• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Menstrual Cup: ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಜು.6 ರಂದು ಚಾಲನೆ, ಪ್ರಾಯೋಗಿಕವಾಗಿ ಚಾಮರಾಜನಗರ, ದಕ್ಷಿಣ ಕನ್ನಡದಲ್ಲಿ ಜಾರಿ

Menstrual Cup: ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಜು.6 ರಂದು ಚಾಲನೆ, ಪ್ರಾಯೋಗಿಕವಾಗಿ ಚಾಮರಾಜನಗರ, ದಕ್ಷಿಣ ಕನ್ನಡದಲ್ಲಿ ಜಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈತ್ರಿ ಮುಟ್ಟಿನ ಕಪ್ (ಋತುಚಕ್ರದ) ವೈಜ್ಞಾನಿಕ ನಿರ್ವಹಣೆಯ ಒಂದು ಉಪಯುಕ್ತ ಸಾಧನವಾಗಿದೆ. ಇದು ಮೆಡಿಕಲ್ ಗ್ರೇಡ್ ಸಿಲಿಕಾನ್‍ನಿಂದ ಮಾಡಲಾಗಿದ್ದು, ಸುರಕ್ಷಿತವಾಗಿದೆ. ಮುಟ್ಟಿನ ಸಮಯದಲ್ಲಿನ ನೈರ್ಮಲ್ಯ ಕಾಪಾಡಲು ವೈದ್ಯಕೀಯವಾಗಿ ಬಳಸಬಹುದಾದಂತಹ ಹಾಗೂ ಸ್ಯಾನಿಟರಿ ಪ್ಯಾಡ್‍ಗಳ ಪರ್ಯಾಯ ಸಾಧನವಾಗಿದೆ.

ಮುಂದೆ ಓದಿ ...
  • Share this:

ಚಾಮರಾಜನಗರ: ಹದಿಹರೆಯದ ಹೆಣ್ಣುಮಕ್ಕಳ (Young Girls) ಸ್ವಚ್ಛ (Clean) ಹಾಗೂ ಸುರಕ್ಷಿತ ಋತುಚಕ್ರ (menstrual cycle) ನಿರ್ವಹಣೆಗಾಗಿ ಸರ್ಕಾರ (Government) ತರುತ್ತಿರುವ ಮೈತ್ರಿ ಮುಟ್ಟಿನ ಕಪ್ ಯೋಜನೆಯನ್ನು (Maithri menstrual cup) ಚಾಮರಾಜನಗರ (Chamarajnagar) ಮತ್ತು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದ್ದು ಈ ಮಹತ್ತರ ಯೋಜನೆಗೆ  ಜು.6 ರಂದು ಚಾಮರಾಜನಗರ ಜಿಲ್ಲೆಯಲ್ಲಿ ಚಾಲನೆ ನೀಡಲಾಗುತ್ತಿದೆ. ಸರ್ಕಾರದ ಶುಚಿ ಕಾರ್ಯಕ್ರಮದ ಯೋಜನೆಯಡಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಈ ಹಿಂದಿನಿಂದಲೂ ಸ್ಯಾನಿಟರಿ ನ್ಯಾಪ್‍ಕಿನ್ ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಈ ಯೋಜನೆಯು ರಾಜ್ಯಾದ್ಯಂತ ಸುಮಾರು 19 ಲಕ್ಷ ಹದಿಹರೆಯದವರನ್ನು ಒಳಗೊಂಡಿದೆ. ಪ್ರತಿವರ್ಷ ಸರಾಸರಿ 2.23 ಕೋಟಿ ಯೂನಿಟ್ ಸ್ಯಾನಿಟರಿ ನ್ಯಾಪ್‍ಕಿನ್ ಗಳನ್ನು ವಿತರಿಸಲಾಗುತ್ತಿದೆ.


ಪರಿಸರ ಸ್ನೇಹಿ ಮುಟ್ಟಿನ ನೈರ್ಮಲ್ಯ ಉತ್ಪನ್ನ


ಕಾರ್ಯಕ್ರಮದ ಮುಂದುವರೆದ ಹೆಜ್ಜೆಯಾಗಿ ನೂತನ ಹಾಗೂ ಪರಿಸರ ಸ್ನೇಹಿ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳನ್ನು ಪರಿಚಯಿಸಲಾಗುತ್ತಿದೆ. ವಿನೂತನ ಯೋಜನೆಯಡಿ ಹದಿಹರೆಯದ ಹೆಣ್ಣುಮಕ್ಕಳಿಗೆ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್ ಗಳನ್ನು ಪರಿಚಯಿಸಲಾಗುತ್ತಿದೆ. ಈ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ.


ಚಾಮರಾಜನಗರ, ದಕ್ಷಿಣ ಕನ್ನಡದಲ್ಲಿ ಪ್ರಾಯೋಗಿಕ ಜಾರಿ


ಮೈತ್ರಿ ಮುಟ್ಟಿನ ಕಪ್ ಯೋಜನೆಯನ್ನು ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಫಲಿತಾಂಶದ ಆಧಾರದ ಮೇಲೆ ಕಾರ್ಯಕ್ರಮವನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ. ಕರ್ನಾಟಕವು ಮುಟ್ಟಿನ ನೈರ್ಮಲ್ಯ ನಿರ್ವಹಣೆ ಯೋಜನೆಯಡಿಯಲ್ಲಿ ಮುಟ್ಟಿನ ಕಪ್ ಅನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯವಾಗಿದ್ದು  ಈ ಯೋಜನೆಯು 10 ಸಾವಿರ ಫಲಾನುಭವಿಗಳನ್ನು ಒಳಗೊಂಡಿದೆ.


ಇದನ್ನೂ ಓದಿ: Health Tips: ಪಿರಿಯಡ್ಸ್​ ಸಮಯದಲ್ಲಿ ನೋವಿನಿಂದ ಮುಕ್ತಿ ಬೇಕು ಅಂದ್ರೆ ಹೀಗೆ ಮಾಡಿ ಸಾಕು


ಮೈತ್ರಿ ಮುಟ್ಟಿನ ಕಪ್ ಹದಿಹರೆಯದವರಲ್ಲಿ ಋತುಚಕ್ರದ ಸ್ವಚ್ಛ, ನೈರ್ಮಲ್ಯ ಮತ್ತು ಪರಿಸರ ಸ್ನೇಹಿ ನಿರ್ವಹಣೆಯನ್ನು ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಹೊಸಹೆಜ್ಜೆಯಾಗಿದೆ. ಮೈತ್ರಿ ಮುಟ್ಟಿನ ಕಪ್ ಗಳನ್ನು ಹದಿಹರೆಯದ ಹೆಣ್ಣುಮಕ್ಕಳಿಗೆ ಪರ್ಯಾಯವಾಗಿ ಮತ್ತು ಪ್ರಾಯೋಗಿಕ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಶುಚಿ-ಮುಟ್ಟಿನ ನೈರ್ಮಲ್ಯ ಕಾರ್ಯಕ್ರಮಕ್ಕೆ ಅನುಗುಣವಾಗಿ ಪರಿಚಯಿಸಲಾಗುತ್ತಿದೆ.


ಮೆಡಿಕಲ್ ಗ್ರೇಡ್‌ ಸಿಲಿಕಾನ್‌ನಿಂದ ರಚನೆ


ಮೈತ್ರಿ ಮುಟ್ಟಿನ ಕಪ್ (ಋತುಚಕ್ರದ) ವೈಜ್ಞಾನಿಕ ನಿರ್ವಹಣೆಯ ಒಂದು ಉಪಯುಕ್ತ ಸಾಧನವಾಗಿದೆ. ಮೆಡಿಕಲ್ ಗ್ರೇಡ್ ಸಿಲಿಕಾನ್‍ನಿಂದ ಮಾಡಲಾಗಿದ್ದು, ಸುರಕ್ಷಿತವಾಗಿದೆ. ಮುಟ್ಟಿನ ಸಮಯದಲ್ಲಿನ ನೈರ್ಮಲ್ಯ ಕಾಪಾಡಲು ವೈದ್ಯಕೀಯವಾಗಿ ಬಳಸಬಹುದಾದಂತಹ ಹಾಗೂ ಸ್ಯಾನಿಟರಿ ಪ್ಯಾಡ್‍ಗಳ ಪರ್ಯಾಯ ಸಾಧನವಾಗಿದೆ.


ಸುಲಭವಾಗಿ ಬಳಕೆ ಮಾಡಬಹುದು


ವಯಸ್ಸಿಗೆ ಅನುಗುಣವಾಗಿ ಈ ಸಾಧನವು ಹದಿಹರೆಯದ ಹೆಣ್ಣು ಮಕ್ಕಳ ಹಾಗೂ ಮಹಿಳೆಯರು ಸುಲಭವಾಗಿ ಬಳಸಬಹುದು. ವಾಡಿಕೆಯಂತೆ ಬಳಸಲಾಗುವ ಸ್ಯಾನಿಟರಿ ಪ್ಯಾಡ್ ಹಾಗೂ ಟ್ಯಾಂಪೂನ್‍ಗಳಿಗಿಂತಲೂ ಇದು ಪರಿಣಾಮಕಾರಿ ಹಾಗೂ ಕಲಿಕಾ ವಾತಾವರಣದಲ್ಲಿ ಬಳಕೆಗೆ ಅತಿ ಅನುಕೂಲವಾಗಿದೆ. ಮೆನ್ಸ್‌ಟ್ರುಯಲ್ ಕಪ್ (ಮುಟ್ಟಿನ ಕಪ್)ಗಳನ್ನು ಅಧಿಕ ಸಮಯದವರೆಗೆ ಅಂದರೆ 8 ರಿಂದ 12 ಗಂಟೆಗಳ ಅವಧಿಯವರೆಗೆ ಬಳಸಬಹುದು. ಸೂಕ್ತ ನಿರ್ವಹಣೆಯೊಂದಿಗೆ 8 ರಿಂದ 10 ವರ್ಷಗಳವರೆಗೆ ಸಮರ್ಥನೀಯವಾಗಿ ಮರುಬಳಕೆ ಮಾಡಬಹುದು.


ಮರು ಬಳಕೆಯ ಮುಟ್ಟಿನ ಕಪ್


"ಮೈತ್ರಿ" ಮುಟ್ಟಿನ ಕಪ್ ಗಳು ಪರಿಸರ ಸ್ನೇಹಿಯಾಗಿದ್ದು ಮರುಬಳಕೆ ಮಾಡಬಹುದಾಗಿರುವುದರಿಂದ ಯಾವುದೇ ವಿಲೇವಾರಿ ಸಮಸ್ಯೆಗಳಿರುವುದಿಲ್ಲ. ಹದಿಹರೆಯದ ಹೆಣ್ಣುಮಕ್ಕಳಲ್ಲಿ ಋತುಚಕ್ರದ ನೈರ್ಮಲ್ಯ ನಿರ್ವಹಣೆಗಾಗಿ ಪರಿಸರ ಸ್ನೇಹಿ ವಿಧಾನಗಳನ್ನು ಪರಿಚಯಿಸಿ ಬಳಕೆಗಾಗಿ ಪ್ರೋತ್ಸಾಹಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ. ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ನೋಂದಾಯಿತ 16 ರಿಂದ 18 ವರ್ಷ ವಯಸ್ಸಿನ ಹದಿಹರೆಯದ ಹೆಣ್ಣುಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.


ಬಿಳಿಗಿರಿರಂಗನಬೆಟ್ಟದಲ್ಲಿ ಉದ್ಘಾಟನಾ ಸಮಾರಂಭ


ಚಾಮರಾಜನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮೈತ್ರಿ ಮುಟ್ಟಿನ ಕಪ್ ಶುಚಿ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವನ್ನು ಜುಲೈ 6ರಂದು ಬೆಳಿಗ್ಗೆ 11 ಗಂಟೆಗೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಲಾಗಿದೆ.


ಇದನ್ನೂ ಓದಿ: Chamundeshwari: ಆಷಾಢದಲ್ಲಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ದೀಪ ಹಚ್ಚೋದ್ಯಾಕೆ? ಏನಿದರ ವಿಶೇಷತೆ?


ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿ. ಸೋಮಣ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ. ಸುಧಾಕರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೊಳ್ಳೇಗಾಲ ಶಾಸಕ ಎನ್. ಮಹೇಶ್  ಲೋಕಸಭಾ ಸದಸ್ಯ ವಿ. ಶ್ರೀನಿವಾಸಪ್ರಸಾದ್, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಪಟು ವೇದಾ ಕೃಷ್ಣಮೂರ್ತಿ, ಚಲನಚಿತ್ರ ನಟಿ ಅಮೃತ ಅಯ್ಯಂಗಾರ್ ಪಾಲ್ಗೊಳ್ಳಲಿದ್ದಾರೆ.

top videos
    First published: