ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರ ಸಾರಿಗೆ ಇಲಾಖೆ ಕಿರಿಕ್; ಈ ಬಾರಿ ಬಸ್​ ಜಟಾಪಟಿ!

ಕರ್ನಾಟಕದಿಂದ ಪರ್ಮಿಟ್ ಇಲ್ಲದ ಬಸ್ ಬಂದರೆ ಇಂದು (ಫೆ. 23) ಪ್ರತಿಭಟನೆ ನಡೆಸುವುದಾಗಿ ಶಿವಸೇನೆ ಪತ್ರದಲ್ಲಿ ಹೇಳಿದೆ. ಮಹಾರಾಷ್ಟ್ರದಿಂದಲೂ ಪರ್ಮಿಟ್ ಇಲ್ಲದ ವಾಹನ ಬಾರದಂತೆ ಕೆಎಸ್​ಆರ್​ಟಿಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಳಗಾವಿ (ಫೆ. 23): ಶಿವಸೇನೆ ಗಡಿ, ಭಾಷೆ ವಿಚಾರವಾಗಿ ರಾಜ್ಯದ ಜೊತೆಗೆ ನಿರಂತರವಾಗಿ ಕ್ಯಾತೆ ತೆಗೆಯುತ್ತಿದೆ. ಮಹಾರಾಷ್ಟ್ರದ ಶಿವಸೇನೆ ಕರ್ನಾಟಕಕ್ಕೆ ಧಮ್ಕಿ ಹಾಕಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್​ಗಳು ಪರ್ಮಿಟ್ ಇಲ್ಲದೆ ಬರುತ್ತಿದೆ ಎಂದು ಕ್ಯಾತೆ ತೆಗೆದಿದ್ದು, ಶಿವಸೇನೆ ಆರೋಪವನ್ನ ಕರ್ನಾಟಕದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಜತೆಗೆ ಮಹಾರಾಷ್ಟ್ರದಿಂದಲೂ ಪರ್ಮಿಟ್ ಇಲ್ಲದ ವಾಹನ ಬಾರದಂತೆ ಕೆಎಸ್​ಆರ್​ಟಿಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದ ಶಿವಸೇನೆ ಪುಂಡಾಟ ಮುಂದುವರೆದಿದೆ. ಮಹಾರಾಷ್ಟ್ರ ಸಿಎಂ, ಸಚಿವರು ಗಡಿ ವಿವಾದ ಕೆದಕಿದರೆ, ಈಗ ಮಹಾರಾಷ್ಟ್ರ ಶಿವಸೇನೆ ಮತ್ತೊಂದು ಪುಂಡಾಟ ಆರಂಭಿಸಿದೆ. ಮಹಾರಾಷ್ಟ್ರಕ್ಕೆ ಕರ್ನಾಟಕ ಸಾರಿಗೆ ಬಸ್ ಗಳನ್ನು ಪರ್ಮಿಟ್ ಇಲ್ಲದೆ ಬಿಡಲಾಗುತ್ತಿದೆ ಎಂದು ಆರೋಪಿಸಿದೆ. ಈ ಬಗ್ಗೆ ಸಾಂಗ್ಲಿ ಜಿಲ್ಲಾ ಶಿವಸೇನೆ ಘಟಕದಿಂದ ಮಹಾರಾಷ್ಟ್ರ ಸಾರಿಗೆ ನಿಗಮಕ್ಕೆ ಪತ್ರ ಬರೆದಿದೆ. ಪತ್ರದಲ್ಲಿ ಮಹಾರಾಷ್ಟ್ರ ಮಿರಜ್ ಶಾಸ್ತ್ರಿ ವೃತ್ತದಲ್ಲಿ ಬಸ್ಸುಗಳು ನಿಲುಗಡೆಯೇ ಇಲ್ಲ. ಆದರೆ ಕರ್ನಾಟಕದಿಂದ ಬರುವ ಪರ್ಮಿಟ್ ಇಲ್ಲದ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಇದರಿಂದ ಮಹಾರಾಷ್ಟ್ರ ಸಾರಿಗೆ ಇಲಾಖೆ ಗೆ ನಷ್ಟವಾಗುತ್ತಿದೆ ಎನ್ನಲಾಗಿದೆ.

ಕರ್ನಾಟಕದಿಂದ ಪರ್ಮಿಟ್ ಇಲ್ಲದ ಬಸ್ ಬಂದರೆ ಇಂದು (ಫೆ. 23) ಪ್ರತಿಭಟನೆ ನಡೆಸುವುದಾಗಿ ಶಿವಸೇನೆ ಪತ್ರದಲ್ಲಿ ಹೇಳಿದೆ. ಇದನ್ನೇ ಉಲ್ಲೇಖಿಸಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಸಾರಿಗೆ ಡಿಸಿಯಿಂದ ಕರ್ನಾಟಕ ವಾಯುವ್ಯ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.‌ ಪರ್ಮಿಟ್ ಇಲ್ಲಸ ಬಸಗಳನ್ನ ಮಹಾರಾಷ್ಟ್ರಕ್ಕೆ ಕಳುಹಿಸಬಾರದು. ಪರ್ಮಿಟ್ ಇಲ್ಲದ ಬಸ್ ಬಂದ್ರೆ ಆಗುವ ಅನಾಹುತಕ್ಕೆ ನೀವೆ ಕಾರಣ ಎಂದು ಪತ್ರದಲ್ಲಿ ಹೇಳಿದೆ.

ಇದನ್ನೂ ಓದಿ: Gelatin Blast - ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕಲ್ಲು ಕ್ವಾರಿ ಬಳಿ ಜಿಲೆಟಿನ್ ಸ್ಫೋಟ: 6 ಮಂದಿ ಸಾವು

ಈ ಮೂಲಕ ಮಹಾರಾಷ್ಟ್ರ ಸಾರಿಗೆ ಇಲಾಖೆ ಅಧಿಕಾರಿಗಳು ಬಹಿರಂಗವಾಗಿ ಧಮ್ಕಿ ಹಾಕಿದ್ದಾರೆ. ಕರ್ನಾಟಕ ಬಸ್ ಗಳು ಶುಚಿ ಮತ್ತು ನೋಡಲು ಆಕರ್ಷಕವಾಗಿದ್ದು, ಜನ ಹೆಚ್ಚಾಗಿ ಈ ಬಸ್ ಹತ್ತಲು ಬಯಸುತ್ತಾರೆ. ಇದು ಶಿವಸೇನೆಗೆ ಮುಜುಗರ ತಂದಿದೆ. ಈ ಹಿನ್ನೆಲೆಯಲ್ಲಿ ಕ್ಯಾತೆ ತೆಗೆಯಲು ಶಿವಸೇನೆ ಆರಂಭಿಸಿದೆ.

ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ನಿತ್ಯ 300ಕ್ಕೂ ಹೆಚ್ಚು ಸಾರಿಗೆ ಬಸ್ ಓಡಾಡುತ್ತವೆ. ಈ ಬಗ್ಗೆ ಬೆಳಗಾವಿ ವಾಯುವ್ಯ ಸಾರಿಗೆ ವಿಭಾಗ ಡಿಸಿ ಮಹಾದೇವ ಮುಂಜಿ ಮಾತನಾಡಿದ್ದು, ಕರ್ನಾಟಕದಿಂದ ಯಾವುದೇ ಪರ್ಮಿಟ್ ಇಲ್ಲದ ಬಸ್ ಮಹಾರಾಷ್ಟ್ರಕ್ಕೆ ಬಿಟ್ಟಿಲ್ಲ. ಮಹಾರಾಷ್ಟ್ರದಿಂದ ಪತ್ರ ಬಂದಿದೆ. ನಾವು ಸಹ ಉತ್ತರ ನೀಡುತ್ತೇವೆ. ನಾವು ಪರ್ಮಿಟ್ ಇಲ್ಲದ ಬಸ್ ಬಿಟ್ಟಿಲ್ಲ, ನೀವೂ ಬಿಡಬೇಡಿ ಎಂದು ತಿಳಿಸಿದ್ದೇವೆ ಎಂದರು.

ಶಿವಸೇನೆ ಧಮ್ಕಿಗೆ ಬೆಳಗಾವಿ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಮಹಾರಾಷ್ಟ್ರ ಸಾರಿಗೆ ಸಚಿವ ಜತೆಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
Published by:Sushma Chakre
First published: