• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಳ್ಳತನಕ್ಕೂ ಗೂಗಲ್ ಮೊರೆ!; ಮ್ಯಾಪ್​ ಸಹಾಯದಿಂದ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ

ಕಳ್ಳತನಕ್ಕೂ ಗೂಗಲ್ ಮೊರೆ!; ಮ್ಯಾಪ್​ ಸಹಾಯದಿಂದ ದರೋಡೆ ಮಾಡುತ್ತಿದ್ದ ಹೈಟೆಕ್ ಕಳ್ಳರ ಬಂಧನ

ದರೋಡೆ ಮಾಡಿ ಸಿಕ್ಕಿಬಿದ್ದ ಗ್ಯಾಂಗ್

ದರೋಡೆ ಮಾಡಿ ಸಿಕ್ಕಿಬಿದ್ದ ಗ್ಯಾಂಗ್

ಬೆಳಗಾವಿಯಲ್ಲಿ ಇಬ್ಬರು ಕಳ್ಳರು ಸೇರಿ ಮನೆಯನ್ನ ಮ್ಯಾಪ್ ಮೂಲಕ ಹುಡುಕಿಕೊಂಡು ಸ್ಥಳ ಪರಿಶೀಲನೆ ಮಾಡಿ ಮನೆಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದರು.

  • Share this:

ಬೆಳಗಾವಿ (ಅ. 27): ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಉಪಯೋಗ ಮಾಡದ ಕ್ಷೇತ್ರವೇ ಇಲ್ಲ. ಶೇ. 90ರಷ್ಟು ಜನರು ಇಂದು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇವತ್ತಿನ ಕಾಲದಲ್ಲಿ ಏನೇ ಮಾಡಿದರೂ ಅದು ತಂತ್ರಜ್ಞಾನದ ಹೊರತಾಗಿಲ್ಲ. ಒಂದು ಮನೆ ನಿರ್ಮಾಣ ಮಾಡಬೇಕು ಅಂದರೂ ತಂತ್ರಜ್ಞಾನದ ಸಹಾಯದಿಂದಲೇ ಪ್ಲಾನ್ ಮಾಡಿ ಮನೆ ನಿರ್ಮಾಣ ಮಾಡುತ್ತಾರೆ. ಆದರೆ ಇಲ್ಲೊಂದು ಖತರ್ನಾಕ್​ ತಂಡ ತಂತ್ರಜ್ಞಾನದ ಸಹಾಯದಿಂದಲೇ ಮನೆ ಕಳ್ಳತನ ಮಾಡುತ್ತಿತ್ತು. ಅಂತಹ ಕಳ್ಳರನ್ನು ಬೆಳಗಾವಿ ಪೊಲೀಸರು ಹಿಡಿದು ಕಂಬಿ ಹಿಂದೆ ಹಾಕಿದ್ದಾರೆ.


ಹೌದು, ಇವತ್ತಿನ ಜಗತ್ತು ಗೂಗಲ್ ಮ್ಯಾಪ್ ತಂತ್ರಜ್ಞಾನದ ವಿಚಾರದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ. ನೀವು ಯಾವುದೇ ಮೂಲೆಯಲ್ಲಿ ಇದ್ದರೂ ಕೂತಲ್ಲೆ ಯಾರ ಮನೆಯನ್ನು ಬೇಕಾದರೂ ಹುಡುಕಬಹುದು. ದೇಶದ ಯಾವುದೆ ಮೂಲೆಯ ಅಂತರವನ್ನ ಲೆಕ್ಕ ಹಾಕಬಹುದು.  ಇದೇ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇಲ್ಲೊಂದು ಗ್ಯಾಂಗ್ ನಗರ ಪ್ರದೇಶದ ಹೊರ ವಲಯದ ಮನೆಗಳನ್ನ ಸ್ಯಾಟಲೈಟ್ ಮೂಲಕ ಪತ್ತೆ ಮಾಡುತ್ತಿತ್ತು. ಅಕ್ಕಪಕ್ಕದಲ್ಲಿ ಎಷ್ಟು ಮನೆಗಳಿವೆ, ಮನೆ ಪಕ್ಕದ ರಸ್ತೆ ಆ ರಸ್ತೆಯಿಂದ ಮುಖ್ಯ ರಸ್ತೆ ಹಾಗೂ ಯಾರಾದರೂ ಬಂದರೂ ಸಹ ಅಡಗಿಕೊಳ್ಳಲು ಬೇಕಾದ ಜಾಗ ಹಾಗೂ  ಎಸ್ಕೇಪ್ ಆಗಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಗೂಗಲ್ ಮ್ಯಾಪ್ ಮೂಲಕವೇ ಅಧ್ಯಯನ ಮಾಡುತ್ತಿದ್ದರು. ಬಳಿಕ ಇಬ್ಬರು ಕಳ್ಳರು ಸೇರಿ ಮನೆಯನ್ನ ಮ್ಯಾಪ್ ಮೂಲಕ ಹುಡುಕಿಕೊಂಡು ಸ್ಥಳ ಪರಿಶೀಲನೆ ಮಾಡಿ ಮನೆಗೆ ಕನ್ನ ಹಾಕುವ ಕೆಲಸ ಮಾಡುತ್ತಿದ್ದರು.


ಇದನ್ನೂ ಓದಿ: ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ


ಬೆಳಗಾವಿ ನಗರದ ಕ್ಯಾಂಪ್ ಠಾಣೆಯ ಹೊರ ವಲಯದಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಇದನ್ನ ತನಿಖೆ ನಡೆಸಲು ಮುಂದಾಗಿದ್ದ ಕ್ಯಾಂಪ್ ಠಾಣೆಯ ಪೊಲೀಸ ನಿರೀಕ್ಷಕ ಡಿ.ಸಂತೋಷ ಕುಮಾರ್ ತಮ್ಮದೆ ಒಂದು ತಂಡ ರಚನೆ ಮಾಡಿ ತನಿಖೆ ಆರಂಭಿಸಿದರು. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಕಳ್ಳತನ ಮಾಡಲು ಪಕ್ಕದ ರಾಜ್ಯದ ಕಳ್ಳರೇ ಬಂದಿರುವ ಶಂಕೆ ಮೇರೆಗೆ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಕ್ರೈಮ್ ತನಿಖಾ ತಂಡದಿಂದ ಮಾಹಿತಿ ಪಡೆದ ಪೊಲೀಸರ ತಂಡ ಇಲ್ಲಿ ನಡೆದ ಅಪರಾಧದ ಮಾಹಿತಿ ನೀಡಿ ಅಲ್ಲಿದ್ದ ಕೆಲವು ಶಂಕಿತ ಆರೋಪಿಗಳ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.


ಆಗಾಗ ಬೆಳಗಾವಿ ನಗರಕ್ಕೆ ಬಂದು ಕಳ್ಳತನ ಮಾಡಿ ಈ ಖದೀಮರು ವಾಪಾಸ್ ಹೋಗುತ್ತಿದ್ದರು. ಈ ಮೂಲಕ ಬೆಳಗಾವಿ ನಗರದ ಲಕ್ಷ್ಮೀ ಟೆಕ್, ನಕ್ಷತ್ರ ಕಾಲನಿ, ಮನೆ ಕಳ್ಳತನ ಸೇರಿದಂತೆ ನಗರದ ಮೂರು ಪ್ರತ್ಯೇಕ ಪ್ರಕರಣಗಳನ್ನ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಇನ್ನು ಪ್ರಕರಣದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಸ್ತುರಲ್ ಗ್ರಾಮದ ಪ್ರಶಾಂತ ಕಾಶಿನಾಥ ಕರೋಶಿ 35, ಹಾಗೂ ಧಾಮಣಿ ಗ್ರಾಮದ ಅವಿನಾಶ್ ಶಿವಾಜಿ ಅಡಾವಕರ್ 28 ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 28.08 ಲಕ್ಷ ಮೌಲ್ಯದ ಅರ್ಧ ಕೆಜಿಯ ಚಿನ್ನದ ಆಭರಣಗಳು ಹಾಗೂ 11.50 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು 40 ಲಕ್ಷ ಮೌಲ್ಯದ ಸ್ವತ್ತುಗಳನ್ನ ವಶಪಡಿಸಿಕೊಂಡಿದ್ದಾರೆ.

Published by:Sushma Chakre
First published: