ನದಿ ಬಳಿ ಡೆತ್​ ನೋಟ್ ಬರೆದಿಟ್ಟು ಕಾಣೆಯಾಗಿದ್ದ ಬಾಗಲಕೋಟೆ ಯುವತಿ ಪ್ರಕರಣಕ್ಕೆ ಹೊಸ ತಿರುವು!

ಘಟಪ್ರಭಾ ನದಿಯ ಅನಗವಾಡಿ ಸೇತುವೆ ಬಳಿ  ಸ್ಕೂಟಿ ನಿಲ್ಲಿಸಿದ್ದ ಯುವತಿ ನಾಪತ್ತೆಯಾಗಿದ್ದಳು.  ಆಕೆಯ ಮನೆಯವರು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಾಬರಿಯಾಗಿದ್ದರು. ಪೊಲೀಸರು ಆಕೆಯ ಮೊಬೈಲ್ ನೆಟ್​ವರ್ಕ್​ ಆಧರಿಸಿ ಹುಡುಕಿದಾಗ ಆಕೆ ಹುಬ್ಬಳಿಯಲ್ಲಿ ಸಂಬಂಧಿ ಯುವಕ ಪ್ರವೀಣ್ ಜೊತೆ ಪತ್ತೆಯಾಗಿದ್ದಾಳೆ.

ಬಾಗಲಕೋಟೆಯಲ್ಲಿ ಸ್ಕೂಟಿ ನಿಲ್ಲಿಸಿ, ಸೂಸೈಡ್ ನೋಟ್ ಬರೆದಿಟ್ಟಿದ್ದ ಯುವತಿ ಪತ್ತೆ

ಬಾಗಲಕೋಟೆಯಲ್ಲಿ ಸ್ಕೂಟಿ ನಿಲ್ಲಿಸಿ, ಸೂಸೈಡ್ ನೋಟ್ ಬರೆದಿಟ್ಟಿದ್ದ ಯುವತಿ ಪತ್ತೆ

  • Share this:
ಬಾಗಲಕೋಟೆ (ಡಿ. 28): ನದಿಯ ಬಳಿ ಸೂಸೈಡ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವತಿ ಇದೀಗ ಜೀವಂತವಾಗಿ ಪತ್ತೆಯಾಗಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನದಿಂದ ಆಕೆಯ ಹುಡುಕಾಟ ನಡೆಸಿದ್ದ ಪೊಲೀಸರಿಗೇ ಅಚ್ಚರಿಯಾಗುವಂತೆ ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. 

ಬಾಗಲಕೋಟೆಯ ಯುವತಿಯೊಬ್ಬಳು ಘಟಪ್ರಭಾ ನದಿಯ ಪಕ್ಕದಲ್ಲಿ ಸ್ಕೂಟಿಯನ್ನು ನಿಲ್ಲಿಸಿ, ಅದರಲ್ಲಿ ಸೂಸೈಡ್ ನೋಟ್ ಇಟ್ಟು ನಾಪತ್ತೆಯಾಗಿದ್ದಳು. ಆಕೆ ನದಿಗೆ ಹಾರಿ ಸಾವನ್ನಪ್ಪಿರಬಹುದು ಎಂಬ ಅನುಮಾನದಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಸೂಸೈಡ್ ನೋಟ್ ಬರೆದಿಟ್ಟು ಕಾಣೆಯಾಗಿದ್ದ  ಯುವತಿ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ.

ಇದನ್ನೂ ಓದಿ:ಮಲೆ ಮಹದೇಶ್ವರ ಸ್ವಾಮಿ ಈ ವರ್ಷವೂ ಕೋಟ್ಯಧಿಪತಿ; ಕಾಣಿಕೆ ರೂಪದಲ್ಲಿ 1.88 ಕೋಟಿ ರೂ. ಸಂಗ್ರಹ

ಸ್ಕೂಟಿಯಲ್ಲಿದ್ದ ಸೂಸೈಡ್​ ನೋಟ್​ನಲ್ಲಿ 'ನನ್ನನ್ನು ದಯವಿಟ್ಟು ಕ್ಷಮಿಸಿ, ನಿಮ್ಮ ಋಣ ಮರಿಯಂಗಿಲ್ಲ, ನನಗ ಬದಕಾಕ ಆಗಲಿಲ್ಲ. ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ನಾನೇ ಕಾರಣ ' ಎಂದು ಬರೆದಿಟ್ಟು ಯುವತಿ ನಾಪತ್ತೆಯಾಗಿದ್ದಳು. ಆಕೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ, ಆ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಕಾಣೆಯಾಗಿದ್ದ ಯುವತಿ ತಮ್ಮ ಸಂಬಂಧಿಕರ ಹುಡುಗನ ಜೊತೆ ಪರಾರಿಯಾಗಿದ್ದಾಳೆ.

ಇದನ್ನೂ ಓದಿ: ಮಂಗಳೂರು ಗೋಲಿಬಾರ್​ಗೆ ಬಲಿಯಾದವರ ವಿರುದ್ಧವೇ ಎಫ್​ಐಆರ್; ವಿವಾದಕ್ಕೆ ಕಾರಣವಾಯ್ತು ಪೊಲೀಸರ ನಡೆ

ಘಟಪ್ರಭಾ ನದಿಯ ಅನಗವಾಡಿ ಸೇತುವೆ ಬಳಿ  ಸ್ಕೂಟಿ ನಿಲ್ಲಿಸಿದ್ದ ಯುವತಿ ನಾಪತ್ತೆಯಾಗಿದ್ದಳು.  ಆಕೆಯ ಮನೆಯವರು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗಾಬರಿಯಾಗಿದ್ದರು. ಪೊಲೀಸರು ಆಕೆಯ ಮೊಬೈಲ್ ನೆಟ್​ವರ್ಕ್​ ಆಧರಿಸಿ ಹುಡುಕಿದಾಗ ಆಕೆ ಹುಬ್ಬಳಿಯಲ್ಲಿ ಸಂಬಂಧಿ ಯುವಕ ಪ್ರವೀಣ್ ಜೊತೆ ಪತ್ತೆಯಾಗಿದ್ದಾಳೆ. ಮನೆಯವರ ದಾರಿ ತಪ್ಪಿಸಲು ಸೂಸೈಡ್​ ನೋಟ್ ಬರೆದಿದ್ದ ಯುವತಿ ನಂತರ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಳು.

(ವರದಿ: ರಾಚಪ್ಪ ಬನ್ನಿದಿನ್ನಿ)

 
Published by:Sushma Chakre
First published: