HOME » NEWS » State » MAHESH KUMATALLI SAYS IF HE NOT GET MINISTRY POST HE WILL WORK AS MLA SESR

ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿ ಕೆಲಸ: ಮಹೇಶ್​ ಕುಮಟಳ್ಳಿ ಅಚ್ಚರಿ ಹೇಳಿಕೆ

 ಸಚಿವರಾಗಲು ನನಗೆ ಯಾವುದೇ ಗಡಿಬಿಡಿ‌ ಇಲ್ಲ. ಸಚಿವ ಮಾಡಿದರೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೈ ಸಾಮರ್ಥ್ಯ ಮೀರಿ ಕೆಲಸ ನಿರ್ವಹಿಸುತ್ತೇನೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ರೆ ಶಾಸಕನಾಗಿ ಕೆಲಸ ಮುಂದುವರೆಸುತ್ತೇನೆ

news18-kannada
Updated:January 30, 2020, 1:02 PM IST
ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿ ಕೆಲಸ: ಮಹೇಶ್​ ಕುಮಟಳ್ಳಿ ಅಚ್ಚರಿ ಹೇಳಿಕೆ
ಶಾಸಕ ಮಹೇಶ್ ಕುಮಟಳ್ಳಿ​​
  • Share this:
ಬೆಂಗಳೂರು(ಜ. 30): ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬರುತ್ತಿರುವಂತೆಯೇ, ಯಾರಿಗೆ ಸಚಿವ ಸ್ಥಾನ ಸಿಗಲಿದೆ,  ಇಲ್ಲ ಎಂಬ ಭಯ ಮತ್ತು ಅನುಮಾನ ಬಿಜೆಪಿ ನೂತನ ಶಾಸಕರಲ್ಲಿ ಮೂಡುತ್ತಿದೆ. ಈಗಾಗಲೇ ಮಂತ್ರಿ ಸ್ಥಾನದ ನಿರೀಕ್ಷೆಇಟ್ಟುಕೊಂಡವರ ಸಂಖ್ಯೆ ಹೆಚ್ಚಿದೆ. ಉಪಚುನಾವಣೆಯಲ್ಲಿ ಸೋತ ನಾಯಕರು ಹಾಗೂ ಪಕ್ಷದ ಮೂಲ ಬಿಜೆಪಿಗರೂ ಇರುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಯಾರು ಮಂತ್ರಿಗಿರಿ ಪಡೆಯುವಲ್ಲಿ ಸಫಲರಾಗಲಿದ್ದಾರೆ ಎಂಬುದು ಇನ್ನೆರಡು ದಿನದಲ್ಲಿ ತಿಳಿಯಲಿದೆ. ಈ ಮಧ್ಯೆ ಮಂತ್ರಿಸ್ಥಾನದ ಬಗ್ಗೆ ಗೊಂದಲಕ್ಕೆ ಒಳಗಾಗಿರುವ ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಸಚಿವ ಸ್ಥಾನ ಸಿಗದಿದ್ದರೆ ಶಾಸಕನಾಗಿ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಸಚಿವರಾಗಲು ನನಗೆ ಯಾವುದೇ ಗಡಿಬಿಡಿ‌ ಇಲ್ಲ. ಸಚಿವ ಮಾಡಿದರೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಯಾವ ಖಾತೆ ಕೊಟ್ಟರೂ ಸಾಮರ್ಥ್ಯ ಮೀರಿ ಕೆಲಸ ನಿರ್ವಹಿಸುತ್ತೇನೆ. ಒಂದು ವೇಳೆ ಸಚಿವ ಸ್ಥಾನ ಸಿಗದಿದ್ರೆ ಶಾಸಕನಾಗಿ ಕೆಲಸ ಮುಂದುವರೆಸುತ್ತೇನೆ ಎಂದಿದ್ದಾರೆ.

ಇದೇ ವೇಳೆ ಸೋತವರಿಗೆ ಸಚಿವ‌ ಸ್ಥಾನ ವಿಚಾರ ಕುರಿತು ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಜನಾದೇಶ ಸಿಗಲಿಲ್ಲ. ಆದರೆ, ಅವರಿಗೆ  ಸೂಕ್ತ ಸ್ಥಾನ ಕೊಡುವ ಭರವಸೆ ಇದೆ. ನಮ್ಮ ಜೊತೆಯೇ ಸಚಿವ ಮಾಡಲಿ ಎಂಬ ಆಸೆ ಇದೆ. ನಾವು ಯಾರೂ ಸಿಎಂ ಮೇಲೆ ಮುನಿಸಿಕೊಂಡಿಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧ, ಮುನಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ವಿಚಾರ ಕುರಿತು ಮಾತನಾಡಿದ ಅವರು, ಬೆಳಗಾವಿಗೆ ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಒಳ್ಳೆಯದು. ರಮೇಶ್ ಜಾರಕಿಹೊಳಿಯವರಿಗೆ ಡಿಸಿಎಂ ಕೊಡಬೇಕು ಅನ್ನೋದು ನಮ್ಮ ಆಗ್ರಹವೂ ಇದೆ. ಈಗಾಗಲೇ ಸವದಿಯವರು ಬೆಳಗಾವಿಯಿಂದ ಡಿಸಿಎಂ ಆಗಿದ್ದಾರೆ. ಒಂದೇ ಜಿಲ್ಲೆಯಿಂದ ಇಬ್ಬರು ಡಿಸಿಎಂ ಆಗಿ ಕೆಲಸ ಮಾಡುವುದು ಇತಿಹಾಸವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನು ಓದಿ: ಮಂತ್ರಿ ಸ್ಥಾನವೋ, ನಿಗಮ ಮಂಡಳಿಯೋ: ಕೊಟ್ಟ ಮಾತು ಉಳಿಸಿಕೊಳ್ಳಿ; ಮಹೇಶ್​ ಕುಮಟಳ್ಳಿ

ಇನ್ನು ಕಳೆದೆರಡು ದಿನದ ಹಿಂದೆ ಮಾತನಾಡಿದ್ದ ಅವರು, ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಸಚಿವ ಸ್ಥಾನ ನೀಡದಿದ್ದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನಾದರೂ ನೀಡಿ, ಮಾತಿಗೆ ತಕ್ಕಂತೆ ನಡೆಯಲಿ ಎಂದು ಆಗ್ರಹಿಸಿದ್ದರು.
Youtube Video
First published: January 30, 2020, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories