ಮೈಸೂರು ಮೃಗಾಲಯದಲ್ಲಿ ಮಾವುತನನ್ನೇ ತುಳಿದ ಸಾಯಿಸಿದ ಆನೆ

ಮೃತ ಮಾವುತ ಹರೀಶ್ ಅಭಿ ಎಂಬ ಆನೆಯನ್ನು ಹಾರೈಕೆ ಮಾಡುತ್ತಿದ್ದರು. ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇವತ್ತು ಕೆಲಸಕ್ಕೆ ಹಾಜರಾಗಿದ್ದರು. ಈ ಹಿಂದಿನಂತೆಯೇ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿದೆ.

news18-kannada
Updated:August 7, 2020, 10:32 PM IST
ಮೈಸೂರು ಮೃಗಾಲಯದಲ್ಲಿ ಮಾವುತನನ್ನೇ ತುಳಿದ ಸಾಯಿಸಿದ ಆನೆ
ಆನೆಯೊಂದಿಗೆ ಮೃತ ಹರೀಶ್
  • Share this:
ಮೈಸೂರು(ಆ.07): ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯದಲ್ಲಿ ಇಂದು ಅವಘಡವೊಂದು ಸಂಭವಿಸಿದೆ. ವಿಶ್ವವಿಖ್ಯಾತ ಮೈಸೂರು ಮೃಗಾಲಯದ ಆನೆಯೊಂದು ತನ್ನ ಸೇವಕನನ್ನೇ ತುಳಿದು ಸಾಯಿಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಹರೀಶ್(38) ಎಂಬವರೇ ತಾವು ಸಲಹುತ್ತಿದ್ದ ಆನೆಯಿಂದ ಹತ್ಯೆಗೀಡಾದವರು. ಆನೆ ತುಳಿತಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬಳ್ಳಾರಿ ನಾಲಾ ಪ್ರವಾಹದಲ್ಲಿ ಸಿಲುಕಿದ 45ಕ್ಕೂ ಹೆಚ್ಚು ನಾಯಿಗಳ ಮೂಕ ರೋಧನೆ..!

ಮೃತ ಮಾವುತ ಹರೀಶ್ ಅಭಿ ಎಂಬ ಆನೆಯನ್ನು ಹಾರೈಕೆ ಮಾಡುತ್ತಿದ್ದರು. ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇವತ್ತು ಕೆಲಸಕ್ಕೆ ಹಾಜರಾಗಿದ್ದರು. ಈ ಹಿಂದಿನಂತೆಯೇ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿದೆ.

ಇದರಿಂದ ತಬ್ಬಿಬ್ಬಾದ ಇತರೆ ಸಿಬ್ಬಂದಿ ಕೂಡಲೇ ಹರೀಶನನ್ನು ಆನೆಯಿಂದ ಬಿಡಿಸಿಕೊಂಡು ತಕ್ಷಣವೇ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದ್ದಾರೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಹರೀಶ್​ ಮೈಸೂರಿನ ಲಲಿತಾದ್ರಿಪುರ ಗ್ರಾಮದ ನಿವಾಸಿಯಾಗಿದ್ದು, ಗುತ್ತಿಗೆ ನೌಕರನಾಗಿ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪ್ರಕರಣ ಕುರಿತು ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by: Latha CG
First published: August 7, 2020, 10:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading