ಬೆಂಗಳೂರು (ಸೆಪ್ಟೆಂಬರ್ 17): ಇಂದು ಮಹಾಲಯ ಅಮಾವಾಸ್ಯೆ. ಇಂದು ನಮ್ಮ ಪೂರ್ವಿಕರನ್ನು ನೆನಪು ಮಾಡಿಕೊಂಡು ಅವರಿಗೆ ಪಿಂಡ ಬಿಡುವ ಪದ್ದತಿ ನಮ್ಮಲ್ಲಿದೆ. ಈ ಬಾರಿ ಸೆಪ್ಟೆಂಬರ್2ರಿಂದ ಪಿತೃ ಪಕ್ಷ ಆರಂಭವಾಗಿತ್ತು. ಈ ಅವಧಿಯಲ್ಲಿ ನಮ್ಮನ್ನು ಬಿಟ್ಟು ಹೋದ ಹಿರಿಕರಿಗೆ ಪಿಂಡ ಇಡುವ ಪದ್ಧತಿ ಹಿಂದುಗಳಲ್ಲಿ ನಡೆದು ಬಂದಿದೆ. ಪಿತೃ ಪಕ್ಷ ಅಥವಾ ಶ್ರಾದ್ಧ ಪಕ್ಷವು 16 ದಿನಗಳನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಪಿಂಡ ಪ್ರಧಾನ ಮಾಡಿದರೆ ಅಗಲಿದ ಹಿರಿಕರು ನಮಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಇದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂಬುದು ಜನರ ನಂಬಿಕೆ.
ಪಿತೃ ಪಕ್ಷದಲ್ಲಿ ಬರುವ ಕೊನೆಯ ದಿನವು ಇದಾಗಿದೆ. ಹೀಗಾಗಿ ಇಂದು ಮಹತ್ವದ ದಿನ ಕೂಡ ಹೌದು. ಇಂದು ಮನೆಯಲ್ಲಿ ಮುಂಜಾನೆಯೇ ಎದ್ದು ಸ್ನಾನ ಮಾಡಬೇಕು. ಅಲ್ಲದೆ ಮನೆಯಲ್ಲಿ ಸಾತ್ವಿಕ ಆಹಾರ ಸೇವನೆ ಮಾಡಬೇಕು. ಮಧ್ಯಾಹ್ನ ಪಿಂಡ ಬಿಡುವ ಕೆಲಸ ಮಾಡಿದರೆ, ಸಂಜೆ ಮನೆಯ ಹೊರ ಭಾಗದಲ್ಲಿ ಸಾಸಿವೆ ದೀಪ ಹಚ್ಚಬೇಕು. ಈ ದಿನ ಕಾಗೆ ಹಾಗೂ ಹಸುಗಳಿಗೆ ಆಹಾರ ನೀಡಬೇಕು.
ಸೆಪ್ಟೆಂಬರ್ 2: ಪೂರ್ಣಿಮ ಶ್ರಾದ್ಧ
ಸೆಪ್ಟೆಂಬರ್ 3: ಪ್ರತಿಪಾದ ಶ್ರಾದ್ಧ
ಸೆಪ್ಟೆಂಬರ್ 4: ದ್ವಿತೀಯ ಶ್ರಾದ್ಧ
ಸೆಪ್ಟೆಂಬರ್ 5: ತೃತೀಯ ಶ್ರಾದ್ಧ
ಸೆಪ್ಟೆಂಬರ್ 6: ಚುತುರ್ಥಿ ಶ್ರಾದ್ಧ
ಸೆಪ್ಟೆಂಬರ್ 7: ಪಂಚಮಿ ಶ್ರಾದ್ಧ
ಸೆಪ್ಟೆಂಬರ್ 8: ಶಷ್ಠಿ ಶ್ರಾದ್ಧ
ಸೆಪ್ಟೆಂಬರ್ 9: ಸಪ್ತಮಿ ಶ್ರಾದ್ಧ
ಸೆಪ್ಟೆಂಬರ್ 10:ಅಷ್ಟಮಿ ಶ್ರಾದ್ಧ
ಸೆಪ್ಟೆಂಬರ್ 11: ನವಮಿ ಶ್ರಾದ್ಧ
ಸೆಪ್ಟೆಂಬರ್12: ದಶಮಿ ದಶಮಿ ಶ್ರಾದ್ಧ
ಸೆಪ್ಟೆಂಬರ್ 13: ಏಕಾದಶಿ ಶ್ರಾದ್ಧ
ಸೆಪ್ಟೆಂಬರ್ 14: ದ್ವಾದಶಿ ಶ್ರಾದ್ಧ
ಸೆಪ್ಟೆಂಬರ್ 15: ತ್ರಯೋದಶಿ ಶ್ರಾದ್ಧ
ಸೆಪ್ಟೆಂಬರ್ 16: ಚತುರ್ದಶಿ ಶ್ರಾದ್ಧ
ಸೆಪ್ಟೆಂಬರ್ 17: ಅಮವಾಸ್ಯೆ ಶ್ರಾದ್ಧ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ