೂಪ ಕೊಟ್ಟಿದೆ. ಮೇಕ್ ಸಮ್ ಒನ್ ಸ್ಮೈಲ್ ತಂಡ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • News18 Kannada
  • Last Updated :
  • Karnataka, India
  • Share this:

ಚಿಕ್ಕಮಗಳೂರು : ಕುದುರೆಮುಖ ಸಮೀಪದಲ್ಲಿರುವ ಪುಟ್ಟ ಹಳ್ಳಿ ಜಾಂಬಳೆ (Jambale) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ (Govt Primary School) ಮಕ್ಕಳ ದಿನಾಚರಣೆ ಸಂಭ್ರಮ ಮುಗಿಲು ಮುಟ್ಟಿತ್ತು. ಮಕ್ಕಳ ಖುಷಿಗೆ ಕಾರಣ ಮಂಗಳೂರಿನ ಮೇಕ್ ಸಮ್‍ಒನ್ ಸ್ಮೈಲ್ ಟೀಮ್ (Make Someone Smile)​, ಈ ತಂಡ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಯೋಜಿಸಿತ್ತು. ಮೇಕ್ ಸಮ್ ಒನ್ ಸ್ಮೈಲ್ ತಂಡವು 1.20 ಲಕ್ಷ ರೂ. ವೆಚ್ಚದಲ್ಲಿ ಜಾಂಬಳೆ ಶಾಲೆಗೆ ಬಣ್ಣ ಬಳಿದು ಜೊತೆಗೆ ಅಲ್ಲಲ್ಲಿ ಸಾಧಕರ ಚಿತ್ರಗಳನ್ನು ಕೂಡ ಚಿತ್ರಿಸಿ ಇಡೀ ಶಾಲೆಯ ಹೊರ ರೂಪವನ್ನೇ ನೀಡಿದೆ.


ವಿಜೇತ ಮಕ್ಕಳಿಗೆ ಬಹುಮಾನ 


ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚಿತ್ರನಟ ರಾಜ್. ಬಿ ಶೆಟ್ಟಿ ಮತ್ತು ನಿರ್ಮಾಪಕ ರವಿ ರೈ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಡಗರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮುಖಂಡರಾದ ರಾಧಾಕೃಷ್ಣ, ಸತೀಶ್‍ಚಂದ್ರ, ವಲಯ ಅರಣ್ಯಾಧಿಕಾರಿ ಜ್ಯೋತಿ, ಪಂಚಾಯಿತಿ ಸದಸ್ಯೆ ಕಾಮಾಕ್ಷಿ , ರೈತ ಸಂಘದ ಜಯಂತ್ ಗೌಡ, ಸುರೇಶ್ ಗೌಡ, ಶಾಲಾಭಿವೃದ್ಧಿ ಸಮಿತಿಯ ಮಹೇಂದ್ರ, ಸರಿತಾ ಇದ್ದರು.
ಈ ಶಾಲೆಗೆ ಖಾಯಂ ಶಿಕ್ಷಕರೇ ಇಲ್ಲ


ಶಾಲೆಯಲ್ಲಿ 43 ಮಕ್ಕಳು ಕಲಿಯುತ್ತಿದ್ದಾರೆ. ಎಲ್ಲ ಸೌಲಭ್ಯ ಇದ್ದರೂ ಖಾಯಂ ಶಿಕ್ಷಕರೇ ಇಲ್ಲದೆ ಅತಿಥಿ ಶಿಕ್ಷಕರೇ ಶಾಲೆ ನಿರ್ವಹಿಸುತ್ತಿರುವ ಬಗ್ಗೆ ನೆರೆದವರು ಬೇಸರ ವ್ಯಕ್ತಪಡಿಸಿದರು.


ರಾಜ್ಯದಾದ್ಯಂತ 7,601 ಶಾಲಾ ಕೊಠಡಿ


ಕಲಬುರಗಿಯ ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಯಾಳ ತಾಂಡಾದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು  ವಿವೇಕ ಹೆಸರಿನಲ್ಲಿ ರಾಜ್ಯದಾದ್ಯಂತ 7,601 ಶಾಲಾ ಕೊಠಡಿಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಸುಮಾರು 50 ಕೊಠಡಿಗಳು ಮಂಜೂರಾಗಲಿವೆ ಎಂದು ಹೇಳಿದ್ದಾರೆ.


ಪ್ರತಿ ವರ್ಷ 8 ಸಾವಿರ ಕೊಠಡಿ ನಿರ್ಮಾಣ


ಶಿಕ್ಷಣ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಬೇಕು ಎಂಬುದು ನಮ್ಮ ಸಂಕಲ್ಪವಾಗಿತ್ತು. ಅದಕ್ಕಾಗಿ, ನೂತನ ಕೊಠಡಿಗಳ ನಿರ್ಮಾಣವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ಎರಡು ವರ್ಷದ ಪ್ರತಿ ವರ್ಷ 8 ಸಾವಿರ ಕೊಠಡಿ ನಿರ್ಮಾಣವಾದರೆ ಮಕ್ಕಳಿಗೂ ಕೊಠಡಿಗಳಲ್ಲಿ ಕೂರಲು ಜಾಗ ಸಿಗುತ್ತದೆ ಎಂದರು.


ಇದನ್ನೂ ಓದಿ: Basavaraj Bommai: ಹಾಲಿನ ಪರಿಷ್ಕೃತ ದರ ಏರಿಕೆಗೆ ಸಿಎಂ ತಡೆ; ಸಭೆ ನಡೆಸಿ ನಿರ್ಧಾರ ಎಂದ್ರು ಬೊಮ್ಮಾಯಿ


ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಸೂಚನೆ


ಒಂದು ದಿನ ಜನತಾ ದರ್ಶನದ ಸಂದರ್ಭದಲ್ಲಿ ದಂಪತಿ ತಮ್ಮ ಪುತ್ರಿಯು ಶಾಲೆಯಲ್ಲಿ ಶೌಚಾಲಯವಿರದ ಕಾರಣ ಮೂತ್ರಕ್ಕೆ ಹೋಗುತ್ತಿಲ್ಲ. ಜಲಬಾಧೆ ತೀರಿಸಿಕೊಳ್ಳಲು ಇಡೀ ದಿನ ಅವಕಾಶವಿರದ ಕಾರಣ ಮೂತ್ರಿಪಿಂಡಕ್ಕೆ ಹಾನಿ ಆಗುತ್ತಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವಂತೆ ಅವರು ಕೋರಿದ ದಿನದಿಂದ ಸಂಕಲ್ಪ ಮಾಡಿ ಬರುವ ಆಗಸ್ಟ್ 15 ರೊಳಗೆ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಸೂಚಿಸಿದ್ದೇನೆ ಎಂದರು.


ರೈತರು, ಕೂಲಿ ಕಾರ್ಮಿಕರು ಹಾಗೂ ದಲಿತರ ಮಕ್ಕಳು, ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ವಿವಿಧ ಯೋಜನೆಗಳಿಗಾಗಿ ₹ 30 ಸಾವಿರ ಕೋಟಿ ಮೀಸಲಿಡಲಾಗಿದೆ. ಸರ್ವಶಿಕ್ಷಣ ಅಭಿಯಾನ ಹೆಸರಿನಲ್ಲಿ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 10 ವರ್ಷ ಸಾವಿರಾರು ಕೋಟಿ ಅನುದಾನ ನೀಡಿದ್ದರು ಎಂದರು.

Published by:ಪಾವನ ಎಚ್ ಎಸ್
First published: