Makar Sankranti 2019: ಸುಗ್ಗಿಯ ಸಂಭ್ರಮದ ಸಂಕ್ರಾಂತಿ; ರಾಜ್ಯದಲ್ಲೆಡೆ ಅದ್ದೂರಿ ಆಚರಣೆ

ಪಂಚಾಂಗದ ಪ್ರಕಾರ ಸೂರ್ಯ ಮಕರರಾಶಿಯನ್ನು ಪ್ರವೇಶಿಸುವು ಸಂಕೇತವಾಗಿ ಆಚರಿಸುವ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ಇದೇ ಸಮಯದಲ್ಲಿ ರೈತರು ಬೆಳೆದ ಬೆಳಗಳು ಫಸಲು ಬಂದಿರುವ ಸುಗ್ಗಿ ಸಂಭ್ರಮ ಕೂಡ ಆಚರಿಸಲಾಗುತ್ತದೆ..

Seema.R | news18
Updated:January 15, 2019, 9:26 AM IST
Makar Sankranti 2019: ಸುಗ್ಗಿಯ ಸಂಭ್ರಮದ ಸಂಕ್ರಾಂತಿ; ರಾಜ್ಯದಲ್ಲೆಡೆ ಅದ್ದೂರಿ ಆಚರಣೆ
ಸಂಕ್ರಾಂತಿ ಸಂಭ್ರಮ
  • News18
  • Last Updated: January 15, 2019, 9:26 AM IST
  • Share this:
ಸಂಕ್ರಾಂತಿ ಸುಗ್ಗಿ ಎಂದರೆ ಸಾಕು ಎಲ್ಲೆಲ್ಲೂ ಹರ್ಷ. ಹಚ್ಚ ಹಸಿರಾಗಿ ಬೆಳೆದ ಪೈರಿನ ಸೊಬಗು. ಸುಗ್ಗಿಯ ಸಂಭ್ರಮದ ಜೊತೆ ಹುಗ್ಗಿ ಸವಿಯುವ ಹುರುಪು. ವರ್ಷದ ಮೊದಲ ಹಬ್ಬ ಸಂಕ್ರಾಂತಿ ಎಂದರೆ, ಮೊದಲು ನೆನಪಾಗುವುದು ಎಳ್ಳು-ಬೆಲ್ಲ. ಕಬ್ಬಿನ ಸಿಹಿ.

ಪಂಚಾಂಗದ ಪ್ರಕಾರ ಸೂರ್ಯ ಮಕರರಾಶಿಯನ್ನು ಪ್ರವೇಶಿಸುವ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ಇದೇ ಸಮಯದಲ್ಲಿ ರೈತರು ಬೆಳೆದ ಬೆಳೆ ಫಸಲು ಬಂದಿರುತ್ತದೆ. ಹಾಗಾಗಿ ಅವರಿಗೆ ಸುಗ್ಗಿ ಸಂಭ್ರಮ.

ರಾಶಿ ರಾಶಿ ಕಡಲೆ, ಕಬ್ಬು, ಅವರೆಕಾಳು ಸೇರಿದಂತೆ ವಿವಿಧ ಬೆಳೆ ಬೆಳೆದ ರೈತನ ಮೊಗದಲ್ಲಿ ಸಂತಸ ಮೂಡುವ ಈ ಸಮಯ ಆತ ಭೂಮಿ ತಾಯಿಗೆ ನಮಿಸುವ ಸಂದರ್ಭ. ಗ್ರಾಮೀಣ ಭಾಗದಲ್ಲಿ ರೈತರು ತಾವು ಬೆಳೆದ ತೆನೆಗಳನ್ನು ದೇವರಿಗೆ ಸಮರ್ಪಿಸಿ ಒಟ್ಟಾಗಿ ಸಂಭ್ರಮಿಸುತ್ತಾರೆ. ರೈತರ ನೊಗಕ್ಕೆ ಆಸರೆಯಾದ ಹಸುಗಳಿಗೆ ಬಿಡುವು ನೀಡಿ ಅವುಗಳಿಗೆ ಚಂದವಾಗಿ  ಕಿಚ್ಚು ಹಾಯಿಸುವ ಸಂಪ್ರದಾಯ ಗ್ರಾಮೀಣ ಪ್ರದೇಶಗಳಲ್ಲಿ ಇದೆ.

ಇದನ್ನೂ ಓದಿ: ಶರದ್ ಪವಾರ್ ಅವರಿಗೆ ಈ ವರ್ಷದ ಬಸವ ಪ್ರಶಸ್ತಿ: ಕೂಡಲಸಂಗಮ ಸ್ವಾಮೀಜಿಯಿಂದ ಘೋಷಣೆ

ಎಳ್ಳು ಬೆಲ್ಲದ ಸವಿ

ಚಳಿಗಾಲದಲ್ಲಿ ದೇಹಕ್ಕೆ ಯಾವ ಅಂಶಬೇಕು ಎಂದು ಅರಿತು ಅದೇ ಅಂಶ ಎಳ್ಳು, ಕಡಲೆ, ಕೊಬ್ಬರಿ, ಬೆಲ್ಲದ ಸಮ ಪ್ರಮಾಣದಲ್ಲಿ ಸೇವಿಸುವ ಮೂಲಕ ದೇಹದ ಉಷ್ಣಾಂಶ ಕಾಪಾಡಲಾಗುತ್ತದೆ.

ಗಾಳಿಪಟದ ಸಂಭ್ರಮಸಂಕ್ರಾಂತಿಯ ಮತ್ತೊಂದು ವಿಶೇಷ ಎಂದರೆ ಗಾಳಿಪಟ.  ಸಾಮೂಹಿಕವಾಗಿ ಬಯಲಿನಲ್ಲಿ ಚಿಕ್ಕವರು ದೊಡ್ಡವರು ಎನ್ನದೆ ಗಾಳಿಪಟ ಆಡುವುದೇ ಮಜಾ. ಈ ಹಬ್ಬದಲ್ಲಿ ಗಾಳಿಪಟ ಹಾರಿಸುವುದೇಕೆ ಎಂಬ ಕುತೂಹಲ ಹಲವರಲ್ಲಿದೆ. ಸೂರ್ಯ ಉತ್ತರಾಯಣದಲ್ಲಿ ದಿಕ್ಕುಬದಲಾಯಿಸುವ ಈ ವೇಳೆ ಸೂರ್ಯನ ರಶ್ಮಿಗಳು ದೇಹ ಚುಂಬಿಸಲಿ ಎಂದು ಗಾಳಿಪಟ ಹಾರಿಸುವುದು ಹಿಂದಿನಿಂದ ರೂಢಿಯಾಗಿದೆ.

ಸಂಪ್ರದಾಯದ ಜೊತೆಗೆ ಮಾಡ್ರನ್​ ಟಚ್​ ಹೊಂದಿರುವ ಈ ಕಾಲದಲ್ಲಿ ವಿವಿಧ ಆಕೃತಿಯ, ಬೃಹದಾಕಾರದ ಗಾಳಿಪಟಗಳನ್ನು ಹಾರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಾಗುವುದು.

First published:January 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ