Nithyananda: ಕೈಲಾಸದಲ್ಲಿ ಕಳ್ಳಾಟ ಆಡ್ತಿದ್ದಾನಾ ಸ್ವಾಮಿ ನಿತ್ಯಾನಂದ? ಇಮೇಲ್‌ ಮೂಲಕವೇ ಶಿಷ್ಯೆಯಿಂದ ದೂರು!

ಸ್ವಾಮಿ ನಿತ್ಯಾನಂದ ಕೈಲಾಸದಲ್ಲಿ ಕಳ್ಳಾಟ ಆಡುತ್ತಿದ್ದಾನೆ  ಅಂತ ಖುದ್ದು ನಿತ್ಯಾನಂದನ ಶಿಷ್ಯೆಯೇ ಆರೋಪ ಮಾಡಿದ್ದಾಳೆ. ಇಮೇಲ್ ಮೂಲಕವೇ ರಾಮನಗರದ ಬಿಡದಿ ಠಾಣೆ ಪೊಲೀಸರಿಗೆ ದೂರನ್ನೂ ಸಹ ನೀಡಲಾಗಿದೆ.

ಸ್ವಾಮಿ ನಿತ್ಯಾನಂದ

ಸ್ವಾಮಿ ನಿತ್ಯಾನಂದ

  • Share this:
ವಿವಾದಿತ ಸ್ವಯಂ ಘೋಷಿತ ಸ್ವಾಮೀಜಿ (Swami) ನಿತ್ಯಾನಂತ (Nithyananda) ಮತ್ತೆ ಸುದ್ದಿಯಾಗಿದ್ದಾನೆ. ಈ ಬಾರಿಯೂ ಕೂಡ ಲೈಂಗಿಕ ದೌರ್ಜನ್ಯ ಆರೋಪ (Allegations) ಸೇರಿದಂತೆ ಹಲವು ಆರೋಪಗಳು ನಿತ್ಯಾನಂದನ ಮೇಲೆ ಬಂದಿವೆ. ಕೈಲಾಸದಲ್ಲಿ (Kailasa) ಕಳ್ಳಾಟ ಆಡುತ್ತಿದ್ದಾನೆ  ಅಂತ ಖುದ್ದು ನಿತ್ಯಾನಂದನ ಶಿಷ್ಯೆಯೇ ಆರೋಪ ಮಾಡಿದ್ದಾಳೆ. ಇಮೇಲ್ (Email) ಮೂಲಕವೇ ರಾಮನಗರದ (Ramanagara) ಬಿಡದಿ ಠಾಣೆ ಪೊಲೀಸರಿಗೆ (Bidadi Police Station) ದೂರನ್ನೂ (Complaint) ಸಹ ನೀಡಲಾಗಿದೆ. ಅಷ್ಟೇ ಅಲ್ಲದೇ ನಿತ್ಯಾನಂದನ ಶಿಷ್ಯೆ ತನ್ನ ಟ್ವಿಟ್ಟರ್ ಖಾತೆಯಲ್ಲಿ (Twitter Account) ಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

ಮತ್ತೆ ಶುರುವಾಗಿದೆಯಾ ಸ್ವಾಮಿ ನಿತ್ಯಾನಂದನ ಕಳ್ಳಾಟ?

ಸ್ವಾಮಿ ನಿತ್ಯಾನಂದನ ಬಗ್ಗೆ ಆತನ ವಿದೇಶಿ ಶಿಷ್ಯೆಯೇ ಗಂಭೀರ ಆರೋಪ ಮಾಡಿದ್ದಾಳೆ. ನಿತ್ಯಾನಂದನ ವಿರುದ್ಧ ಶಿಷ್ಯೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಶಿಷ್ಯೆ ಸಾರಾ ಲಾಂದ್ರಿ ಎಂಬುವರು ನಿತ್ಯಾನಂದನ ವಿರುದ್ಧ ಟ್ವೀಟ್ಟರ್‌ನಲ್ಲಿ ತರಹೇವಾರಿ ಆರೋಪ ಮಾಡಿದ್ದಾಳೆ.

ಕೈಲಾಸದಲ್ಲಿ ಲೈಂಗಿಕ ಕಿರುಕುಳ

ಸ್ವಾಮಿ ನಿತ್ಯಾನಂದ ಹಾಗೂ ಆತನ ಅನುಯಾಯಿಗಳ ವಿರುದ್ಧ ಸಾರಾ ಲಾಂದ್ರಿ ಆರೋಪ ಮಾಡಿದ್ದಾರೆ. ಕೈಲಾಸದಲ್ಲಿ ನಿತ್ಯಾನಂದ ಹಾಗೂ ಆತನ ಟೀಂ ತನ್ನದೇ ಶಿಷ್ಯರಿಗೆ ಲೈಂಗಿಕ ಕಿರುಕುಳ ನೀಡುತ್ತಾ ಇದ್ದಾರೆ ಅಂತ ಸಾರಾ ಲಾಂದ್ರಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Timber Depot Fire: ಟಿಂಬರ್ ಡಿಪೋ ಬೆಂಕಿ ಅವಘಡ, 11 ಜನ ಸಜೀವ ದಹನ

ಮಕ್ಕಳ ಮೇಲೂ ನಡೀತಾ ದೌರ್ಜನ್ಯ?

ಹೌದು, ನಿತ್ಯಾನಂದನ ಶಿಷ್ಯೆ ಸಾರಾ ಲಾಂದ್ರಿ ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಸ್ವಾಮಿ ನಿತ್ಯಾಂನದ ಮತ್ತು ಆತನ ಟೀಂ ಮಕ್ಕಳನ್ನು ಕೂಡಾ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದೆ ಅಂತ ಆರೋಪಿಸಿದ್ದಾಳೆ. ನಿತ್ಯಾನಂದನ ಕೈಲಾಸ ಆಶ್ರಮದಲ್ಲಿಮಕ್ಕಳಿಗೆ ಕಿರುಕುಳ, ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಅಂತ ಸಾರಾ ಆರೋಪಿಸಿದ್ದಾಳೆ.



ಬಿಡದಿ ಪೊಲೀಸ್ ಠಾಣೆಗೆ ಇಮೇಲ್ ಮೂಲಕವೇ ದೂರು

ಸ್ವಾಮಿ ನಿತ್ಯಾನಂದನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಶಿಷ್ಯೆ ಸಾರಾ ಲಾಂದ್ರಿ, ಆತನ ವಿರುದ್ಧ ದೂರನ್ನೂ ನೀಡಿದ್ದಾಳೆ. ರಾಮನಗರದ ಬಿಡದಿ ಪೊಲೀಸ್ ಠಾಣೆಗೆ ಇ ಮೇಲ್ ಮೂಲಕವೇ ದೂರು ನೀಡಲಾಗಿದೆ. ಬಳಿಕ ಟ್ವೀಟ್ಟರ್‌ನಲ್ಲಿ ಸ್ವಾಮಿ ನಿತ್ಯಾನಂದನ ಬಗ್ಗೆ ಗಂಭೀರ ಆರೋಪ ಮಾಡಿದ್ದಾಳೆ.

ನಿತ್ಯಾನಂದನ ವಿರುದ್ಧ ದೂರು


ಕೈಲಾಸ ದೇಶ ಮಾಡುವುದಾಗಿ ಘೋಷಿಸಿದ್ದ ನಿತ್ಯಾನಂದ

ಅಪಹರಣ, ಅತ್ಯಾಚಾರದಂತಹ ಗಂಭೀರ ಆರೋಪಗಳು ನಿತ್ಯಾನಂದನ ಮೇಲಿದ್ದು, ಅವುಗಳ ವಿಚಾರಣೆ ಇನ್ನೂ ನಡೆಯುತ್ತದೇ ಇದೆ. ಸದ್ಯ ದೇಶದಿಂದ ಪರಾರಿಯಾಗಿರುವ ನಿತ್ಯಾನಂದ ಸ್ವಾಮಿ, ಈಕ್ವೆಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿ, ಅದನ್ನು 'ಕೈಲಾಸ' ಎಂಬ ತನ್ನದೇ ಆದ ದೇಶ ಮಾಡಿಕೊಂಡು, ಅದಕ್ಕೆ 'ಜಗತ್ತಿನ ಅತಿ ದೊಡ್ಡ ಡಿಜಿಟಲ್ ಹಿಂದೂ ದೇಶ' ಎಂಬ ಹೆಸರಿಟ್ಟಿದ್ದಾನೆ.

ಕೈಲಾಸಕ್ಕೆ ಬರುವಂತೆ ಭಕ್ತರಿಗೆ ಕರೆ

ನಿತ್ಯಾನಂದ ತನ್ನ ದೇಶಕ್ಕೆ ಬರುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದ. ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತರು ವೀಸಾ ಅರ್ಜಿಗಳನ್ನು ಸಲ್ಲಿಸುವಂತೆ ಮನವಿ ಮಾಡಿ ವಿಡಿಯೋ ಸಂದೇಶ ಕಳಿಸಿದ್ದ ನಿತ್ಯಾನಂದ, ಈ ಪ್ರಕ್ರಿಯೆಯ ಹಂತಗಳನ್ನೂ ವಿವರಿಸಿದ್ದ.

ಸೀಮಿತ ವೀಸಾಗಳಿಗೆ ಅವಕಾಶವಂತೆ!

ಕೈಲಾಸದ ಮಾರ್ಗನಕ್ಷೆ ಬಿಡುಗಡೆ ಮಾಡಿರುವ ನಿತ್ಯಾನಂದ ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದ. ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತಾದಿಗಳು ಆಸ್ಟ್ರೇಲಿಯಾದ ಸಿಡ್ನಿಗೆ ಬಂದು, ಅಲ್ಲಿಂದ ಚಾರ್ಟರ್ಡ್ ವಿಮಾನದಲ್ಲಿ ಕೈಲಾಸಕ್ಕೆ ಬರಬೇಕಂತೆ.

ಇದನ್ನೂ ಓದಿ: Murder Case: ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಹಿಂದೆ 2ನೇ ಹೆಂಡತಿ! ಸುಪಾರಿ ನೀಡಿ ಕೊಲ್ಲಿಸಿದವಳು ಅರೆಸ್ಟ್

ಕೈಲಾಸಕ್ಕೆ ಬರಲು ಗರುಡ ಎಂಬ ವಿಶೇಷ ವಿಮಾನ ಸೇವೆ ಆಸ್ಟ್ರೇಲಿಯಾದಿಂದ ಇರುವುದಾಗಿ ತಿಳಿಸಿದ್ದ. ಕೈಲಾಸದಲ್ಲಿ ನೆಲೆಸುವವರಿಗೆ ಉಚಿತ ಊಟ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ಖುದ್ದು ನಿತ್ಯಾನಂದನೇ ಹೇಳಿದ್ದ.
Published by:Annappa Achari
First published: