HOME » NEWS » State » MAHESH KUMATALLI FACEBOOK POST GOES VIRAL SESR

ನಾಟ್​ ರೀಚಬಲ್​ ಆದ ಮಹೇಶ್​ ಕುಮಟಳ್ಳಿ ; ಕೆಳಬಿದ್ದ ಹೂ ಅರಳುವುದಿಲ್ಲ ಎಂದು ನಿಗೂಢವಾಗಿ ಬರೆದ ಅಥಣಿ ಶಾಸಕ

ಮಹೇಶ್ ಕುಮಟಳ್ಳಿ ಅವರ ಮಾತುಗಳಲ್ಲಿರುವ ಈ ನಿಗೂಢ ಪದಗಳು ಅವರ ಮುಂದಿನ ದಾರಿಯ ಸೂಚಕವಾಗಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಮುಂದಿನ ದಿನಗಳಲ್ಲಿ ತಮಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಅವರಿಗೆದೆಯಾ ಅಥವಾ ಹೊಸ ರಾಜಕೀಯ ತಿರುವಿನ ನಿರೀಕ್ಷೆಯಲ್ಲಿದ್ದಾರಾ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು.

Seema.R | news18-kannada
Updated:February 6, 2020, 12:39 PM IST
ನಾಟ್​ ರೀಚಬಲ್​ ಆದ ಮಹೇಶ್​ ಕುಮಟಳ್ಳಿ ; ಕೆಳಬಿದ್ದ ಹೂ ಅರಳುವುದಿಲ್ಲ ಎಂದು ನಿಗೂಢವಾಗಿ ಬರೆದ ಅಥಣಿ ಶಾಸಕ
ಶಾಸಕ ಮಹೇಶ್ ಕುಮಟಳ್ಳಿ​​
  • Share this:
ಬೆಂಗಳೂರು (ಫೆ.6): ಉಪಚುನಾವಣೆಯಲ್ಲಿ ಗೆದ್ದರೂ ಮಂತ್ರಿ ಸ್ಥಾನ ನೀಡದ ಸಿಎಂ ಬಿಎಸ್ ಯಡಿಯೂರಪ್ಪ ನಡೆಗೆ ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ  ನೂತನ ಶಾಸಕರು ಪ್ರಮಾಣ ವಚನಕ್ಕೆ ಗೈರಾದ ಅವರು ಯಾರ ಸಂಪರ್ಕಕ್ಕೂ ಕೂಡ ಸಿಗುತ್ತಿಲ್ಲ.

ರಮೇಶ್​ ಜಾರಕಿಹೊಳಿ ಆಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್​ ಕುಮಟಳ್ಳಿ ಮಂತ್ರಿ ಸ್ಥಾನದಿಂದ ಹೆಸರನ್ನು ಕೈ ಬಿಟ್ಟ ಬಗ್ಗೆ ಈ ಮುಂಚೆ ಪ್ರತಿಕ್ರಿಯೆ ನೀಡಿದ್ದ ಅವರು, ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಬೇಸರವಿಲ್ಲ. ಆದರೆ, ನೋವಿದೆ ಎಂದಿದ್ದಾರೆ.

ಅಲ್ಲದೇ ತಮಗೆ ಮಂತ್ರಿ ಸ್ಥಾನ ಕೈ ತಪ್ಪಿದಕ್ಕೆ ಕಾರಣ ಯಾರು ಎಂಬುದು ತಿಳಿದಿಲ್ಲ. ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಇದಕ್ಕೆಲ್ಲಾ ಉತ್ತರ ಸಿಗಲಿದೆ. ಮಂತ್ರಿ ಸ್ಥಾನ ಸಿಗದಿದ್ದರೂ ಪರ್ಯಾಯ ಅಧಿಕಾರ ಕೊಡುತ್ತೇನೆ ಎಂಬ ಭರವಸೆ ಸಿಕ್ಕಿದೆ ಎಂದರು.

ಈ ನಡುವೆ ಫೇಸ್​ಬುಕ್​ನಲ್ಲಿ ಮಾರ್ಮಿಕವಾಗಿ ಬರೆದ ಪೋಸ್ಟ್​ ಅವರೊಳಗಿನ ಬೇಸರ ಹಾಗೂ ಅಸಮಾಧಾನವನ್ನು ಹೊರ ಹಾಕಿದೆ.



"ಮರದಿಂದ ಕೆಳಬಿದ್ದ ಹೂ ಮತ್ತೆ ಅರಳುವುದಿಲ್ಲ..
ಆದರೆ ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ. ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ,ಎಂಬುದಕ್ಕಿಂತ ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ, ನಮ್ಮ ಗುರಿ ಮುಟ್ಟಬೇಕಿದೆ ಎಂಬುದು ಮುಖ್ಯವಾಗುತ್ತದೆ. "ಆತ್ಮವಿಶ್ವಾಸ, ನಂಬಿಕೆ,ಧೈರ್ಯ"ನಮ್ಮ ಪ್ರಬಲ ಅಸ್ತ್ರಗಳು ಎಂದಿದ್ದಾರೆ. ಇದನ್ನು ಓದಿ: ಕುತೂಹಲ ಮೂಡಿಸಿದ ಉಮೇಶ್ ಕತ್ತಿ ನಡೆ, ಬಿಎಸ್​ವೈಗೆ ಟೆನ್ಷನ್​; ಬಂಡಾಯದ ಬಾವುಟ ಹಾರಿಸ್ತಾರಾ ಬಿಜೆಪಿ ಹಿರಿಯ ನಾಯಕ?

ಮಹೇಶ್ ಕುಮಟಳ್ಳಿ ಅವರ ಮಾತುಗಳಲ್ಲಿರುವ ಈ ನಿಗೂಢ ಪದಗಳು ಅವರ ಮುಂದಿನ ದಾರಿಯ ಸೂಚಕವಾಗಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಮುಂದಿನ ದಿನಗಳಲ್ಲಿ ತಮಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಅವರಿಗೆದೆಯಾ ಅಥವಾ ಹೊಸ ರಾಜಕೀಯ ತಿರುವಿನ ನಿರೀಕ್ಷೆಯಲ್ಲಿದ್ದಾರಾ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು.

ಮೊಬೈಲ್​ ಸ್ವಿಚ್​ ಆಫ್​

ಇನ್ನು ಸಚಿವಾಕಾಂಕ್ಷಿಯಾಗಿದ್ದ ಕುಮಟಳ್ಳಿ ಇಂದು ಬೆಳಗ್ಗೆ ಶಾಸಕರ ಭವನದಿಂದ ಹೊರಟ ಬಳಿಕ ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ. ಫೋನ್​ ಸಂಪರ್ಕಕ್ಕೂ ಸಿಗದೇ ಮೊಬೈಲ್​ ಅನ್ನು ಅವರು ಆಫ್​ ಮಾಡಿದ್ದಾರೆ.

 

 
First published: February 6, 2020, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories