ಒಕ್ಕಲಿಗರಷ್ಟೇ ಅಲ್ಲ, ಎಲ್ಲ ಸಮುದಾಯದವರಿಂದಲೂ ನನಗೆ ಮತ: ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ

ಮಹಾಲಕ್ಷ್ಮೀ ಲೇಔಟ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಕೆ. ಗೋಪಾಲಯ್ಯ ಅವರನ್ನು ಸೋಲಿಸಲು ಅತೀವ ಪ್ರಯತ್ನಗಳು ನಡೆಯುತ್ತಿವೆ. ಜೆಡಿಎಸ್​ನಿಂದ ಸಿಡಿದು ಹೋಗಿ ದೇವೇಗೌಡರ ಕುಟುಂಬದ ಬಗ್ಗೆ ಟೀಕಾ ಪ್ರಹಾರ ಮಾಡುತ್ತಿರುವ ಗೋಪಾಲಯ್ಯಗೆ ಮಣ್ಣುಮುಕ್ಕಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಣತೊಟ್ಟಿದ್ದಾರೆ.

news18
Updated:November 22, 2019, 3:46 PM IST
ಒಕ್ಕಲಿಗರಷ್ಟೇ ಅಲ್ಲ, ಎಲ್ಲ ಸಮುದಾಯದವರಿಂದಲೂ ನನಗೆ ಮತ: ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ
ಸಚಿವ ಕೆ. ಗೋಪಾಲಯ್ಯ
  • News18
  • Last Updated: November 22, 2019, 3:46 PM IST
  • Share this:
ಬೆಂಗಳೂರು(ನ. 22): ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಮತ್ತು ಜನರ ಮೇಲೆ ತಾನು ಬೆದರಿಕೆ ಹಾಕುತ್ತಿದ್ದೇನೆಂಬ ಆರೋಪವನ್ನು ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಬಲವಾಗಿ ನಿರಾಕರಿಸಿದ್ದಾರೆ. ನಾನು ಯಾರಿಗೂ ತೊಂದರೆ ಮಾಡಿಲ್ಲ. ಯಾರಿಗೂ ಧಮಕಿ ಹಾಕಿಲ್ಲ. ಧಮಕಿ ಹಾಕಿದ್ದನ್ನು ನಿರೂಪಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಈ ಕ್ಷೇತ್ರದ ಅನರ್ಹ ಶಾಸಕರಾದ ಅವರು ಸವಾಲು ಹಾಕಿದ್ದಾರೆ.

ನಾನು ಯಾರಿಗಾದರೂ ಬೆದರಿಕೆ ಹಾಕಿದ್ದಕ್ಕೆ ಒಂದು ಸಣ್ಣ ನಿದರ್ಶನ ತೋರಿಸಿದರೆ ರಾಜಕಾರಣದಿಂದ ನಿವೃತ್ತನಾಗುತ್ತೇನೆ. ಇದೆಲ್ಲಾ ಕುಮಾರಣ್ಣಗೆ ಗೊತ್ತು. ಚುನಾವಣೆ ಇರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅವರದ್ದೇ ಸರ್ಕಾರ ಇದ್ದಾಗ ಕ್ಷೇತ್ರಕ್ಕೆ ಏನು ಅನುದಾನ ಕೊಟ್ಟಿದ್ಧಾರೆ ಎಂಬುದು ಜನರಿಗೆ ಗೊತ್ತು ಎಂದು ಗೋಪಾಲಯ್ಯ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಪರಮೇಶ್ವರ್ ಕಟ್ಟಿದ ಪಕ್ಷಕ್ಕೆ ಜಿಗಿದು ಅವರನ್ನೇ ತುಳಿದ ಸಿದ್ಧರಾಮಯ್ಯ; ಶ್ರೀರಾಮುಲು ವಾಗ್ದಾಳಿ

ಕೆ. ಗೋಪಾಲಯ್ಯ ಅವರು ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ಅವರ ಕುಟುಂಬದ ಕೊಲೆ ಪ್ರಕರಣದಲ್ಲಿ ತಾನು ರಕ್ಷಣೆ ಕೊಡಲಿಲ್ಲವೆಂದು ಮುನಿಸಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಅವರು ಈ ರೀತಿಯಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಯಾರೇ ತಪ್ಪು ಮಾಡಿದರೂ ಸಂವಿಧಾನದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾರದ್ದೇ ಕುಟುಂಬದಲ್ಲಿ ತಪ್ಪಾಗಿದ್ದರೆ ಕಾನೂನಿದೆ, ಸಂವಿಧಾನ ಇದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಗೋಪಾಲಯ್ಯ ಅಭಿಪ್ರಾಯಪಟ್ಟಿದ್ದಾರೆ.

ಗೋಪಾಲಯ್ಯಗೆ ಮತ ಹಾಕಿದರೆ ಒಕ್ಕಲಿಗ ಸಮುದಾಯದ ವಿರುದ್ಧ ಮತ ಹಾಕಿದಂತೆ ಎಂಬ ಕುಮಾರಸ್ವಾಮಿ ಹೇಳಿಕೆಗು ಅವರು ತಿರುಗೇಟು ನೀಡಿದ್ದಾರೆ. ಕ್ಷೇತ್ರದಲ್ಲಿ ನನ್ನ ಒಕ್ಕಲಿಗ ಸಮುದಾಯವಷ್ಟೇ ಅಲ್ಲ, ಬೇರೆ ಸಮುದಾಯದವರು ಗೋಪಾಲಯ್ಯರಲ್ಲದೇ ಮತ್ಯಾರಿಗೆ ಬೆಂಬಲ ಕೊಡುತ್ತಾರೆ? ನಾನು ಈ ಕ್ಷೇತ್ರದಲ್ಲೇ ಜನ್ಮ ತಾಳಿದ್ದೇನೆ. ನನ್ನ ಹುಟ್ಟೂ ಇಲ್ಲೇ, ಸಾವೂ ಇದೇ ಕ್ಷೇತ್ರದಲ್ಲೇ. ಆರು ವರ್ಷದಲ್ಲಿ ನಾನು ಏನು ಮಾಡಿದ್ದೇನೆ ಎಂದು ಜನರಿಗೆ ಗೊತ್ತಿದೆ. ಅವರು ಏನೇ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿಯಲ್ಲ, ಆರೋಪ ಮಾಡೋದು ಬಿಟ್ಟು ಬಿಜೆಪಿಗೆ ಬೇರೆ ಕೆಲಸವಿಲ್ಲ; ದಿನೇಶ್ ಗುಂಡೂರಾವ್ ತಿರುಗೇಟುಮಹಾಲಕ್ಷ್ಮೀ ಲೇಔಟ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ಕೆ. ಗೋಪಾಲಯ್ಯ ಅವರನ್ನು ಸೋಲಿಸಲು ಅತೀವ ಪ್ರಯತ್ನಗಳು ನಡೆಯುತ್ತಿವೆ. ಜೆಡಿಎಸ್​ನಿಂದ ಸಿಡಿದು ಹೋಗಿ ದೇವೇಗೌಡರ ಕುಟುಂಬದ ಬಗ್ಗೆ ಟೀಕಾ ಪ್ರಹಾರ ಮಾಡುತ್ತಿರುವ ಗೋಪಾಲಯ್ಯಗೆ ಮಣ್ಣುಮುಕ್ಕಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಣತೊಟ್ಟಿದ್ದಾರೆ. ಜೆಡಿಎಸ್​ನಿಂದ ಗಿರೀಶ್ ನಾಶಿ ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್​ನಿಂದ ಎಂ. ಶಿವರಾಜ್ ಅವರು ಸ್ಪರ್ಧೆ ಮಾಡಿದ್ದಾರೆ. ಕನ್ನಡ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಅವರು ಅದೃಷ್ಟಪರೀಕ್ಷೆ ನಡೆಸುತ್ತಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಗೋಪಾಲಯ್ಯ ಅವರು ಶೇ. 55ಕ್ಕಿಂತ ಹೆಚ್ಚು ಮತ ಪಡೆದು ಜಯಭೇರಿ ಭಾರಿಸಿದ್ದರು. ಬಿಜೆಪಿಯ ನೆ.ಲ. ನರೇಂದ್ರಬಾಬು ಎರಡನೇ ಸ್ಥಾನ ಪಡೆದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವ ಗೋಪಾಲಯ್ಯ ಅವರು ಈ ಬಾರಿಯೂ ಗೆಲ್ಲುವ ಸಾಧ್ಯತೆ ಇದೆ ಎಂದು ಗ್ರೌಂಡ್ ರಿಪೋರ್ಟ್ಸ್ ಹೇಳುತ್ತಿವೆ. ಡಿಸೆಂಬರ್ 5ರಂದು ಮತದಾನವಾಗಲಿದ್ದು, ಡಿ. 9ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 22, 2019, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading