ಮಹಾತ್ಮಾ ಗಾಂಧಿಯವರ ಅಹಿಂಸಾ ತತ್ವದಿಂದ ಸ್ವಾತಂತ್ರ್ಯ ಬಂತು ಎಂಬುದು ಅರ್ಧ ಸತ್ಯ; ಸಿ.ಟಿ. ರವಿ ಹೇಳಿಕೆ

ಸ್ವಾತಂತ್ರ್ಯ ಬಂದ ಬಳಿಕ ಅಂಬೇಡ್ಕರ್ ಅವರಿಗೂ ನ್ಯಾಯ ಸಿಗಲಿಲ್ಲ. ಸ್ವಾತಂತ್ರ್ಯಾ ನಂತರ ಏಕೆ ಭಾರತ ದೇಶ ವಿಭಜನೆ ಆಯ್ತು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕರೆ ಸಾವರ್ಕರ್ ಯಾರು ಎನ್ನೋದು ಅರ್ಥವಾಗುತ್ತೆ" ಎಂದು ಸಿ.ಟಿ. ರವಿ ಹೇಳಿದ್ದಾರೆ.

ಸಿ.ಟಿ. ರವಿ.

ಸಿ.ಟಿ. ರವಿ.

 • Share this:
  ಬೆಂಗಳೂರು (ಆಗಸ್ಟ್​ 16); ಈ ಹಿಂದೆ ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ "ಮಹಾತ್ಮಾ ಗಾಂಧಿ ಅವರ ಅಹಿಂಸಾ ಮಾರ್ಗದ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ಬಂದಿಲ್ಲ" ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಭಾರೀ ಚರ್ಚೆಗೆ ಮತ್ತು ಟೀಕೆಗೆ ಗ್ರಾಸವಾಗಿದ್ದರು. ಇದೀಗ ಬಿಜೆಪಿ ಮಾಜಿ ಸಚಿವ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಸಹ ಮತ್ತೆ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಸಾವರ್ಕರ್ ಅವರನ್ನು ಹೊಗಳುವ ಭರದಲ್ಲಿ"ಮಹಾತ್ಮ ಗಾಂಧಿಯವರ ಅಹಿಂಸಾ ತತ್ವದಿಂದ ಸ್ವಾತಂತ್ರ್ಯ ಬಂತು ಎಂಬುದು ಅರ್ಧವಷ್ಟೇ ಸತ್ಯ" ಎಂದು ಹೇಳುವ ಮೂಲಕ ಇದೀಗ ಹೊಸ ವಿವಾದಕ್ಕೆ ವೇದಿಕೆ ಕಲ್ಪಿಸಿದ್ದಾರೆ.

  ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಇಂದು ವಿಕ್ರಮ್ ಸಂಪತ್ ಬರೆದಿರುವ ವೀರ್ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, "ವೀರ ಸಾವರ್ಕರ್ ಎಲ್ಲಾರಿಗೂ ರೋಲ್ ಮಾಡಲ್. ಹಿಂದುತ್ವದ ಬಗ್ಗೆ ಮೊದಲು ಯೋಚನೆ ಮಾಡಿದವರೇ ಸಾವರ್ಕರ್. ಆದರೆ ಆಗ ಅದು ಕಾಂಟ್ರವರ್ಸಿ ಆಗಿತ್ತು.

  ಈಗ ಹಿಂದುತ್ವವನ್ನು ಎಲ್ಲಾರೂ ಒಪ್ಪಿದ್ದಾರೆ. ನಮ್ಮ ಇತಿಹಾಸ ಕೆಲವರಿಗೆ ಅನ್ಯಾಯ ಮಾಡಿದೆ. ಕೆಲವರಿಗೆ ಆತ್ಮಚರಿತೆ ಬರೆಯಲು ಟೇಬಲ್ ಇತ್ತು ಪೆನ್ ಇತ್ತು. ಸಾವರ್ಕರ್ ಗೆ ಜೈಲಿನಲ್ಲಿ ಇದ್ದಾಗ ಈ ಯಾವ ಸವಲತ್ತು ಇರಲಿಲ್ಲ. ಹೀಗಾಗಿ ಈಗ ಅವರ ಬಗೆಗಿನ ಬರಹಗಳು ಪ್ರಕಟವಾಗುತ್ತಿವೆ. ಇನ್ನೂ ಮಹಾತ್ಮ ಗಾಂಧಿಯವರ ಅಹಿಂಸಾ ತತ್ವದಿಂದ ಸ್ವಾತಂತ್ರ್ಯ ಬಂತು ಎಂಬುದು ಕೇವಲ ಅರ್ಧವಷ್ಟೇ ಸತ್ಯ" ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

  "ಸ್ವಾತಂತ್ರ್ಯ ಬಂದ ಬಳಿಕ ಅಂಬೇಡ್ಕರ್ ಅವರಿಗೂ ನ್ಯಾಯ ಸಿಗಲಿಲ್ಲ. ಸ್ವಾತಂತ್ರ್ಯಾ ನಂತರ ಏಕೆ ಭಾರತ ದೇಶ ವಿಭಜನೆ ಆಯ್ತು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕರೆ ಸಾವರ್ಕರ್ ಯಾರು ಎನ್ನೋದು ಅರ್ಥವಾಗುತ್ತೆ" ಎಂದು ಸಿ.ಟಿ. ರವಿ ಹೇಳಿದ್ದಾರೆ.

  ಇದನ್ನೂ ಓದಿ: ಅಫ್ಘಾನ್ ಬಿಕ್ಕಟ್ಟು| ಕೇಂದ್ರ ಸರ್ಕಾರ ನೆರೆ ದೇಶಗಳಿಗೆ ಸಂಬಂಧಿಸಿದ ವಿದೇಶಾಂಗ ನೀತಿಯನ್ನು ಪರಿಶೀಲಿಸಬೇಕು; ಶರದ್ ಪವಾರ್

  ಇನ್ನೂ ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಮಾತನಾಡಿರುವ ಸಿ.ಟಿ. ರವಿ, "ಇದು ಮನುಕುಲಕ್ಕೆ ಅಪಮಾನ, ದುರ್ದೈವದ ಸಂಗತಿ, ಇದು ಮತಾಂದತೆಯ ಅಟ್ಟಹಾಸ. ವಿಶ್ವಸಂಸ್ಥೆ ಬದುಕಿದೆಯೋ ಸತ್ತಿದೆಯೊ?, ಕ್ಯಾಂಡಲ್ ಹಚ್ಚುತ್ತಿದ್ದವರು ಭೂಗತರಾಗಿದ್ದಾರೆ. ಮಾನವ ಹಕ್ಕುಗಳು ಇದ್ದಾವೋ ಇಲ್ಲವೋ?

  ಇದನ್ನೂ ಓದಿ: 4 ಕಾರ್, 1 ಹೆಲಿಕಾಪ್ಟರ್ ತುಂಬಾ ದುಡ್ಡು ತುಂಬಿಕೊಂಡೇ ಓಡಿಹೋಗಿದ್ದಾನೆ ಅಫ್ಘನಿಸ್ತಾನದ ಅಧ್ಯಕ್ಷ, ಮತ್ತಷ್ಟು ಹಣ ಇನ್ನೂ ಅರಮನೆಯಲ್ಲೇ ಇದ್ಯಂತೆ!

  ಭಾರತಕ್ಕೆ ಇದೊಂದು ಅಪಾಯದ ಸಂಗತಿ. ಮತಾಂಧತೆಯ ಭೂತ ಹೊಕ್ಕಿಸಿಕೊಂಡವರು ಅಪಘಾನ್ ಗೆ ಮಾತ್ರ ಸೀಮಿತ ಆಗಿರ್ತಾರೆ ಅನಿಸಲ್ಲ. ಕಾಶ್ಮೀರಕ್ಕೂ, ದೆಹಲಿಗೂ ಪಂಜಾಬ್ ಗೂ ಬರಬಹುದು. ಮುದೊಂದು ದಿನ ನಮಗೆಲ್ಲಾ ಅಪಾಯ ಕಟ್ಟಿಟ್ಟ ಬುತ್ತಿ. ವಿಶ್ವಸಂಸ್ಥೆ ಭದ್ರತಾ ಮಂಡಳಿ, ವಿಶ್ವಸಂಸ್ಥೆ, ಪ್ರಭಲ ದೇಶಗಳು ಈ ಬೆಳವಣಿಗೆಯನ್ನು ಅಲ್ಲಿಯೆ ನಿಲ್ಲಿಸಬೇಕು. ಸಹನೆಯಿಂದ ಹೇಳೊರಿಗೆ ಮಾತ್ರ ಈ ಕ್ಯಾಂಡಲ್ ಹಚ್ಚೋರು ಹೇಳ್ತಾರೆ. ಜಿಹಾದಿಗಳಿಗೆ ಹೇಳೊಕೆ ಅವರಿಗೆ ಬಾಯಿಲ್ಲ. ಅವರಿಗೂ ಜಿಹಾದಿಗಳ ಭಯ ಇರಬಹದು" ಎಂದು ಕಿಡಿಕಾರಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: