• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Police: ಸರ್ಕಾರ ಬದಲಾದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ? ಏನಿದು ಕೇಂದ್ರದ ಪ್ಲಾನ್‌!

Karnataka Police: ಸರ್ಕಾರ ಬದಲಾದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ? ಏನಿದು ಕೇಂದ್ರದ ಪ್ಲಾನ್‌!

ಪ್ರವೀಣ್ ಸೂದ್, ಡಿಜಿ

ಪ್ರವೀಣ್ ಸೂದ್, ಡಿಜಿ

ರಾಜ್ಯದಲ್ಲಿ ಸರ್ಕಾರವೇನೊ ಬದಲಾಯಿತು. ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಪಕ್ಷದ ಅಧಿಕಾರದ ಆರಂಭದಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

  • Share this:

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್‌ಗೆ ಭರ್ಜರಿ ಜಯ ಲಭಿಸಿದ್ರೆ, ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ದಕ್ಷಿಣ ಭಾರತದ ಒಂದು ರಾಜ್ಯದಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡು ಬಿಜೆಪಿ (BJP) ಕೈಸುಟ್ಟುಕೊಂಡಿದೆ. ಇದೀಗ ಕರ್ನಾಟಕದಲ್ಲಿ ಸರ್ಕಾರ ಬದಲಾದ ಬೆನ್ನಲ್ಲೇ ರಾಜ್ಯದ ಪೊಲೀಸ್‌ ಇಲಾಖೆಯಲ್ಲೂ (Karnataka State Police) ಕೂಡ ಮೇಜರ್ ಸರ್ಜರಿ ಮಾಡುವ ಸಾಧ್ಯತೆ ಇದೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ.


ಹೌದು.. ರಾಜ್ಯದಲ್ಲಿ ಸರ್ಕಾರ ಬದಲಾದ ಬೆನ್ನಲ್ಲೇ ಕರ್ನಾಟದ ಪೊಲೀಸ್‌ ಇಲಾಖೆಯಲ್ಲೂ ಗಮನಾರ್ಹ ಬದಲಾವಣೆ ಆಗುವ ಸಾಧ್ಯತೆ ಇದ್ದು, ಪೊಲೀಸ್ ಇಲಾಖೆಯ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕುಳಿತಿರುವ ಅಧಿಕಾರಿಗಳನ್ನು ಬದಲಾವಣೆ ಮಾಡಲು ಕೇಂದ್ರಾಡಳಿತ ಮುಂದಾಗಿದೆ ಎಂದು ಹೇಳಲಾಗ್ತಿದೆ. ಇದರ ಭಾಗವಾಗಿಯೇ ಡಿಜಿ ಪ್ರವೀಣ್ ಸೂದ್ ಅವರ ಹುದ್ದೆಗೆ ಬೇರೆಯವರನ್ನು ಕರೆತರುವ ಸಾಧ್ಯತೆ ಇದೆ ಎಂಬ ಮಾಹಿತಿ ಹರಿದಾಡಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಯ ಬದಲಾವಣೆ ಆದಲ್ಲಿ ಸದ್ಯ ಅದೇ ಹುದ್ದೆಯಲ್ಲಿರುವ ಪ್ರವೀಣ್ ಸೂದ್ ಅವರು ಸೆಂಟ್ರಲ್ ಡೆಪ್ಯುಟೇಷನ್ ಮೇಲೆ ವರ್ಗಾವಣೆ ಆಗ್ತಾರೆ ಎಂದು ಹೇಳಲಾಗ್ತಿದೆ.


ಇದನ್ನೂ ಓದಿ: Political Retirement: ಹೀನಾಯ ಸೋಲಿನಿಂದ ಕಂಗೆಟ್ಟ ಬಿಎಸ್​ವೈ ಆಪ್ತ, ಬಿಕ್ಕಿ ಬಿಕ್ಕಿ ಅಳುತ್ತಲೇ ರಾಜಕೀಯ ನಿವೃತ್ತಿ ಘೋಷಣೆ!


ಪ್ರವೀಣ್ ಸೂದ್ ಸಿಬಿಐ ನೂತನ ನಿರ್ದೇಶಕ?


ಹಾಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರವೀಣ್ ಸೂದ್ ಅವರನ್ನ ಆ ಸ್ಥಾನದಿಂದ ತೆರವುಗೊಳಿಸಿ ಸಿಬಿಐ ನೂತನ ನಿರ್ದೇಶಕರನ್ನಾಗಿ ಮಾಡುವ ಪ್ಲಾನ್ ಕೇಂದ್ರ ಸರ್ಕಾರಕ್ಕೆ ಇದೆ ಎಂಬ ಮಾಹಿತಿ ಲಭಿಸಿದ್ದು, ಶನಿವಾರ ದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ ಪ್ರವೀಣ್ ಸೂದ್ ಅವರ ಹೆಸರು ಸಿಬಿಐ ನೂತನ ನಿರ್ದೇಶಕ ಹುದ್ದೆಗೆ ಫೈನಲ್ ಆಗಿದೆ ಎಂದು ಹೇಳಲಾಗಿದೆ.


ಆಯ್ಕೆ ಹೇಗಿರುತ್ತೆ?


ಸಾಮಾನ್ಯವಾಗಿ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಪ್ರಧಾನಮಂತ್ರಿ ಒಳಗೊಂಡ ಮೂವರು ಸದಸ್ಯರ ಪ್ಯಾನೆಲ್‌ನಲ್ಲಿ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಧಿಕಾರಿಗಳ ಹೆಸರು ಫೈನಲ್ ಆಗುತ್ತದೆ. ಶನಿವಾರ ನಡೆದಿದ್ದ ಸಭೆಯಲ್ಲಿ ಪ್ರವೀಣ್ ಸೂದ್ ಅವರ ಹೆಸರೇ ಮುಂದಿನ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಅಂತಿಮಗೊಂಡಿದೆ ಎನ್ನುವ ಮಾಹಿತಿ ಸಿಕ್ಕಿದ್ದು, 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರು ಮೂರು ವರ್ಷಗಳ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದರು. ಮುಂದಿನ ವರ್ಷ (2024ರ) ಪ್ರವೀಣ್ ಸೂದ್ ಅವರು ಸೇವೆಯಿಂದ ನಿವೃತ್ತಿ ಆಗಲಿದ್ದು, ಹೀಗಾಗಿ ಸಿಬಿಐ ನಿರ್ದೇಶಕರಾದ್ರೆ ಪುನಃ ಎರಡು ವರ್ಷಗಳ ಕಾಲ ಕೆಲಸ ನಿರ್ವಹಣೆ ಮಾಡುವ ಅವಕಾಶ ಸಿಕ್ಕಂತಾಗುತ್ತದೆ.


ಇದನ್ನೂ ಓದಿ: Dr Ashwath Narayan: ಒಂದು ಮನೆ ನೂರು ಬಾಗಿಲಾಗಿದೆ; ಹೀನಾಯ ಸೋಲಿನ ಬಳಿಕ ಅಶ್ವತ್ಥ್ ನಾರಾಯಣ್ ಬೇಸರಪ್ರವೀಣ್ ಸೂದ್‌ ಜಾಗಕ್ಕೆ ಇನ್ಯಾರು?


ಒಂದು ವೇಳೆ ಹಿರಿಯ ಐಪಿಎಸ್‌ ಅಧಿಕಾರಿ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾದ್ರೆ ಮುಂದಿನ ರಾಜ್ಯದ ಡಿಜಿ & ಐಜಿಪಿ ಯಾರಾಗ್ತಾರೆ ಎನ್ನುವ ಪ್ರಶ್ನೆಯೂ ಮೂಡಿದ್ದು, ಹೀಗಾಗಿ ಹಿರಿತನದ ಆಧಾರದ ಮೇಲೆ 1987ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಆಗಿರುವ ಅಲೋಕ್ ಮೋಹನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಳಿದಂತೆ ಡಾ.ಪಿ ರವೀಂದ್ರನಾಥ್, ಕಮಲ್ ಪಂಥ್, ಪ್ರತಾಪ್ ರೆಡ್ಡಿ ಮತ್ತು ಪ್ರಶಾಂತ್ ಕುಮಾರ್ ಠಾಕೂರ್ ಕೂಡ ಡಿಜಿ & ಐಜಿಪಿ ರೇಸ್‌ನಲ್ಲಿದ್ದಾರೆ.

First published: