• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಕರ ಸಂಕ್ರಾಂತಿ: ಶ್ರೀರಂಗಪಟ್ಟಣದಲ್ಲಿ ಲಕ್ಷ ದೀಪೋತ್ಸವಕ್ಕೆ ಇಂದು ಚಾಲನೆ

ಮಕರ ಸಂಕ್ರಾಂತಿ: ಶ್ರೀರಂಗಪಟ್ಟಣದಲ್ಲಿ ಲಕ್ಷ ದೀಪೋತ್ಸವಕ್ಕೆ ಇಂದು ಚಾಲನೆ

ಲಕ್ಷ ದೀಪೋತ್ಸವಕ್ಕೆ ಸಿದ್ಥತೆ

ಲಕ್ಷ ದೀಪೋತ್ಸವಕ್ಕೆ ಸಿದ್ಥತೆ

ಮಕರ ಸಂಕ್ರಮಣದ ಹಿನ್ನೆಲೆ ಯಲ್ಲಿ ಶ್ರೀರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆ  ಮತ್ತು ಶ್ರೀರಂಗನಿಗೆ ಬೆಣ್ಣೆ ಅಲಂಕಾರ ಸೇವೆ ಮಾಡಲಾಗುತ್ತದೆ.

  • Share this:

ಮಂಡ್ಯ (ಜ. 14):  ಮಕರ ಸಂಕ್ರಾಂತಿ ಅಂಗವಾಗಿ ಇಂದು ಶ್ರೀರಂಗಪಟ್ಟಣದಲ್ಲಿ ಲಕ್ಷ ದೀಪೋತ್ಸವ ಜರುಗಲಿದೆ. ಪ್ರತಿವರ್ಷ ಶ್ರೀರಂಗಪಟ್ಟಣದ ಶ್ರೀರಂಗನಾಥನ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವದ ಹಣತೆ ಬೆಳಗಿಸುವ ಸಂಪ್ರ ದಾಯವಿದೆ. ಅದರಂತೆ ಈ ಬಾರಿ ಕೂಡ ಕೊರೊನಾ ಆತಂಕದ ನಡುವೆ ಈ  ದೀಪೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗಿದೆ. ಸಂಜೆ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು. ದೇವಾಲಯದ ಮುಂಭಾಗ ಹಣತೆಗಳನ್ನು ಸಾಲಾಗಿ ಜೋಡಿಸಿ ಅಲಂಕಾರ ಮಾಡಲಾಗಿದೆ. ಲಕ್ಷ ದೀಪೋತ್ಸವ ಅಲಂಕಾರ ಸಮಿತಿಯ ಕಾರ್ಯಕರ್ತರು ಈಗಾಗಲೇ ಸಿದ್ಧತೆ ರೂಪು ರೇಷ ನಡೆಸಿದ್ದಾರೆ. ದೇವಾಲಯದ ಮುಂಭಾಗದಿಂದ ಸುಮಾರು 500 ಮೀ ದೂರದವರೆಗೆ ಸಾಲು ಸಾಲು ಮಣ್ಣಿನ ಹಣ ತೆಗಳ ಜೋಡಿಸಿಡಲಾಗಿದೆ. ಇಂದು ಮಧ್ಯಾಹ್ನ ಆ ಹಣತೆ ಗಳಿಗೆ ಬತ್ತಿ ಮತ್ತು ಎಣ್ಣೆಯನ್ನು ಹಾಕುವ ಕಾರ್ಯ ನಡೆಯಲಿದೆ. ಅಲ್ಲದೇ ದೇವಾಲಯದ‌ ಮುಂಭಾಗದಲ್ಲಿ ವಿದ್ಯುತ್ ದೀಪಗಳಿಂದ ಕೂಡ ಅಲಂಕಾರ ಮಾಡಿ ಲಕ್ಷ ದೀಪೋತ್ಸವಕ್ಕೆ ಮೆರಗು ನೀಡಲು ಸಿದ್ದತೆ ಮಾಡಿಕೊಳ್ಳ ಲಾಗಿದೆ.


ಇದರ ಜೊತೆಗೆ  ಮಕರ ಸಂಕ್ರಮಣದ ಹಿನ್ನೆಲೆ ಯಲ್ಲಿ ಶ್ರೀರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆ  ಮತ್ತು ಶ್ರೀರಂಗನಿಗೆ ಬೆಣ್ಣೆ ಅಲಂಕಾರ ಸೇವೆ ಮಾಡಲಾಗುತ್ತದೆ. ಉತ್ತರಾಯಣ ಕಾಲದ ಈ ಸಂದರ್ಭದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ಪ್ರತೀತಿ ಇದೆ. ಇದೇ ಕಾರಣದಿಂದ ಶ್ರೀರಂಗನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಸದ್ಯ ಕೊರೋನಾ ಪ್ರಕರಣಗಳು ಇಳಿಕೆಯಾಗಿರುವ ಹಿನ್ನಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನಲೆ ದೇವಾಯದ ಮುಂಭಾಗದಲ್ಲಿ ಕೊರೋನಾ ಮುನ್ನೆಚ್ಚರಿಕೆಯೊಂದಿಗೆ  ಸರತಿ ಸಾಲಿನ‌ ವ್ಯವಸ್ಥೆ ಮಾಡಿಕೊಳ್ಳ ಲಾಗಿದೆ.


ರಾತ್ರಿ ಲಕ್ಷ ದೀಪೋತ್ಸವಕ್ಕೆ ವೀಕ್ಷಣೆಗೆ ಜಿಲ್ಲೆಯ  ವಿವಿಧೆಡೆಯಿಂದ ಸಾವಿರಾರು ಜನರು ಶ್ರೀರಂಗಪಟ್ಟಣ ಕ್ಕೆ ಆಗಮಿಸಲಿದ್ದು ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಬಾರಿ ಕೂಡ ವಿಜೃಂಭಣೆ ಯಿಂದ ಲಕ್ಷ ದೀಪೋತ್ಸವ ಸಕಲ ಸಿದ್ದತೆಗಳು ಪೂರ್ಣಗೊಂಡಿದ್ದು, ಸಂಜೆ  ಸಂಜೆ 6 ಗಂಟೆಗೆ ಕ್ಷೇತ್ರದ ಶಾಸಕರ ಮೂಲಕ ಲಕ್ಷ  ದೀಪೋತ್ಸವಕ್ಕೆ ಚಾಲನೆ ಸಿಗಲಿದೆ.

top videos
    First published: