ರಾಜ್ಯ ರಾಜಕೀಯಕ್ಕೆ ಮಹಾರಾಷ್ಟ್ರ ಸಿಎಂ ಎಂಟ್ರಿ, ಜಾರಕಿಹೊಳಿ ಬ್ರದರ್ಸ್​ ಭೇಟಿಯಾದ ದೇವೇಂದ್ರ ಫಡ್ನವೀಸ್?

news18
Updated:September 11, 2018, 11:44 AM IST
ರಾಜ್ಯ ರಾಜಕೀಯಕ್ಕೆ ಮಹಾರಾಷ್ಟ್ರ ಸಿಎಂ ಎಂಟ್ರಿ, ಜಾರಕಿಹೊಳಿ ಬ್ರದರ್ಸ್​ ಭೇಟಿಯಾದ ದೇವೇಂದ್ರ ಫಡ್ನವೀಸ್?
ದೇವೇಂದ್ರ ಫಡ್ನವಿಸ್
news18
Updated: September 11, 2018, 11:44 AM IST
-ಚಿದಾನಂದ ಪಟೇಲ್​, ನ್ಯೂಸ್ 18 ಕನ್ನಡ

ಬೆಂಗಳೂರು (ಸೆ.11): ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್​ ಕಮಲಕ್ಕೆ ಕೈ ಹಾಕಿರುವ ಬೆನ್ನಲ್ಲೇ ಜಾರಕಿಹೊಳಿ ಸಹೋದರರ ಜೊತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್​ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯು ಆಪರೇಷನ್​ ಕಮಲಕ್ಕೆ ಮಹಾ ಸಿಎಂ ಎಂಟ್ರಿ ಕೊಟ್ಟಿದ್ದಾರಾ? ಎಂಬ ಅನುಮಾನ ಮೂಡಿಸಿದೆ. ಕಳೆದ ಮೂರು ದಿನಗಳ ಹಿಂದೆ ಭೇಟಿ ನೀಡಿರುವ ಅವರು, ಸಚಿವ ರಮೇಶ ಜಾರಕಿಹೊಳಿಯನ್ನು ಭೇಟಿ ಮಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ವಿಚಾರ, ಆಪರೇಷನ್​ ಕಮಲ, ಜಾರಕಿಹೊಳಿ ಬ್ರದರ್ಸ್​ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಇದನ್ನೂ ಓದಿ: ಗೋವಾ ಬಿಜೆಪಿ ಮುಖಂಡರ ಸಂಪರ್ಕದಲ್ಲಿ ಸಚಿವ ರಮೇಶ್ ಜಾರಕಿಹೊಳಿ..?

ಲೋಕಲ್ ಬಿಜೆಪಿ ಜೊತೆ ಮಾತುಕತೆ ಬಿಟ್ಟು ಮಹಾರಾಷ್ಟ್ರ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ 11  ಶಾಸಕರು ಜೊತೆಯಲ್ಲಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬೆಂಬಲ‌ ಕೊಡಲು ಸಿದ್ದರಾಗಿದ್ದಾರೆ.
ಮಾತುಕತೆ ವೇಳೆ ರಮೇಶ್​ ಜಾರಕಿಹೊಳಿ ಮಹಾರಾಷ್ಟ್ರ ಸಿಎಂಗೆ ಐದಕ್ಕೂ ಹೆಚ್ಚು ಬೇಡಿಕೆ ಇಟ್ಟಿದ್ದಾರೆ.
Loading...


  • ರಮೇಶ್ ಜಾರಕಿಹೊಳಿಯನ್ನು‌ ಡಿಸಿಎಂ‌‌ ಮಾಡುವುದು.

  • ಜಾರಕಿಹೊಳಿ ಕಡೆಯ ಆರು ಶಾಸಕರನ್ನು ಮಂತ್ರಿ ಮಾಡುವುದು.

  • ಉಳಿದವರಿಗೆ ಪ್ರಮುಖ ನಿಗಮ‌, ಮಂಡಳಿ ‌ನೀಡುವುದು.

  • ಉಪ ಚುನಾವಣೆಯಲ್ಲಿ ಸಂಪೂರ್ಣ ಖರ್ಚು- ವೆಚ್ಚ ನೋಡಿಕೊಳ್ಳುವುದು.

  • ಅವರ ಕ್ಷೇತ್ರಗಳಿಗೆ ಹೆಚ್ಚಿನ‌ ಅನುದಾನ ನೀಡಬೇಕು ಎಂಬ ಬೇಡಿಕೆಗಳನ್ನು ರಮೇಶ್ ಜಾರಕಿಹೊಳಿ ಇಟ್ಟಿದ್ದಾರೆ.


ಮಹಾ ಸಿಎಂ ಫಡ್ನವೀಸ್​, ರಮೇಶ್ ಜಾರಕಿಹೊಳಿ‌ ‌ಬೇಡಿಕೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದು, ತೀರ್ಮಾನ‌ ತಿಳಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಫಡ್ನವೀಸ್ ಭೇಟಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಮೇಶ್​ ಜಾರಕಿಹೊಳಿ, ಮಹಾರಾಷ್ಟ್ರದಲ್ಲಿ ನಮಗೆ ಸೇರಿದ ಸಕ್ಕರೆ ಕಾರ್ಖಾನೆಗಳಿವೆ. ಅವುಗಳ ಆಡಳಿತದ ದೃಷ್ಟಿಯಿಂದ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರನ್ನು ಆಗಾಗ್ಗೆ ಭೇಟಿಯಾಗುತ್ತಿರುತ್ತೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ ಜೊತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮಾತುಕತೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬಿ.ಎಸ್​.ಯಡಿಯೂರಪ್ಪ ನಕಾರ ಎತ್ತಿದ್ದಾರೆ. ನಾನೇನು ಹೇಳಲಿ, ಹೋಗಿ ಅವರನ್ನೇ ಕೇಳಿ. ನಿಮಗೆ ಅವರ ಮನೆ ಎಲ್ಲಿದೆ ಅಂತ ಗೊತ್ತು, ಅವರ ವಿಳಾಸ ಕೂಡ ಗೊತ್ತು ಎಂದು ಹೇಳಿದ್ದಾರೆ.
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...