HOME » NEWS » State » MAHARASHTRA TAMIL NADU EXTEND LOCKDOWN AHEAD OF CENTRES NEW RULES FOR NEXT PHASE TODAY RMD

ಕೇಂದ್ರದ ಸುತ್ತೋಲೆಗೂ ಮೊದಲೇ ಮೇ 31ರವರೆಗೆ ಲಾಕ್​ಡೌನ್ ವಿಸ್ತರಿಸಿದ ತಮಿಳುನಾಡು, ಮಹಾರಾಷ್ಟ್ರ

ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಅವರಿಗೆ ಲಾಕ್​ಡೌನ್​ ವಿಸ್ತರಣೆ ಮಾಡುವ ಅನಿವಾರ್ಯತೆ ಬಂದೊದಗಿದೆ. ಈ ಕುರಿತಂತೆ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಅಜಯ್​ ಮೆಹ್ತಾ ಸುತ್ತೋಲೆ ಹೊರಡಿಸಿದ್ದಾರೆ.

news18-kannada
Updated:May 17, 2020, 4:18 PM IST
ಕೇಂದ್ರದ ಸುತ್ತೋಲೆಗೂ ಮೊದಲೇ ಮೇ 31ರವರೆಗೆ ಲಾಕ್​ಡೌನ್ ವಿಸ್ತರಿಸಿದ ತಮಿಳುನಾಡು, ಮಹಾರಾಷ್ಟ್ರ
ಸಾಂದರ್ಭಿಕ ಚಿತ್ರ
  • Share this:
ಲಾಕ್​ಡೌನ್​ ವಿಸ್ತರಣೆ ಹಾಗೂ ಹೊಸ ಗೈಡ್​ಲೈನ್​ ಕುರಿತಂತೆ ಕೇಂದ್ರ ಸರ್ಕಾರದಿಂದ ಇನ್ನಷ್ಟೇ ಸುತ್ತೋಲೆ ಬರಬೇಕಿದೆ. ಅದಕ್ಕೂ ಮೊದಲೇ ತಮಿಳುನಾಡು ಹಾಗೂ ಮಹಾರಾಷ್ಟ್ರ ಸರ್ಕಾರ ಲಾಕ್​ಡೌ​ನ್​ ವಿಸ್ತರಣೆ ಮಾಡುವ ಆದೇಶ ಹೊರಡಿಸಿದೆ.

ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಅವರಿಗೆ ಲಾಕ್​ಡೌನ್​ ವಿಸ್ತರಣೆ ಮಾಡುವ ಅನಿವಾರ್ಯತೆ ಬಂದೊದಗಿದೆ. ಈ ಕುರಿತಂತೆ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಅಜಯ್​ ಮೆಹ್ತಾ ಸುತ್ತೋಲೆ ಹೊರಡಿಸಿದ್ದಾರೆ.

“ಇಂದು ಮೂರನೇ ಹಂತದ ಲಾಕ್​ಡೌನ್​ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಹಂತದ ಲಾಕ್​ಡೌನ್​ ಜಾರಿಗೆ ಬರಲಿದ್ದು, ಮೇ 31ರವರೆಗೆ ಈ ಲಾ​ಕ್​ಡೌ​ನ್​ ಮುಂದುವರಿಯಲಿದೆ. ಈ ಹಂತದಲ್ಲಿ ಕೆಲ ವಿನಾಯತಿ ನೀಡಲಾಗುತ್ತಿದೆ,” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ಕೊರೋನಾ ಆರ್ಭಟ: 24 ಗಂಟೆಯಲ್ಲಿ 4,987 ಮಂದಿಗೆ ವೈರಸ್​; 90 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ತಮಿಳುನಾಡು ಕೂಡ ಇದೇ ಮಾದರಿಯ ನಿರ್ಧಾರವನ್ನು ಕೈಗೊಂಡಿದೆ. ಕೊರೋನಾ ಹೆಚ್ಚಿರುವ ಚೆನ್ನೈ ಸೇರಿ 12 ಜಿಲ್ಲೆಗಳಿಗೆ ಕಠಿಣ ನಿಯಮ ಜಾರಿಯಲ್ಲಿರಲಿದೆ. ಉಳಿದಂತೆ ಕೊಯಿಮತ್ತೂರು ಸೇರಿ 25 ಜಿಲ್ಲೆಗಳ ಜನರಿಗೆ ಕೆಲ ವಿನಾಯತಿ ನೀಡಲಾಗುತ್ತಿದೆ.

ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 4,987 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 90,000 ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​​ ಬುಲೆಟಿನ್​​​​ನಲ್ಲಿ ಅಧಿಕೃತವಾಗಿ ತಿಳಿದು ಬಂದಿದೆ.
Youtube Video
First published: May 17, 2020, 4:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories