ಬೆಂಗಳೂರು: ನಾಲ್ಕು ದಿನಗಳ ಮಕರ ಸಂಕ್ರಾಂತಿ (Makar Sankranthi-2023) ಹಬ್ಬದ ಮೊದಲ ದಿನ ಇಂದು ಭೋಗಿ ಸಂಭ್ರಮ ( Bhogi) ಜೋರಾಗಿದೆ. ಇಂದು ಹಳೆಯದನ್ನು ತ್ಯಜಿಸಿ, ಬದಲಾವಣೆ ಕಾರಣವಾಗುವ ಹೊಸ ವಿಷಯಗಳ ಮೇಲೆ ಕೇಂದ್ರೀಕರಿಸುವ ಸಂಕೇತವಾಗಿ ಆಚರಿಸಲಾಗುತ್ತದೆ. ಕೊರೊನಾ (Covid-19) ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂಡಿದ್ದ ಸಂಕ್ರಾಂತಿ ಹಬ್ಬವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದಾರೆ. ಇದು ವರ್ಷದ ಮೊದಲ ಹಬ್ಬ ಆಗಿರೋ ಕಾರಣ, ಜನರು ಮಾರುಕಟ್ಟೆಗೆ (Market) ಲಗ್ಗೆ ಇಟ್ಟಿದ್ದು, ಇಂದು ಬೆಳಗಿನಿಂದಲೇ ವ್ಯಾಪಾರ ಸಖತ್ ಜೋರಾಗಿದೆ. ನಾಳೆ ಸಂಕ್ರಾಂತಿ ಹಬ್ಬ ಹಿನ್ನೆಲೆ ಹೂ, ಹಣ್ಣು, ಕಬ್ಬು, ಗೆಣಸು, ಕಡಲೆಕಾಯಿ, ತರಕಾರಿ ಇತರ ಸಾಮಗ್ರಿಗಳ ಖರೀದಿಯಲ್ಲಿ ಜನರು ಫುಲ್ ಬ್ಯುಸಿಯಾಗಿದ್ದಾರೆ.
ರಾಜಧಾನಿ ಬೆಂಗಳೂರಿನ ಕೆಆರ್ ಮಾರುಕಟ್ಟೆ, ಬಸವನಗುಡಿ, ಗಾಂಧಿ ಬಜಾರ್, ಮಲ್ಲೇಶ್ವರ, ಜಯನಗರ, ಜೆ.ಪಿ ನಗರ, ಹೆಬ್ಬಾಳ, ಯಶವಂತಪುರ, ಇಂದಿರಾನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಬ್ಬದ ಕಾರಣದಿಂದ ವ್ಯಾಪಾರಿಗಳು ಮಾರಾಟ ಆರಂಭಿಸಿದ್ದು, ಹೂವು ಮತ್ತು ಬಟ್ಟೆಗಳ ವ್ಯಾಪಾರ ಬಿರುಸಿನಿಂದ ಸಾಗಿದೆ. ಹಬ್ಬದ ಕಾರಣ ಎಂದಿನಂತೆ ಹೂವುಗಳ ಮಾರಾಟ ಸಹ ಹೆಚ್ಚಾಗಿದ್ದು, ಮಾರಾಟದ ಜೊತೆಗೆ ಬೆಲೆಯೂ ಏರಿಕೆಯಾಗಿಯೂ ಆಗಿದೆ. ಬೆಲೆ ಏರಿಕೆ ನಡುವೆಯೂ ಜನರ ಖರೀದಿ ಮುಂದುವರಿದಿದೆ.
ವಿಶೇಷ ಎಂದರೇ, ಈ ಬಾರಿ ಉತ್ತಮ ಬೆಳೆ ಬಂದಿರುವುದರಿಂದ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಕಡಲೆಕಾಯಿ, ಕೊಬ್ಬರಿ, ಎಳ್ಳು ಲಭ್ಯವಾಗುತ್ತಿದೆ. ಅಲ್ಲದೇ ಬಣ್ಣ ಬಣ್ಣದ ಎಲ್ಲು ಬೆಲ್ಲದ ಮಿಶ್ರಣ ಎಲ್ಲರನ್ನು ಆಕರ್ಷಣೆ ಮಾಡುತ್ತಿದೆ. ಇನ್ನು, ಸಾಂಪ್ರದಾಯಿಕವಾಗಿ ಹಬ್ಬ ಆಚರಣೆ ಮಾಡುವವರು ಪ್ರತ್ಯೇಕವಾಗಿ ಎಳ್ಳು, ಬೆಲ್ಲ ಖರೀದಿ ಮಾಡುತ್ತಿದ್ದಾರೆ.
ಇದನ್ನೂ ಓದಿ: PM Modi: 'ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ'- ಕೇಳಿದ್ರಾ 12ರ ಬಾಲಕನ ಮಾತು?
ಮಾರುಕಟ್ಟೆಯಲ್ಲಿ ಹೂವುಗಳ ಬೆಲೆ
ಮಲ್ಲಿಗೆ (ಒಂದು ಕೆಜಿಗೆ) | ರೂ.2000-2200 |
ಕನಕಾಂಬರ (ಒಂದು ಕೆಜಿಗೆ) | ರೂ.1200-1500 |
ಸೇವಂತಿಗೆ (ಒಂದು ಕೆಜಿಗೆ) | ರೂ.160 -200 |
ಗುಲಾಬಿ (ಒಂದು ಕೆಜಿಗೆ) | ರೂ.250-300 |
ಸುಗಂಧರಾಜ (ಒಂದು ಕೆಜಿಗೆ) | ರೂ.160-200 |
ಚೆಂಡು ಹೂವು (ಒಂದು ಕೆಜಿಗೆ) | ರೂ.110-130 |
ತಾವರೆ ಒಂದು ಹೂವು | ರೂ.20-25 |
ಸೇವಂತಿಗೆ ಹೂ 1 ಮಾರು | ರೂ.100 |
ಅವರೇ ಕಾಯಿ (ಒಂದು ಕೆಜಿಗೆ) | ರೂ.80 |
ಗೆಣಸು (ಒಂದು ಕೆಜಿಗೆ) | ರೂ.40 |
ಕಡಲೇಕಾಯಿ (ಒಂದು ಕೆಜಿಗೆ) | ರೂ.120 |
ಕಬ್ಬು ಒಂದು ಜೋಡಿಗೆ | ರೂ.100 |
ಸೇಬು (ಒಂದು ಕೆಜಿಗೆ) | ರೂ.120-140 |
ದಾಳಿಂಬೆ (ಒಂದು ಕೆಜಿಗೆ) | ರೂ.110-150 |
ಮೂಸಂಬಿ (ಒಂದು ಕೆಜಿಗೆ) | ರೂ.60-80 |
ಆರೆಂಜ್ (ಒಂದು ಕೆಜಿಗೆ) | ರೂ.90-110 |
ಸಪೋಟ (ಒಂದು ಕೆಜಿಗೆ) | ರೂ.80-90 |
ಸೀಬೆಹಣ್ಣು (ಒಂದು ಕೆಜಿಗೆ) | ರೂ.80-100 |
ಏಲಕ್ಕಿ ಬಾಳೆಹಣ್ಣು (ಒಂದು ಕೆಜಿಗೆ) | ರೂ.70-80 |
ಅಗತ್ಯ ವಸ್ತುಗಳ ಬೆಲೆ
ಎಳ್ಳು (ಒಂದು ಕೆಜಿಗೆ) | ರೂ.180 |
ಕಬ್ಬು (ಒಂದು ಕೆಜಿಗೆ) | ರೂ.100-120 |
ಸಿಹಿ ಗೆಣಸು (ಒಂದು ಕೆಜಿಗೆ) | ರೂ.40-50 |
ಹಸಿ ಶೇಂಗಾ (ಒಂದು ಕೆಜಿಗೆ) | ರೂ.120 -140 |
ಅವರೇ ಕಾಯಿ (ಒಂದು ಕೆಜಿಗೆ) | ರೂ.80-100 |
ಮಾವಿನ ಎಲೆ ಕಟ್ಟು | ರೂ.20 |
ಬೇವಿನ ಸೊಪ್ಪು ಕಟ್ಟು | ರೂ.20 |
ತುಳಸಿ ತೋರಣ ಮಾರು | ರೂ.50 |
ಬೆಲ್ಲ (ಅಚ್ಚು / ಉಂಡೆ) | ರೂ.70 - 80 |
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ