• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnika: ಭಾಗ್ಯದ ನಿಧಿ ತುಂಬಿ ತುಳುಕುತ್ತಲೇ ಪರಾಕ್; ಮೈಲಾರ ಗೊರವಯ್ಯ ಕಾರ್ಣಿಕ

Karnika: ಭಾಗ್ಯದ ನಿಧಿ ತುಂಬಿ ತುಳುಕುತ್ತಲೇ ಪರಾಕ್; ಮೈಲಾರ ಗೊರವಯ್ಯ ಕಾರ್ಣಿಕ

ಮೈಲಾರ ಕಾರ್ಣಿಕ

ಮೈಲಾರ ಕಾರ್ಣಿಕ

ಪ್ರತಿ ಕಾರ್ಣಿಕೋತ್ಸವದಂದು ಬಿಲ್ಲು ಏರುವ ಗೊರವಯ್ಯ ಕಾರ್ಣಿಕ ನುಡಿಯುತ್ತಲೇ ಕೆಳಗೆ ಬೀಳುತ್ತಾರೆ. ಸುತ್ತಲು ನಿಂತಿರುವ ಭಕ್ತರು ಗೊರವಯ್ಯ ಅವರನ್ನು ಹಿಡಿಯುತ್ತಾರೆ.

  • News18 Kannada
  • 2-MIN READ
  • Last Updated :
  • Bellary, India
  • Share this:

ವಿಜಯನಗರ: ಜಿಲ್ಲೆಯ ಹರಪನಹಳ್ಳಿ (Harapanahalli) ಪಟ್ಟಣದ ಹೊರವಲಯದಲ್ಲಿರುವ ಮೈಲಾರ ಗೊರವಯ್ಯ ಕಾರ್ಣಿಕ (Mailara Goravaiah Karnika) ನುಡಿಯುತ್ತಾರೆ. ಪ್ರತಿವರ್ಷ ನುಡಿಯುವ ಕಾರ್ಣಿಕ ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿರುತ್ತದೆ. ಈ ಕಾರ್ಣಿಕ ಇಡೀ ವರ್ಷದ ಭವಿಷ್ಯವನ್ನು (Karnika Prediction) ನುಡಿಯುತ್ತದೆ. ಅದರಲ್ಲಿಯೂ ಈ ವರ್ಷ ಚುನಾವಣೆ ಹಿನ್ನೆಲೆ ಕಾರ್ಣಿಕ ಏನಾಗಿರಬಹುದು ಎಂದು ಭಕ್ತರು ಸೇರಿದಂತೆ ಜನರು ಕಾತುರದಿಂದ ಕಾಯುತ್ತಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಮೈಲಾರದಲ್ಲಿ ಗೊರವಯ್ಯ ಬಿಲ್ಲನ್ನು ಏರಿ ಕಾರ್ಣಿಕ ನುಡಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರೂ ಗೊರವಯ್ಯ ಬಿಲ್ಲು ಏರಿದಂತೆ ಇಡೀ ಜನಸ್ತೋಮ ಶಾಂತವಾಗುತ್ತದೆ.


ಈ ಬಾರಿ ಬಿಲ್ಲನ್ನು ಏರಿದ ಗೊರವಯ್ಯ, ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್ ಎಂದು ಕಾರ್ಣಿಕ ನುಡಿದರು. ಈ ವರ್ಷ ಕಾರ್ಣಿಕವನ್ನು ಶುಭ ಸಂದೇಶ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ವರ್ಷ ಉತ್ತಮ ಮಳೆ-ಬೆಳೆಯಾಗಲಿದೆ ಎಂದು ಅರ್ಚಕರು ಕಾರ್ಣಿಕವನ್ನು ವಿವರಿಸಿದ್ದಾರೆ.


ಮೈಲಾರ ಗೊರವಯ್ಯ ಮೈಲಾರಲಿಂಗೇಶ್ವರ ದೇವಾಲಯ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿದೆ. ಪ್ರತಿ ಕಾರ್ಣಿಕೋತ್ಸವದಂದು ಬಿಲ್ಲು ಏರುವ ಗೊರವಯ್ಯ ಕಾರ್ಣಿಕ ನುಡಿಯುತ್ತಲೇ ಕೆಳಗೆ ಬೀಳುತ್ತಾರೆ. ಸುತ್ತಲು ನಿಂತಿರುವ ಭಕ್ತರು ಗೊರವಯ್ಯ ಅವರನ್ನು ಹಿಡಿಯುತ್ತಾರೆ.


ಚುನಾವಣೆ ಬಗ್ಗೆ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ


ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ. ಆಗೋದಿಲ್ಲ ಅಂತ ಹೇಳೋದಿಲ್ಲ, ಆದರೆ ಈ ಬಗ್ಗೆ ನಿಖರವಾಗಿ ಯುಗಾದಿ ಭವಿಷ್ಯದಲ್ಲಿ ಹೇಳ್ತೀನಿ. ಆದರೆ ಚುನಾವಣೆಯಲ್ಲಿ ರಾಜಕೀಯ ಅಸ್ಥಿರತೆ ಇದ್ದು, ರಾಜಕೀಯ ಪಕ್ಷಗಳು ಒಡೆಯುತ್ತವೆ. ಪಕ್ಷಾಂತರಗಳು ಇರುತ್ತವೆ, ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಚುನಾವಣೆ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ.


ಎಷ್ಟು ಸುಖ ಇದೆಯೋ ಅಷ್ಟೇ ಕಷ್ಟ ಇದೆ


ರಾಜಕೀಯ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೋಡಿ ಶ್ರೀಗಳು, ಈ ಬಗ್ಗೆ ನಿಖರ ಮಾಹಿತಿ ನೀಡಲು ಯುಗಾದಿ ಆಗಬೇಕು. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಬಳಿಕ ಭವಿಷ್ಯದ ನುಡಿಗಳನ್ನು ಹೇಳುತ್ತೇವೆ. ಸಂಕ್ರಾಂತಿ ಫಲ ಇರುವುದು ರಾಜರು, ರೈತರು, ವ್ಯಾಪಾರಸ್ಥರಿಗೆ ಬರುತ್ತದೆ. ಇದರ ಪ್ರಕಾರ ಮುಂದಿನ ಎರಡ್ಮೂರು ಇಸವಿ ಬಹಳ ಕಷ್ಟ ಇದೆ. ಎಷ್ಟು ಸುಖ ಇದೆಯೋ ಅಷ್ಟೇ ಕಷ್ಟ ಇದೆ ಎಂದರು.




ಹೊಸಪೇಟೆಯಲ್ಲಿ ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದರೆ ನಿಲಲು ಬಾರದು ಎಂದು ಹೇಳಿದ್ದೇವು. ನಾವು ಹೇಳಿದ ಮರು ದಿನವೇ ನೇಪಾಳದಲ್ಲಿ ವಿಮಾನ ಅಪಘಾತವಾಗಿ 50 ಮಂದಿ ಸಾವನ್ನಪ್ಪಿದ್ದರು. ಆದ್ದರಿಂದ ಯುಗಾದಿ ಬಳಿಕ ಮುಂದಿನ ವಿವರಗಳನ್ನು ಹೇಳುತ್ತೇನೆ ಎಂದರು.


ಎಚ್‌ಡಿಕೆ ರಹಸ್ಯ ಬಿಚ್ಚಿಡ್ತೀನಿ ಎಂದ ರವಿಕುಮಾರ್


ಬಿಜೆಪಿಗರು ಸಿ.ಡಿ ಸಂಕಲ್ಪ ಯಾತ್ರೆ (Sankalp Yatra) ಮಾಡಲಿ ಎಂದು ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಬಿಜೆಪಿ ಎಂಎಲ್​ಸಿ ರವಿಕುಮಾರ್ (MLC Ravi Kumar) ತಿರುಗೇಟು ನೀಡಿದ್ದಾರೆ.


ಇದನ್ನೂ ಓದಿ: CM Ibrahim: 13 ಮಂದಿಗೆ ಮಂಚದ ಮೇಲೆ ಮಲಗಿಸಿ ಸರ್ಕಾರ ರಚಿಸಿದ್ದೀರಿ, ನಾಚಿಕೆಯಾಗಲ್ವಾ? - ಸಿಎಂ ಇಬ್ರಾಹಿಂ ಕೆಂಡ


ಮಾಧ್ಯಮಗಳೊಂದಿಗೆ ಮಾತನಾಡಿದ ರವಿಕುಮಾರ್, ಕುಮಾರಸ್ವಾಮಿಯವರದ್ದು ತಾಜ್ ವೆಸ್ಟೆಂಡ್ (Taj West End), ತೋಟದ ಮನೆಯಲ್ಲಿ ಏನೇನು ಆಗಿದೆ ಎಂದು ಎಳೆ ಎಳೆಯಾಗಿ ಬೇಕಿದ್ದರೆ ನಾವು ಬಿಚ್ಚಿಡ್ತೀವಿ ಎಂದಿದ್ದಾರೆ. ಅಲ್ಲದೆ ಅವರದ್ದು ಸಿ.ಡಿ ಇದೆಯಾ ಎಂದು ಪ್ರಶ್ನಿಸಿದ್ದಕ್ಕೆ, ಹೌದು ಅವರು ಮುಂದೆ ಮಾತಾಡಲಿ. ನಾವು ಅದಕ್ಕೆ ಸರಿಯಾಗಿ ಉತ್ತರ ಕೊಡ್ತೀವಿ ಎಂದು ರವಿಕುಮಾರ್ ಸವಾಲ್ ಹಾಕಿದ್ದಾರೆ.

Published by:Mahmadrafik K
First published: