ಬಿಎಸ್​ವೈ ತೆರಳಿದ ವಿಮಾನದಲ್ಲೇ ಐವರು ಕೈ ನಾಯಕರು!: ಏನಿದರ ಮರ್ಮ?


Updated:August 6, 2018, 10:14 PM IST
ಬಿಎಸ್​ವೈ ತೆರಳಿದ ವಿಮಾನದಲ್ಲೇ ಐವರು ಕೈ ನಾಯಕರು!: ಏನಿದರ ಮರ್ಮ?

Updated: August 6, 2018, 10:14 PM IST
ರಮೇಶ್​ ಹಿರೇಜಂಬೂರು, ನ್ಯೂಸ್​ 18 ಕನ್ನಡ

ಬೆಂಗಳೂರು(ಆ.06): ಸರ್ಕಾರ ಉರುಳಿಸಲು ಬಿಜೆಪಿ ರಣತಂತ್ರ ಹೆಣೆದಿದೆಯಾ ಎಂಬ ಅನುಮಾನವೊಂದು ರಾಜ್ಯ ರಾಜಕೀಯದಲ್ಲಿ ಎದ್ದಿದೆ.  ಹೌದು ನಾಳೆ ಕೇಂದ್ರ ವಾಣಿಜ್ಯ ಮತ್ತು ಕೃಷಿ ಸಚಿವರ ಭೇಟಿ ಹಿನ್ನೆಲೆ ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಇವರೊಂದಿಗೆ ಕಾಂಗ್ರೆಸ್​ನ ಐವರು ಶಾಸಕರೂ ದೆಹಲಿಯ ವಿಮಾನ ಹತ್ತಿರುವುದು ಈ ಸಂಶಯಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಅಡಿಕೆ ಬೆಳೆಗಾರರ ನಿಯೋಗದ ಜೊತೆ ನಾಳೆ ಕೇಂದ್ರ ಸಚಿವರನ್ನು ಭೇಟಿ ಮಾಡಲು  ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ರವಾನೆಯಾಗಿದ್ದಾರೆ. ಆದರೆ ಬಿಎಸ್​ವೈ ತೆರಳಿದ ವಿಮಾನದಲ್ಲೇ  ಸಚಿವ ರಮೇಶ್ ಜಾರಕಿಹೊಳಿ, ಕಾಂಗ್ರೆಸ್ ಶಾಸಕರಾದ ರಹೀಂ ಖಾನ್, ನಾರಾಯಣ್ ರಾವ್ ಸೇರಿದಂತೆ ಕಾಂಗ್ರೆಸ್​ನ ಐವರು ಶಾಸಕರೂ ದೆಹಲಿಗೆ ದೌಡಾಯಿಸಿದ್ದಾರೆನ್ನಲಾಗಿದೆ.

ಆದರೆ ಈ ಐವರು ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷರ ಜೊತೆಗೆ ತೆರಳಲು ಕಾರಣ ಏನು? ನಿಜಕ್ಕೂ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆಯಾ? ಈ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ರಣತಂತ್ರ ರೂಪಿಸ್ತಿದೆಯಾ ಎಂಬ ಪ್ರಶ್ನೆಗಳಿಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.

ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಭೇಟಿಗೆ ಹೋದ್ರಾ ಶಾಸಕರು?

ಮತ್ತೊಂದೆಡೆ ಬಿಎಸ್​ವೈ ದೆಹಲಿಗೆ ಹೋಗಿರುವ ವಿಮಾನದಲ್ಲೇ ಕಾಂಗ್ರೆಸ್​ ಶಾಸಕರು ಪ್ರಯಾಣ ಬೆಳೆಸಿದ್ದರೂ, ಐವರು ಕೈ ನಾಯಕರು ರಾಜ್ಯ ಉಸ್ತುವಾರಿ ವೇಣುಗೋಪಾಲ್​ರನ್ನು ಭೇಟಿಯಾಗಲು ತೆರಳಿರುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ. ಭಿನ್ನಮತೀಯ ನಾಯಕರನ್ನು ಶಾಂತಗೊಳಿಸಲು ಉಸ್ತುವಾರಿ ಆಹ್ವಾನ ನೀಡಿದ್ದು, ಇದೇ ಮೇರೆಗೆ ತೆರಳಿದ್ದಾರೆನ್ನಲಾಗಿದೆ.

ಅದೇನಿದ್ದರೂ ಕಾಂಗ್ರೆಸ್​ ನಾಯಕರು ದೆಹಲಿಗೆ ತೆರಳಿರುವ ವಿಚಾರ ಸದ್ಯ ಪ್ರತಿಯೊಬ್ಬರಲ್ಲೂ ಕುತೂಹಲ ಮೂಡಿಸಿದ್ದು, ಈ ರಾಜಕೀಯ ಬೆಳವಣಿಗೆಗಳು ಯಾವ ಹಂತ ತಲುಪುತ್ತವೆ ಎಂಬುವುದನ್ನು ಕಾದು ನೋಡಬೇಕಷ್ಟೇ
Loading...

 
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...