ಮಹದಾಯಿ ಸಮಸ್ಯೆ ಆದಷ್ಟು ಬೇಗ ಇತ್ಯರ್ಥ ಮಾಡಲಾಗುವುದು: ಸಿಎಂ ಯಡಿಯೂರಪ್ಪ ಭರವಸೆ

ಮನೆಕಟ್ಟಲು 1 ವಾರದಲ್ಲೇ 5 ಲಕ್ಷ ರೂ. ನೀಡುತ್ತೇವೆ‌. ಮನೆ ದುರಸ್ತಿ ಮಾಡಿಕೊಳ್ಳಲು 1 ಲಕ್ಷ ರೂ. ಪರಿಹಾರ ಹಾಗೂ ನೆರೆಪೀಡಿತ ಕುಟುಂಬಗಳಿಗೆ 10 ಲಕ್ಷ ಕೊಡಲಾಗುತ್ತಿದೆ. ಹಾಗೇಯೇ ಅಗತ್ಯವಿರುವ ಎಲ್ಲ ಕಡೆಯೂ ತಕ್ಷಣ ಶೆಡ್ ನಿರ್ಮಾಣ ಮಾಡಿ ನವಗ್ರಾಮ ನಿರ್ಮಾಣಕ್ಕೆ ಮುಂದಾಗಲಾಗುವುದು.

G Hareeshkumar | news18
Updated:September 10, 2019, 5:05 PM IST
ಮಹದಾಯಿ ಸಮಸ್ಯೆ ಆದಷ್ಟು ಬೇಗ ಇತ್ಯರ್ಥ ಮಾಡಲಾಗುವುದು: ಸಿಎಂ ಯಡಿಯೂರಪ್ಪ ಭರವಸೆ
ಸಿಎಂ ಯಡಿಯೂರಪ್ಪ
  • News18
  • Last Updated: September 10, 2019, 5:05 PM IST
  • Share this:
ಬೆಳಗಾವಿ (ಸೆ.10):  ಮಹದಾಯಿ ವಿವಾದ ಸಂಬಂಧ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ಸಭೆ ಮಾಡುತ್ತೇವೆ. ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿರುವೆ. ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಭೇಟಿಗೆ ದಿನಾಂಕ ನಿಗದಿ ಪಡಿಸಲು ಹೇಳಿದ್ದೇನೆ. ಆದಷ್ಟು ಬೇಗ ಮಹದಾಯಿ ವಿವಾದ ಬಗೆಹರಿಸುತ್ತೇವೆಂದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಬೆಳಗಾವಿ ಜಿಲ್ಲೆಯ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಸಿಎಂ, ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 1 ಲಕ್ಷದ 10 ಸಾವಿರ ಜನರಿಗೆ ಹತ್ತು ಸಾವಿರ ರೂಪಾಯಿ ಕೊಡುವ ಕೆಲಸ ಮುಗದಿದೆ. ಮನೆಗಳು ಹಾಳಾಗಿದ್ದವರಿಗೆ ಅಡಿಪಾಯ ​ಹಾಕಿಕೊಡಲು ಒಂದು ಲಕ್ಷ ರೂಪಾಯಿ ತಕ್ಷಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದ್ದು, ವಾಸಲು ಯೋಗ್ಯವಿಲ್ಲದವರಿಗೆ ಐವತ್ತು ಸಾವಿರ ಕೊಡುತ್ತೇವೆ ಎಂದರು.

ಮನೆಕಟ್ಟಲು 1 ವಾರದಲ್ಲೇ 5 ಲಕ್ಷ ರೂ. ನೀಡುತ್ತೇವೆ‌. ಮನೆ ದುರಸ್ತಿ ಮಾಡಿಕೊಳ್ಳಲು 1 ಲಕ್ಷ ರೂ. ಪರಿಹಾರ ಹಾಗೂ ನೆರೆಪೀಡಿತ ಕುಟುಂಬಗಳಿಗೆ 10 ಲಕ್ಷ ಕೊಡಲಾಗುತ್ತಿದೆ. ಹಾಗೇಯೇ ಅಗತ್ಯವಿರುವ ಎಲ್ಲ ಕಡೆಯೂ ತಕ್ಷಣ ಶೆಡ್ ನಿರ್ಮಾಣ ಮಾಡಿ ನವಗ್ರಾಮ ನಿರ್ಮಾಣಕ್ಕೆ ಮುಂದಾಗಲಾಗುವುದು.

ಇದನ್ನೂ ಓದಿ :  ಕಾಡಿನತ್ತ ಮುಖಮಾಡಿದ ದಸರಾ ಗಜಪಡೆಯ ರೆಬೆಲ್ ಈಶ್ವರ

ಗ್ರಾಮಸ್ಥರು ಸ್ಥಳಾಂತರಕ್ಕೆ ಒಪ್ಪಿದರೆ ಮಾತ್ರ ಸರ್ಕಾರದಿಂದಲೇ ನವ ಗ್ರಾಮ ನಿರ್ಮಿಸಲಾಗುವುದು. ಸರ್ಕಾರ ನೆರೆ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲುತ್ತದೆ. ಎಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿ ನಮ್ಮ ಬೆಂಬಲ ನೀಡಲಾಗುವುದು. ಪ್ರವಾಹ ಸಂತ್ರಸ್ತರು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ, ನಿಮ್ಮ ಜೊತೆ  ಸರ್ಕಾರ ಇದೆ ಎಂದು ಭರವಸೆ ನೀಡಿದರು.

ಪ್ರವಾಹದಿಂದ ಆದ ಬೆಳೆನಾಶಕ್ಕೆ ಹೆಚ್ಚಿನ ಪರಿಹಾರ ಕೊಡಲು ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ, ಕೇಂದ್ರದಿಂದ ಪರಿಹಾರ ಸಿಗಲು ಸ್ವಲ್ಪ ಸಮಯ ಬೇಕು. ಸಂತ್ರಸ್ತರಿಗೆ ಸಕಲ ನೆರವು ಕೊಡಲು ನಾವು ಬದ್ಧ ಎಂದರು

ಎಲ್ಲಾ ಗ್ರಾಮಗಳಲ್ಲಿಯೂ ಹದಗೆಟ್ಟಿರುವ ರಸ್ತೆಗಳನ್ನು ತಕ್ಷಣ ರಿಪೇರಿ ಮಾಡಿಸಿ ಕೊಡಲಾಗುವುದು. ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.ಮೃತಪಟ್ಟ ಬಾಲಕನಿಗೆ ಐದು ಲಕ್ಷ ರೂ ಪರಿಹಾರ

ಸುರೇಬಾನದ ಪರಿಹಾರ ಕೇಂದ್ರದಲ್ಲಿ ಬಾಲಕ ಅಬ್ದುಲ್ ಮುಲ್ಲಾನವರ್ ಮೃತಪಟ್ಟ ಹಿನ್ನೆಲೆ. ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಾಲಕನ ಅಜ್ಜಿ ಪೀರಮ್ಮನಿಗೆ  ಹಸ್ತಾಂತರ ಮಾಡಿದರು.

ಕೆಟ್ಟಿರುವ ಎಲ್ಲ ಟಿಸಿಗಳನ್ನು ಸರಿಪಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸಲಾಗುವುದು.
ಎಲ್ಲಾ ಗ್ರಾಮಗಳಲ್ಲಿಯೂ ಹದಗೆಟ್ಟಿರುವ ರಸ್ತೆಗಳನ್ನು ತಕ್ಷಣ ರಿಪೇರಿ ಮಾಡಿಸಿ ಕೊಡಲಾಗುವುದು. ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸಲಾಗುವುದು.

ಇದನ್ನೂ ಓದಿ : ಇಂದು ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಬಿಎಸ್​ವೈ ಭೇಟಿ; ಪರಿಶೀಲನೆ

ರಾಮದುರ್ಗ ತಾಲೂಕಿನ ಚಿಕ್ಕ ಹಂಪಿಹೊಳಿ ಮತ್ತು ಹೀರೆ ಹಂಪಿಹೊಳಿ ಗ್ರಾಮಕ್ಕೆ ಸಿಎಂ  ಭೇಟಿ ನೀಡಿ ಇಲ್ಲಿನ ನೆರೆಪೀಡಿತ ಪ್ರದೇಶದಲ್ಲಿ ಪರಿಶೀಲನೆ ನಡೆಸಿದರು. ಹಾಗೆಯೇ ಸುರೇಬಾನ್ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳ ಆಲಿಸಿದರು.

First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading