ಮಂತ್ರಿ ಸ್ಥಾನವೋ, ನಿಗಮ ಮಂಡಳಿಯೋ: ಕೊಟ್ಟ ಮಾತು ಉಳಿಸಿಕೊಳ್ಳಿ; ಮಹೇಶ್​ ಕುಮಟಳ್ಳಿ

ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ನಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ಯಾವಾಗ ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ - ಕುಮಟಳ್ಳಿ

ಅಥಣಿ ಕ್ಷೇತ್ರದ ಬಿಜೆಪಿ ಮಹೇಶ್ ಕುಮಟಳ್ಳಿ

ಅಥಣಿ ಕ್ಷೇತ್ರದ ಬಿಜೆಪಿ ಮಹೇಶ್ ಕುಮಟಳ್ಳಿ

  • Share this:
ಬೆಂಗಳೂರು (ಜ.28): ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಂತೆ ಮಂತ್ರಿ ಸ್ಥಾನ ತಪ್ಪುವ ಆತಂಕದಲ್ಲಿ ಬಿಜೆಪಿ ನೂತನ ಶಾಸಕರಿದ್ದಾರೆ. ಪಕ್ಷದಲ್ಲಿ ಹಿರಿಯ ಹಾಗೂ ಹೊಸಬರ ನಡುವಿನ ತಿಕ್ಕಾಟ ಈ ಬೆಳವಣಿಗೆ ಕಾರಣ ಎನ್ನಲಾಗಿದೆ.

ಪಕ್ಷದಲ್ಲಿ ಹೊಸಬರ ಜೊತೆ ಮೂಲ ಬಿಜೆಪಿಗರು ಕೂಡ ಹುದ್ದೆಗೆ ಬೇಡಿಕೆ ಇಟ್ಟಿದ್ದಾರೆ. ಇದೇ ಹಿನ್ನೆಲೆ ಸಿಎಂ, ಗೆದ್ದವರಿಗೆ ಮಾತ್ರ ಮಂತ್ರಿ ಸ್ಥಾನ ಎಂದು ಘೋಷಣೆ ಮಾಡಿದ್ದಾರೆ. ಈ ನಡುವೆ ಪಕ್ಷ ತೊರೆದು ಬಂದಿರುವ ನಾಯಕರಿಗೆ ಹುದ್ದೆ ಅನಿವಾರ್ಯವಾಗಿದ್ದು, ಮಂತ್ರಿಗಿರಿಯೋ, ನಿಗಮ ಅಧ್ಯಕ್ಷ ಸ್ಥಾನವೋ ಯಾವುದೋ ಒಂದು ನೀಡಿದರೆ ಸಾಕು ಎಂಬ ಮನಸ್ಥಿತಿ ಮೂಡಿದೆ.

ಈ ಕುರಿತು ಮಾತನಾಡಿರುವ ಮಹೇಶ್​ ಕುಮಟಳ್ಳಿ, ಮಂತ್ರಿ ಸ್ಥಾನವೋ, ನಿಗಮ ಮಂಡಳಿಯೋ ಗೊತ್ತಿಲ್ಲ. ಆದರೆ ಸಿಎಂ ಕೊಟ್ಟ ಮಾತನ್ನ ಉಳಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.

ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ನಮ್ಮನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ಯಾವಾಗ ಎನ್ನುವುದನ್ನು ಪಕ್ಷ ತೀರ್ಮಾನ ಮಾಡುತ್ತದೆ. ಫೆಬ್ರವರಿ 17ರ ಒಳಗೆ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.

ಇದನ್ನು ಓದಿ: ದೆಹಲಿಗೆ ಹೋಗಿ 5 ದಿನವಾದರೂ ಡಿಕೆಶಿಗೆ ಸಿಕ್ಕಿಲ್ಲ ಸೋನಿಯಾ ಭೇಟಿ ಭಾಗ್ಯ

ಸಚಿವ ಸ್ಥಾನ ಕೈ ತಪ್ಪುವ ಕುರಿತು ಪ್ರತಿಕ್ರಿಯಿಸಿದ ಆರ್​ ಶಂಕರ್​, ಸಚಿವ ಸ್ಥಾನ ತಪ್ಪುತ್ತೆ ಎನ್ನಿಸುವುದಿಲ್ಲ. ಮಂತ್ರಿಗಿರಿ ನೀಡುವುದು ಯಡಿಯೂರಪ್ಪ ವಿವೇಚನೆಗೆ ಬಿಟ್ಟ ವಿಚಾರ. ಪಕ್ಷ, ವ್ಯಕ್ತಿ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿಲ್ಲ. ಯಾವುದೇ ರೀತಿಯ ವ್ಯತಿರಿಕ್ತ ಹೇಳಿಕೆ ನೀಡಿಲ್ಲ. ಸಿಎಂ ಮಾತನ್ನು‌ ನಂಬಿ ಕೆಟ್ಟಿದ್ದೇನೆ ಎನ್ನಿಸಲ್ಲ. ಅವರು ಹೇಳಿದಂತೆ ಚುನಾವಣೆಗೆ ಸ್ಪರ್ಧಿಸಲಿಲ್ಲ ಅಷ್ಟೆ ಎಂದರು.
First published: