ಬೆಳಗಾವಿ ವಿಚಾರ: ಶಿವಸೇನೆ ಕಿರಿಕ್ ಹಿಂದಿದೆಯಾ ಪಾಲಿಕೆ ಚುನಾವಣೆ ಗೆಲ್ಲುವ ಅಜೆಂಡಾ?

ಶಿವಸೇನೆ ಆಕ್ರಮಣ ಧೋರಣೆ ಹಿಂದೆ ಬೆಳಗಾವಿಯಲ್ಲಿ ಪಕ್ಷಗಟ್ಟಿ ಮಾಡುವ ಮಾಸ್ಟರ್ ಪ್ಲ್ಯಾನ್ ಇದೆ. ಹೌದು, ಇನ್ನೂ ಕೇಲವೆ ದಿನಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆ  ಚುನಾವಣೆ ಘೋಷಣೆ ಆಗಲಿದೆ. ಈ ಚುನಾವಣೆಯಲ್ಲಿ ಎಂಇಎಸ್, ಶಿವಸೇನೆ ಜಂಟಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದೆ. ಶಿವ ಸಮಿತಿ ಮೂಲಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿವೆ.

ಉದ್ದವ್ ಠಾಕ್ರೆ.

ಉದ್ದವ್ ಠಾಕ್ರೆ.

  • Share this:
ಬೆಳಗಾವಿ(ಜ.29): ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಕಿರಿಕ್ ಮೇಲೆ ಕಿರಿಕ್ ಮಾಡುತ್ತಿದ್ದಾರೆ. ಧೀಡಿರ್ ಇಷ್ಟೊಂದು ಆಕ್ರಮಣಕಾರಿ ಧೋರಣೆ ತೋರಲು ಅಸಲಿ ಕಾರಣವೇ ಬೇರೆ. ಅದು ಬೆಳಗಾವಿ ಮಹಾನಗರದಲ್ಲಿ ಶಿವಸೇನೆ ಪಕ್ಷ ಗಟ್ಟಿ ಮಾಡಲು ಠಾಕ್ರೆ ಯತ್ನಿಸುತ್ತಿದ್ದಾರೆ. ಮುಂಬರುವ ಪಾಲಿಕೆ ಚುನಾವಣೆ ಶಿವಸಮಿತಿ ಎಂದು ಶಿವಸೇನೆ- ಎಂಇಎಸ್ ಜಂಟಿಯಾಗಿ ಸ್ಪರ್ಧೆಗೆ ಮುಂದಾಗಿದೆ.

ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಹೇಳಿಕೆಯನ್ನು ಖಂಡಿಸಿ ಗುರುವಾರ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕರುನಾಡ ಸೇವಕರು ಸಂಘಟನೆಯಿಂದ ಠಾಕ್ರೆ ‌ಪ್ರತಿಕೃತಿ‌ ದಹಿಸಲಾಯಿತು. ಮುಂಬೈನಲ್ಲಿ ಕರ್ನಾಟಕ ಪಾಲು ಇದೆ ಎನ್ನುವ‌ ಸವದಿ ಹೇಳಿಕೆಯನ್ನು ಹೋರಾಟಗಾರರು ಬೆಂಬಲಿಸಿದರು.‌ ಯಾರಪ್ಪಂದ ಏನ್ ಐತಿ ಮುಂಬೈ‌ ನಮ್ಮದು ಐತಿ ಎಂದು ಘೋಷಣೆ ಕೂಗಿದರು.

ಶಿವಸೇನೆ ಆಕ್ರಮಣ ಧೋರಣೆ ಹಿಂದೆ ಬೆಳಗಾವಿಯಲ್ಲಿ ಪಕ್ಷಗಟ್ಟಿ ಮಾಡುವ ಮಾಸ್ಟರ್ ಪ್ಲ್ಯಾನ್ ಇದೆ. ಹೌದು, ಇನ್ನೂ ಕೇಲವೆ ದಿನಗಳಲ್ಲಿ ಬೆಳಗಾವಿ ಮಹಾನಗರ ಪಾಲಿಕೆ  ಚುನಾವಣೆ ಘೋಷಣೆ ಆಗಲಿದೆ. ಈ ಚುನಾವಣೆಯಲ್ಲಿ ಎಂಇಎಸ್, ಶಿವಸೇನೆ ಜಂಟಿಯಾಗಿ ಸ್ಪರ್ಧೆಗೆ ನಿರ್ಧಾರ ಮಾಡಿದೆ. ಶಿವ ಸಮಿತಿ ಮೂಲಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿವೆ.

Bangalore Crime: ಬೆಂಗಳೂರಿನಲ್ಲಿ ಹಾಡಹಗಲೇ ಲ್ಯಾಪ್​ಟಾಪ್ ಕಳ್ಳತನ; ಪಿಜಿ, ಬ್ಯಾಚುಲರ್​ ಮನೆಗಳೇ ಇವರ ಟಾರ್ಗೆಟ್

ಇಷ್ಟು ವರ್ಷಗಳ ಕಾಲ ಬೆಳಗಾವಿ ಪಾಲಿಕೆಯಲ್ಲಿ ಭಾಷಾ ಆಧಾರದ ಮೇಲೆ  ಚುನಾವಣೆ ನಡೆಯುತ್ತಿತ್ತು. ಈ ಸಲ ಪಕ್ಷದ ಚಿಹ್ನೆ ‌ಮೇಲೆ ಚುನಾವಣೆಗೆ ಕಾಂಗ್ರೆಸ್, ಎಂಐಎಂ ಘೋಷಣೆ ಮಾಡಿದೆ. ಇದು ಬಿಜೆಪಿಗೂ ಅನಿವಾರ್ಯ ಆಗಲಿದ್ದು, ಎಂಇಎಸ್ ದೊಡ್ಡ ತಲೆ ನೋವು ಆಗಿದೆ. ಹೀಗಾಗಿ 58 ವಾರ್ಡ್ ಶಿವ ಸಮಿತಿ ಮೂಲಕ ಅಭ್ಯರ್ಥಿ ಕಣಕ್ಕೆ ಇಳಿಸಿ ಪಕ್ಷ ಗಟ್ಟಿ ಮಾಡಲು ಠಾಕ್ರೆ ಯತ್ನಿಸುತ್ತಿದ್ದಾರೆ.ಬೆಳಗಾವಿ ಗಡಿ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ ಠಾಕ್ರೆ ಆಕ್ರಮಣಕಾರಿ ಧೋರಣೆ ಹಿಂದೆ ಹಲವು ರಾಜಕೀಯ ಲೆಕ್ಕಾಚಾರ ಇವೆ. ಮಹಾರಾಷ್ಟ್ರದಲ್ಲಿ ಸದ್ಯ ಕಾಂಗ್ರೆಸ್, ಎನ್ ಸಿ ಪಿ ಜತೆಗೆ ಶಿವಸೇನೆ ಸಮ್ಮಿಶ್ರ ಸರ್ಕಾರವಿದೆ. ಮುಂದೆ ಶಿವಸೇನೆ ‌ಹಾಗೂ ಬಿಜೆಪಿ ಪಕ್ಷಗಳ  ಹಿಂದುತ್ವದ ಆಧಾರದ ಮೇಲೆ ವಿಭಜನೆ ಆತಂಕ ಇದೆ. ಇದನ್ನು ದೂರ ಮಾಡಲು ಮರಾಠಿ ಮತ ಬ್ಯಾಂಕ್ ಗಟ್ಟಿ ಮಾಡಲು ಠಾಕ್ರೆ ಪ್ಲ್ಯಾನ್ ಮಾಡಿದ್ದಾರೆ.  ಹೀಗಾಗಿ ಗಡಿ, ಭಾಷೆ ವಿಚಾರಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.
Published by:Latha CG
First published: