ಬೆಂಗಳೂರು (ಜ. 14): ಮಕರ ಸಂಕ್ರಾಂತಿಯ ಇಂದು ಸೂರ್ಯ ತನ್ನ ಪಥವನ್ನು ಬದಲಾಯಿಸುವ ದಿನ. ಇಂದು ಇಂದು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಾಯಿಸಲಿತ್ತಾನೆ. ಈ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯ ಗವಿ ಗಂಗಾಧರನಿಗೆ ತನ್ನ ರಶ್ಮಿ ಮೂಲಕ ಸ್ಪರ್ಶಿಸುತ್ತಾನೆ. ಈ ಐತಿಹಾಸಿಕ ಕ್ಷಣಕ್ಕಾಗಿ ಅನೇಕರು ಕಾದು ಕುಳಿತಿರುತ್ತಾರೆ. ಆದರೆ, ಈ ಬಾರಿ ಈ ದೃಶ್ಯ ಕಣ್ತುಂಬಿಕೊಳ್ಳುವ ಅನೇಕರ ಕನಸಿಗೆ ಕೊಂಚ ನಿರಾಸೆ ಮೂಡಿದೆ. ಕಾರಣ ಸೂರ್ಯ ರಶ್ಮಿ ಅಭಿಷೇಕ ಸಂದರ್ಭದಲ್ಲಿ ಮೋಡ ಅಡ್ಡವಾದ ಪರಿಣಾಮ ಸೂರ್ಯ ಅಗೋಚರವಾಗಿ ಲಿಂಗ ಸ್ಪರ್ಶಿಸಿದ್ದಾನೆ. ಪ್ರತಿ ಸಂಕ್ರಾಂತಿ ಸಮುದಲ್ಲಿ ಇಂದು 5.25 ರಿಂದ 5.27 ಕ್ಕೆ ಸೂರ್ಯ ರಶ್ಮಿ ಸ್ಪರ್ಶ ವಾಗುತ್ತದೆ. ಇಂದು ಕೂಡ ಇದೇ ಸಮಯಕ್ಕೆ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶಿಸಬೇಕಿತ್ತು. ಆದರೆ, ಮೋಡ ಕವಿದ ವಾತಾವರಣದಿಂದ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳಲಿಲ್ಲ.
ಕಳೆದೊಂದುವಾರದಿಂದ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಿರುವ ಹಿನ್ನಲೆ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿಯೂ ಕಳೆದ ವಾರ ಅಕಾಲಿಕ ಮಳೆಯಾಗಿತ್ತು. ಅಲ್ಲದೆ ಕಳೆದೆರಡು ಮೂರು ದಿನಗಳಿಂದ ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇದೆ. ಈ ಹಿನ್ನಲೆ ಸೂರ್ಯ ರಶ್ಮಿ ಅಭಿಷೇಕಕ್ಕೆ ಮೋಡ ಅಡ್ಡವಾಗಿದೆ.
ಇದನ್ನು ಓದಿ: ಸಂಕ್ರಾಂತಿ ಪ್ರಯುಕ್ತ ಗೋ ಪೂಜೆ ನೆರವೇರಿಸಿದ ಡಿಕೆಶಿ ದಂಪತಿ
ಇಂದು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಾಯಿಸಲಿದ್ದಾನೆ. ಸೂರ್ಯ ಪಥ ಬದಲಿಸುವಾಗ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯಿಂದ ಪುಳಕಿತನಾದ ಶಿವನನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಮಕರ ಸಂಕ್ರಾಂತಿ ಹಿನ್ನಲೆ ಇಂದು ಬೆಳಗ್ಗಿನಿಂದಲೇ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ಭಕ್ತರು ದರ್ಶನಕ್ಕೆ ಬರುತ್ತಿದ್ದು, ವಿಶೇಷ ಪೂಜೆ ಹಿನ್ನೆಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಂದು ಬೆಳಗ್ಗೆ 7ರಿಂದ ಪಂಚಾಮೃತ, ರುದ್ರಾಭಿಷೇಕವಿರಲಿದ್ದು, ಶಿವನ ಮಂಗಳಾರತಿಗೆ ಮುಂಜಾನೆಯಿಂದಲೇ ಭಕ್ತರ ದಂಡು ಕಾದು ನಿಂತಿದೆ. ಶಿವಲಿಂಗದ ಮೇಲೆ ಬೀಳುವ ಸೂರ್ಯರಶ್ಮಿಯನ್ನು ಕಣ್ತುಂಬಿಕೊಳ್ಳಲು ಗವಿ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಪೆಂಡಾಲ್ ಹಾಕಿ, ಎಲ್ಇಡಿ ಟಿವಿ ಅಳವಡಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ದೇವಸ್ಥಾನದೊಳಗೆ ಬಿಡಲಾಗುತ್ತಿದೆ.
(ವರದಿ: ಆಶಿಕ್ ಮುಲ್ಕಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ