Independence Day: ಚಿತ್ರದುರ್ಗ ಈ ಗ್ರಾಮದಲ್ಲಿರೋ ಮಹಾತ್ಮ ಗಾಂಧೀಜಿ ದೇಗುಲದಲ್ಲಿ ನಿತ್ಯ ನಡೆಯುತ್ತೆ ಪೂಜೆ

ಆ ಸವಿನೆನಪಿಗಾಗಿ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೇತಾರ ಮಹಾತ್ಮ ಗಾಂಧೀಜಿಯವರ ದೇವಸ್ಥಾನವನ್ನೇ ನಿರ್ಮಿಸಿರುವ ಗ್ರಾಮಸ್ಥರು ನಿತ್ಯ ಗಾಂಧೀಜಿ ಪ್ರತಿಮೆಗೆ ಇಲ್ಲಿ ಪೂಜೆಯನ್ನು ಸಲ್ಲಿಸಿ ಅಗ್ರಸ್ಥಾನ ನೀಡಿ ಮನೆ ದೇವರಂತೆ ಭಕ್ತಿಯಿಂದ ಆರಾಧಿಸುತ್ತಾರೆ.

ಮಹಾತ್ಮ ಗಾಂಧೀಜಿ ದೇವಸ್ಥಾನ

ಮಹಾತ್ಮ ಗಾಂಧೀಜಿ ದೇವಸ್ಥಾನ

  • Share this:
ಚಿತ್ರದುರ್ಗ : ಪ್ರತಿ ವರ್ಷ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ (Independence Day 2022) ಬಂತಂದ್ರೆ ಮಹಾತ್ಮ ಗಾಂಧೀಜಿ  (Mahatma Gandhiji) ಭಾವಚಿತ್ರವಿಟ್ಟು ಪೂಜಿಸೋದು ಸಂಪ್ರದಾಯ. ಆದ್ರೆ ಇಲ್ಲೊಂದು ಊರಲ್ಲಿ ಸ್ವಾತಂತ್ರ್ಯ ಹೋರಾಟದ ಸವಿ ನೆನಪಿಗಾಗಿ ಗಾಂಧಿಜಿಯವರ ದೇಗುಲವನ್ನೇ ಕಟ್ಟಿಸಿದ್ದಾರೆ. ಬ್ರಿಟಿಷರ ವಿರುದ್ಧ ಈಚಲು ಮರ ಕಡಿದು ಚಳುವಳಿ ನಡೆಸಿದ ಹೋರಾಟಗಾರರ ಊರಿನ ಆ ದೇಗುಲದಲ್ಲಿ  ನಿತ್ಯ ಪೂಜಾ ಕೈಂಕಾರ್ಯ ನಡೆಯೋದು ವಿಶೇಷ ಎನಿಸಿದೆ. ಇಡೀ ದೇಶವೇ ಬಾಪು ಎಂದು ಕರೆಯುವ ಮಹಾತ್ಮ ಗಾಂಧಿ ದೇಗುಲದಲ್ಲಿ (Mahatma Gandhi Temple) ಬಾಪುವಿಗೆ ಪೂಜೆ ಸಲ್ಲಿಸ್ತಿರೋ ಜನರು. ಈ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಡಿದ ಆ ದಿನಗಳನ್ನ ನೆನೆಯುತ್ತಿರುವ ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲೂಕಿನ ತುರುವನೂರು (Turuvanuru, Chitradurga) ಗ್ರಾಮದಲ್ಲಿ. ಈ ಗ್ರಾಮ, ಗ್ರಾಮದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ, ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪ (S Nijalingappa) ನೇತೃತ್ವದಲ್ಲಿ ಅನೇಕ ಸ್ವತಂತ್ರ್ಯ ಹೋರಾಟಗಳು ಇಲ್ಲಿ ನಡೆದಿವೆ.

ಬ್ರಿಟಿಷ್‌ ಸರ್ಕಾರಕ್ಕೆ ಹೆಂಡದ ಮೂಲಕ ಆದಾಯದ ಮೂಲವಾಗಿದ್ದ ಈಚಲ ಮರ ಕಡಿದು ಚಳುವಳಿ ಮಾಡಿದ್ದು  ಇದೇ ತುರುವನೂರು ಗ್ರಾಮದಲ್ಲಿ.  ಇಲ್ಲಿನ ನೂರಾರು ಜನ ಮಹಿಳೆಯರು ಹಾಗು ಪುರುಷರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು.

ಇದನ್ನೂ ಓದಿ:  Independence day: 75ನೇ ಸ್ವಾತಂತ್ರ್ಯೋತ್ಸವ, ಬ್ರಿಟಿಷ್​ರಿಂದ ಬಿಡುಗಡೆಯಾದ ದಿನದ ಒಂದು ಮೆಲುಕು

ಮನೆ ದೇವರಂತೆ ಭಕ್ತಿಯಿಂದ ಆರಾಧನೆ

ಆ ಸವಿನೆನಪಿಗಾಗಿ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ನೇತಾರ ಮಹಾತ್ಮ ಗಾಂಧೀಜಿಯವರ ದೇವಸ್ಥಾನವನ್ನೇ ನಿರ್ಮಿಸಿರುವ ಗ್ರಾಮಸ್ಥರು ನಿತ್ಯ ಗಾಂಧೀಜಿ ಪ್ರತಿಮೆಗೆ ಇಲ್ಲಿ ಪೂಜೆಯನ್ನು ಸಲ್ಲಿಸಿ ಅಗ್ರಸ್ಥಾನ ನೀಡಿ ಮನೆ ದೇವರಂತೆ ಭಕ್ತಿಯಿಂದ ಆರಾಧಿಸುತ್ತಾರೆ.

Mahatma Gandhiji Temple in  Turuvanuru village Chitradurga vtc mrq
ಮಹಾತ್ಮ ಗಾಂಧೀಜಿ ದೇವಸ್ಥಾನ


ಅಲ್ಲದೇ ದೆಹಲಿಯಲ್ಲಿ ಬಿಟ್ಟರೆ, ಕಂಚಿನ ಗಾಂಧಿ ಪ್ರತಿಮೆ ಇರುವ ಏಕೈಕ ದೇಗುಲ ಇದು ಎನ್ನಲಾಗಿದೆ. ಅಕ್ಟೋಬರ್ 1, 1948 ರಂದು ಎಸ್. ನಿಜಲಿಂಗಪ್ಪನವರು ಈ ದೇಗುಲವನ್ನು ಉದ್ಘಾಟಿಸಿದ್ದರು ಎಂಬ ಇತಿಹಾಸವಿದೆ. ಅಂದಿನಿಂದಲೂ ಈ ಗ್ರಾಮ ಸ್ವಾತಂತ್ರ್ಯ ಹೋರಾಟಗಾರರ ಗ್ರಾಮವೆಂದೇ ಪ್ರಖ್ಯಾತಿಯಾಗಿದೆ.

ಇದನ್ನೂ ಓದಿ:  Udupi: ಅಮೃತ ಮಹೋತ್ಸವಕ್ಕೆ ANF ಸಿಬ್ಬಂದಿಯಿಂದ ಸಾರ್ಥಕ‌ ಕಾರ್ಯ; ಅರಣ್ಯವಾಸಿಗೆ ಸೂರು ನಿರ್ಮಾಣ

ಪೂರ್ವಜರ ಕಾಲದಿಂದಲೂ ಈ ಸಂಪ್ರದಾಯ ಜೀವಂತ

ಇನ್ನೂ ಈ ಗ್ರಾಮಕ್ಕೆ ಸ್ವತಃ ಗಾಂಧೀಜಿ ಬರುವುದಾಗಿ ಹೇಳಿದ್ರಂತೆ. ಆದ್ರೆ ಕಾರ್ಯದ ಒತ್ತಡದಿಂದಾಗಿ ಅವರು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರ ಸಹಚರರು ಹಾಗು ಸಂಬಂಧಿಗಳು ಗ್ರಾಮಕ್ಕೆ ಭೇಟಿ ನೀಡಿ ಹೋರಾಟದ ಕಿಚ್ಚು ಮೊಳಗಿಸಿದ್ರಂತೆ. ಆ ನೆನಪಿಗಾಗಿ ನಿರ್ಮಾಣವಾಗಿರೋ  ಈ ದೇಗುಲದಲ್ಲಿ ನಿತ್ಯ ಪೂಜೆ ಹಾಗು ರಾಷ್ಟ್ರೀಯ ಹಬ್ಬಗಳಂದು ವಿಶೇಷ‌ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಗ್ರಾಮಸ್ಥರು, ನಮ್ಮ ಪೂರ್ವಜರ ಕಾಲದಿಂದಲೂ ಈ ಸಂಪ್ರದಾಯ ಜೀವಂತವಾಗಿದೆ‌ ಅಂತಾರೆ.

Independence day 2022 75 years celebration North Korea South Korea Democratic Republic of Congo celebrate national days on August 15
ರಾಷ್ಟ್ರಧ್ವಜ


ಒಟ್ಟಾರೆ ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ನಿರ್ಮಾಣವಾದ ಗಾಂಧೀಜಿ ದೇಗುಲದಲ್ಲಿ ನಿತ್ಯವೂ ಪೂಜೆ ನಡೆಯುತ್ತಲೇ ಇದೆ. ಇದು ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಈ ದೇಗುಲವನ್ನು ಸೀಮಿತಗೊಳಿಸದೇ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು  ಸಹ  ಸ್ವಾತಂತ್ರ್ಯ ಹೋರಾಟಗಾರರ ದಿಟ್ಟತನದ ಹೋರಾಟದ  ಕಿಚ್ಚು ಅಚ್ಚಳಿಯದೆ ಗಾಂಧೀಜಿ ದೇಗುಲದ ನೆನಪಲ್ಲಿ ಈ ಗ್ರಾಮದಲ್ಲಿ ಉಳಿಸಿರೋದು ಅವಿಸ್ಮರಣೀಯ ಇತಿಹಾಸ.
Published by:Mahmadrafik K
First published: