ಸಂಕ್ರಾಂತಿ ವಿಶೇಷ | ಉತ್ತರಾಯಣ ಪುಣ್ಯಕಾಲದಲ್ಲಿ ಲಕ್ಷ್ಮೀ ಪೂಜೆ ವಿಶೇಷ ಯಾಕೆ ಗೊತ್ತಾ..? ಎಳ್ಳು ಬೆಲ್ಲದ ಮಹತ್ವ ಗೊತ್ತಾ?

ಹಿಂದೂ ಸಂಸ್ಕೃತಿಯಲ್ಲಿ ಅಳವಡಿಸಿಕೊಂಡ ಸರ್ವ ಆಚರಣೆಗಳಿಗೂ ಒಂದು ಅರ್ಥ ಇದೆ. ಮತ್ತು ಸರ್ವ ಕರ್ಮಗಳೂ ಜ್ಞಾನದಲ್ಲೇ ಪರಿಸಮಾಪ್ತಿ ಹೊಂದುವ ವಿಷಯವನ್ನ ಅರಿತು ಇಂಥಾ ಆಚರಣೆಗಳು ಬೆಳಗಿವೆ. ಅಂಥಾ ಪರ್ವ ಆಚರಣೆಯಲ್ಲಿ ಈ ಸಂಕ್ರಾಂತಿ ಒಂದು.

news18-kannada
Updated:January 15, 2020, 9:03 AM IST
ಸಂಕ್ರಾಂತಿ ವಿಶೇಷ | ಉತ್ತರಾಯಣ ಪುಣ್ಯಕಾಲದಲ್ಲಿ ಲಕ್ಷ್ಮೀ ಪೂಜೆ ವಿಶೇಷ ಯಾಕೆ ಗೊತ್ತಾ..? ಎಳ್ಳು ಬೆಲ್ಲದ ಮಹತ್ವ ಗೊತ್ತಾ?
ಸಂಕ್ರಾತಿ ಹಬ್ಬ
  • Share this:
ಉತ್ತರಾಯಣ ಪರ್ವ ಕಾಲದಲ್ಲಿ ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನ ಮಾಡ್ತಾರೆ. ಆಕೆಯನ್ನ ಇಕ್ಷು ದಂಡಿ ಅಂತಾರೆ. ಅಂದರೆ ಕಬ್ಬನ್ನ ಹಿಡಿದಿರುವವವಳು ಅಂತ. ಅಂಥಾ ಲಕ್ಷ್ಮಿಯನ್ನ ಆರಾಧಿಸಬೇಕು. ಲಕ್ಷ್ಮೀ ಅಂದ್ರೆ " ಲಕ್ಷ್ಯತಿ ಸರ್ವಂ ಸದಾ " ಅಂತ. ಯಾರು ಸರ್ವ ಕಾಲಕ್ಕೂ ಸರ್ವವನ್ನೂ ನೋಡುತ್ತಾಳೋ ಅವಳೇ ಲಕ್ಷ್ಮಿ. ಎಲ್ಲವನ್ನೂ ನೋಡುವವಳು ಅಂದರೆ ಸರ್ವ ಸಮಾನತೆ ಅಂತ. ಅಂದಹಾಗೆ ನಾವುಗಳು ಎಳ್ಳು ಬೆಲ್ಲ ಹಂಚೋದೇ ಈ ಕಾರಣಕ್ಕೆ. ಎಳ್ಳಿನಲ್ಲಿ ಲಕ್ಷ್ಮಿ ವಾಸವಿರ್ತಾಳೆ. ಎಳ್ಳನ್ನ ಹಂಚುವುದರಿಂದ ಸಂಪತ್ತನ್ನ ಹಂಚಿದಂತಾಗತ್ತೆ. ಲಕ್ಷ್ಮಿ ಎಲ್ಲಿಯೂ ನಿಲ್ಲುವವಳಲ್ಲ. ಹಾಗಾಗಿ ಆಕೆಯನ್ನ ಎಲ್ಲರಿಗೂ ಸಮರ್ಪಿಸಿ ಇತರರಲ್ಲಿ ಸಂಪತ್ ವೃದ್ಧಿ ಆಗಲಿ ಅಂತ ಆಶಿಸುವ ಕ್ರಮ ಇದು. ಮತ್ತು ಆಕೆ ಇಕ್ಷುದಂಡಿ, ಇಕ್ಷು ಅಂದ್ರೆ ಕಬ್ಬು ಕಬ್ಬಿನಿಂದಲೇ ಬೆಲ್ಲ ಬಂದದ್ದು ಹಾಗಾಗಿ ಎಳ್ಳು-ಬೆಲ್ಲ ಸೇರಿಸಿ ಹಂಚುವ ಕ್ರಮ ನಮ್ಮಲ್ಲಿ ಬಂತು.

ಇದರ ಹೊರತಾಗಿ ಒಂದು ಸಾರ್ವತ್ರಿಕ ಅಭಿಪ್ರಾಯ ಇದೆ: ಎಳ್ಳು ದಾನ ಮಾಡಬಾರದು, ತಿಲದಾನ ಸ್ವೀಕರಿಸಿದರೆ ಪಾಪ ಬರತ್ತೆ ಅನ್ನೋದು. ಜ್ಞಾನಿನಿಯಾದವನಿಗೆ ಯಾವ ಪಾಪವೂ ಅಂಟುವುದಿಲ್ಲ. ಗೀತೆಯಲ್ಲಿ ಹೇಳಿದಂತೆ : ಲಿಪ್ಯತೇ ನ ಸ ಪಾಪೇನ ಪದ್ಮ ಪತ್ರಮಿವಾಂಬಸ " ಅಂದರೆ, ತಾವರೆ ಎಲೆಗೆ ನೀರು ಹೇಗೆ ಅಂಟುವುದಿಲ್ಲವೋ ಹಾಗೆ ಜ್ಞಾನಿಗೆ ಪಾಪ ಅಂಟುವುದಿಲ್ಲ ಅಂತ. ಹಾಗಾಗಿ ಈ ಮೂಲಕವಾದರೂ ಸರ್ವರೂ  ಜ್ಞಾನಿಗಳಾಗಲಿ ಜ್ಞಾನಿಯಾದವರು ಎಳ್ಳುಬೆಲ್ಲ ಹಂಚಲಿ ಅನ್ನೋ ಉದ್ದಿಶ್ಯವೂ ಈ ಹಬ್ಬದಲ್ಲಿದೆ. ಆದರೆ ಇತ್ತೀಚೆಗೆ ಬರೀ ಎಳ್ಳಿನ ಹಂಚಿಕೆ ಅಷ್ಟೇ ಆಗ್ತಾ ಇಲ್ಲ. ಅದರ ಜೊತೆ ಕಡಲೆ, ಬೆಲ್ಲ, ಕೊಬರಿ ಇತ್ಯಾದಿಗಳನ್ನೂ ಹಂಚುತ್ತಾರೆ ಯಾಕೆ ಅನ್ನೋ ವಿಚಾರ ಕಾಡತ್ತೆ ಅಲ್ವಾ, ಬರೀ ಎಳ್ಳನ್ನ ತಿಂದರೆ ಕಫ, ಪಿತ್ತ ಹೆಚ್ಚಾಗಿ ಆರೋಗ್ಯ ಕೆಡತ್ತೆ, ಹಾಗಾಗಿ ಬೆಲ್ಲ, ಕೊಬರಿ ಬೆರೆಸಿ ತಿಂದ್ರೆ ಆರೋಗ್ಯಕ್ಕೆ ಪುಷ್ಟಿ, ತುಷ್ಟಿ ಹಾಗಾಗಿ ಅದರ ಸೇವನೆ ಒಳ್ಳೆದೇ ತರ್ಕ ಮಾಡುವ ಗೋಜು ಬೇಡ.

ಇಂಥಾ ಪರ್ವಕಾಲದಲ್ಲಿ ನಾವು ಆಚರಿಸಬೇಕಾದ ಸಾಂಪ್ರದಾಯಿಕ ಆಚರಣೆಗಳೂ ಕೆಲವಿವೆ. ಈ ದಿನದಲ್ಲಿ ಸುಗ್ಗಿ ಪೂಜೆ ಮಾಡ್ತಾರೆ. ಬೆಳೆದ ಫಲವೆಲ್ಲ ಕಟಾವಿಗೆ ಬಂದು ಅದನ್ನ ಪೂಜಿಸಿ ಹಂಚಿ ತಿನ್ನುವ ಸಂಭ್ರಮ ಜಾನಪದೀಯ. ಮತ್ತು ಗೋವಿನ ಪೂಜೆಗಳನ್ನೂ ಮಾಡ್ತಾರೆ. ಹೀಗೆ ಹಿಂದೂ ಸಂಸ್ಕೃತಿಯಲ್ಲಿ ಅಳವಡಿಸಿಕೊಂಡ ಸರ್ವ ಆಚರಣೆಗಳಿಗೂ ಒಂದು ಅರ್ಥ ಇದೆ. ಮತ್ತು ನಮ್ಮ ಸರ್ವ ಕರ್ಮಗಳೂ ಜ್ಞಾನದಲ್ಲೇ ಪರಿಸಮಾಪ್ತಿ ಹೊಂದುವ ವಿಷಯವನ್ನ ಅರಿತು ಇಂಥಾ ಆಚರಣೆಗಳು ಬೆಳಗಿವೆ. ಅಂಥಾ ಪರ್ವ ಆಚರಣೆಯಲ್ಲಿ ಈ ಸಂಕ್ರಾಂತಿ ಒಂದು. ಒಂದು ಅರ್ಥದಲ್ಲಿ ಚೈತ್ರಮಾಸವನ್ನ ಸ್ವಾಗತಿಸುವ ಅರ್ಥದಲ್ಲಿದೆ ಈ ಹಬ್ಬ. ಈ ವರ್ಷದ ಅಂತ್ಯ ಗುರುತಾಗಿ ಎಳ್ಳನ್ನ ಸ್ವೀಕರಿಸಿದರೆ ಚೈತ್ರಮಾಸದ ಪ್ರಾರಂಭದ ಗುರುತಾಗಿ ಬೆಲ್ಲವನ್ನ ( ಬೇವು ಬೆಲ್ಲದಲ್ಲಿ ) ಹಂಚಿ ಹಿಂದಿನ ವರ್ಷವನ್ನ ಕಳೆದು ಮುಂದಿನ ಸಿಹಿ ಜೀವನಕ್ಕೆ ಹಾದಿತೋರುವ ಹೊಸ್ತಿಲಿನಂತೆ ಬೆಳಗುವ ಈ ಸಂಕ್ರಾಂತಿ ಜೀವನದ ರಥವನ್ನ ಪರಮಾತ್ಮನೆಡೆಗೆ ಎಳೆಯುವ ಭಕ್ತರ ಅಂತರಂಗ ಬಹಿರಂಗಗಳ ಪ್ರತೀಕವಾಗಿದೆ.

ಲೇಖಕರು: ತಿಮಿರ ಸಂಹಾರಿ

(ವಿಶೇಷ ಸೂಚನೆ: ಇದು ಲೇಖಕರ ಅಭಿಪ್ರಾಯ, ನ್ಯೂಸ್18 ಅಭಿಪ್ರಾಯವಲ್ಲ)

 
 
First published: January 15, 2020, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading