ಮರಾಠಿಗರನ್ನು ಭಾವನಾತ್ಮಕವಾಗಿ ಹಿಡಿದಿಡಲು ಉದ್ಧವ್​​​​​ ಠಾಕ್ರೆ ಗಡಿ ಅಸ್ತ್ರ ಪ್ರಯೋಗ..!

ಠಾಕ್ರೆ ಆಕ್ರಮಣ ತಡೆಯವಲ್ಲಿ ಕರ್ನಾಟಕ ಸರ್ಕಾರ ಮೌನ ವಹಿಸಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು, ಮಹಾರಾಷ್ಟ್ರದಲ್ಲಿ ಅಲ್ಲಿನ ನಾಯಕರು ಮರಾಠಿಗರನ್ನು ಸೆಳೆಯಲು ಗಡಿ ವಿಚಾರ ಪ್ರಸ್ತಾಪ ಮಾಡಿದರೆ, ಮರಾಠಿ ಮತಗಳ ವಿಭಜನೆ ಆತಂಕದಿಂದ ಬೆಳಗಾವಿಯ ರಾಜಕಾರಣಿಗಳು ವಿಚಾರದಲ್ಲಿ ಮೌನ ವಹಿಸುವುದು ದುರಂತ.

news18-kannada
Updated:December 30, 2019, 12:23 PM IST
ಮರಾಠಿಗರನ್ನು ಭಾವನಾತ್ಮಕವಾಗಿ ಹಿಡಿದಿಡಲು ಉದ್ಧವ್​​​​​ ಠಾಕ್ರೆ ಗಡಿ ಅಸ್ತ್ರ ಪ್ರಯೋಗ..!
ಸಿಎಂ ಉದ್ಧವ್ ಠಾಕ್ರೆ
  • Share this:
ಬೆಳಗಾವಿ (30): ಬೆಳಗಾವಿ ಗಡಿ ವಿವಾದ ಮತ್ತೊಮ್ಮೆ ಜೋರಾಗಿ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕ ಗಡಿ ವಿಚಾರ ಮುಂದಿಟ್ಟುಕೊಂಡು ಅನೇಕ ಚುನಾವಣೆಗಳು ನಡೆದಿವೆ. ಶಿವಸೇನೆ ಸೇರಿ ಅಲ್ಲಿನ ಪಕ್ಷಗಳು ಬೆಳಗಾವಿ ಗಡಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಈ ಬಾರಿಯ ಕಿಚ್ಚನ್ನು ಮಹಾರಾಷ್ಟ್ರ ಸಿಎಂ ಉದ್ಧವ್​​​​ ಠಾಕ್ರೆ ಹೊತ್ತಿದ್ದಾರೆ. 

ಮಹಾರಾಷ್ಟ್ರ ಸಿಎಂ ಉದ್ಧವ್​​​​ ಠಾಕ್ರೆ ಬೆಳಗಾವಿ ಗಡಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ  ಹೋಲಿಕೆ ಮಾಡಿದ್ದಾರೆ. ಈ ಮೂಲಕ ಸಿಎಂ ಆದ ಕೆಲವೇ ದಿನಗಳಲ್ಲಿ ಗಡಿ ಪ್ರಕರಣವನ್ನು ಜೀವಂತವಾಗಿ ಇಡುವ ಎಲ್ಲಾ ಯತ್ನ ಆರಂಭಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಅನೇಕ ದಶಕಗಳಿಂದ ರಾಜಕೀಯ ಮಾಡಿವೆ. ಆದರೆ ಇದೀಗ ಹಿಂದುತ್ವ ಅಜೆಂಡಾ ಹೊಂದಿರುವ ಪಕ್ಷದಲ್ಲಿ ಬಿಜೆಪಿ- ಶಿವಸೇನೆಯಲ್ಲಿ ಮಹಾ ಬಿರುಕು ಕಾಣಿಸಿಕೊಂಡು ಹಳೆಯ ಗೆಳೆಯನನ್ನು ಬಿಟ್ಟು ಶಿವಸೇನೆ ಸೈದ್ಧಾಂತಿಕ  ವಿರೋಧಿಗಳಾದ ಕಾಂಗ್ರೆಸ್, ಎನ್ ಸಿ ಪಿ ಜತೆಗೆ ಸೇರಿ ಸರ್ಕಾರ ರಚನೆ ಮಾಡಿದೆ. ಸಖ್ಯ ಬಿಟ್ಟ ಬಳಿಕ ಉದ್ಧವ ಠಾಕ್ರೆ ಗಡಿ ಅಸ್ತ್ರವನ್ನು ಮರಾಠಿಗರನ್ನು ಭಾವನಾತ್ಮಕವಾಗಿ ಹಿಡಿದಿಡಲು ಬಳಕೆ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಕವಿದ ದಟ್ಟ ಮಂಜು; 30 ರೈಲುಗಳ ಸಂಚಾರ ವಿಳಂಬ, ವಿಮಾನ ಹಾರಾಟದಲ್ಲಿ ವ್ಯತ್ಯಯ

ಮಹಾರಾಷ್ಟ್ರದಲ್ಲಿ ಸದ್ಯ ಗಡಿ ವಿಚಾರ ಸಂಪುಟ ವಿಸ್ತರಣೆಗಿಂತ ಹೆಚ್ಚು ಸದ್ದು ಮಾಡಿದೆ. ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದೇ ಎನ್ನುವುದು ಮರೆತು ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಿದ್ದಾರೆ. ಉದ್ಧವ್​​​​ ಠಾಕ್ರೆ ಬೆಳಗಾವಿ ಗಡಿಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿ ಗಡಿ ಉಸ್ತುವಾರಿಗೆ ಇಬ್ಬರು ಸಚಿವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ಪ್ರಕರಣಕ್ಕೆ ಚುರುಕು ನೀಡುವುದರ ಜೊತೆಗೆ, ಮರಾಠಿಗರ ಅಸ್ಮಿತೆ ವಿಚಾರವಾಗಿ ಹಿಡಿದಿಡಲು ಪ್ರಯತ್ನ ಆರಂಭಿಸಿದ್ದಾರೆ. ಸಿಎಂ ಠಾಕ್ರೆ ಗಡಿ ವಿಚಾರದಲ್ಲಿ ತುಂಬ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ.

ಠಾಕ್ರೆ ಆಕ್ರಮಣ ತಡೆಯವಲ್ಲಿ ಕರ್ನಾಟಕ ಸರ್ಕಾರ ಮೌನ ವಹಿಸಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು, ಮಹಾರಾಷ್ಟ್ರದಲ್ಲಿ ಅಲ್ಲಿನ ನಾಯಕರು ಮರಾಠಿಗರನ್ನು ಸೆಳೆಯಲು ಗಡಿ ವಿಚಾರ ಪ್ರಸ್ತಾಪ ಮಾಡಿದರೆ, ಮರಾಠಿ ಮತಗಳ ವಿಭಜನೆ ಆತಂಕದಿಂದ ಬೆಳಗಾವಿಯ ರಾಜಕಾರಣಿಗಳು ವಿಚಾರದಲ್ಲಿ ಮೌನ ವಹಿಸುವುದು ದುರಂತ. ಕೇಂದ್ರ ಸಚಿವ ಸುರೇಶ ಅಂಗಡಿ ಸೇರಿದಂತೆ ಯಾರೊಬ್ಬರೂ ಸಹ ಗಡಿ ವಿಚಾರದಲ್ಲಿ ಮಾತನಾಡುತ್ತಿಲ್ಲ.

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸ್ಪರ್ಧಿಸುವವರಿಗೆ 5 ಕೋಟಿ ಕೊಡ್ತೇನೆ; ಶಾಸಕ ರಮೇಶ್​ ಜಾರಕಿಹೊಳಿ ಆಫರ್​​

ರಾಜ್ಯದಲ್ಲಿ ಬೇಕಿದೆ ಗಡಿ ಉಸ್ತುವಾರಿ ಸಚಿವರ ನೇಮಕ ಸಿಎಂ ಬಿ ಎಸ್ ಯಡಿಯೂರಪ್ಪ ಈ ಸಲ ರಾಜ್ಯದಲ್ಲಿ ಗಡಿ ಉಸ್ತುವಾರಿ ನೇಮಕ ಮಾಡಬೇಕು ಎನ್ನುವ ಕೂಗು ಪ್ರಬಲವಾಗಿ ಕೇಳಿ ಬಂದಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎಚ್ ಕೆ ಪಾಟೀಲ್ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಗಡಿ ಕನ್ನಡಿಗರ ಹಿತ ಕಾಪಾಡಲು ಸಚಿವರು ಕೆಲಸ ಮಾಡಬೇಕಿದೆ. ಇದರ ಜತೆಗೆ ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಬೆಳಗಾವಿಗೆ ಸ್ಥಳಾಂತರಿಸಬೇಕು ಎನ್ನುವ ಕೂಗು ಅನೇಕ ವರ್ಷಗಳಿಂದ ಇದೆ. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಬೆಳಗಾವಿಯ ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರಿಸಿದರೆ, ಇಲ್ಲಿನ ಸಮಸ್ಯೆ ಅರಿತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಮಹಾರಾಷ್ಟ್ರದ ಆಕ್ರಮಣಕಾರಿ ಪ್ರವೃತ್ತಿ ಮುಂದುವರೆಯಲಿದ್ದು, ಗಡಿಯಲ್ಲಿ ಇದೇ ರೀತಿ ಪ್ರತಿಭಟನೆ, ಪ್ರಕ್ಷುಬ್ಧ ವಾತಾವರಣ ಮುಂದುವರೆಯಲಿದೆ.

 
First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading