3ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಪ್ರತಿಭಟನೆ; ರಾಜ್ಯಪಾಲರಿಗೆ 11 ಗಂಟೆವರೆಗೆ ಗಡುವು ನೀಡಿದ ರೈತರು!

ಇಂದಾದರೂ ರಾಜ್ಯಪಾಲರನ್ನು ಭೇಟಿ‌ ಮಾಡಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವಂತೆ ರೈತ ಹೋರಾಟಗಾರರು ಮನವಿ ಮಾಡಲಿದ್ದಾರೆ.

Vinay Bhat | news18-kannada
Updated:October 19, 2019, 7:59 AM IST
3ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಪ್ರತಿಭಟನೆ; ರಾಜ್ಯಪಾಲರಿಗೆ 11 ಗಂಟೆವರೆಗೆ ಗಡುವು ನೀಡಿದ ರೈತರು!
ಮಹದಾಯಿ ಹೋರಾಟಗಾರರಿಂದ ಬೆಂಗಳೂರು ಚಲೋ
  • Share this:
ಬೆಂಗಳೂರು (ಅ. 19): ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ  ಹೋರಾಟ ನಡೆಸುತ್ತಿರುವ ರೈತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಮಳೆಯಲ್ಲಿಯೆ ರಾತ್ರಿಯಿಡಿ ರಸ್ತೆಯಲ್ಲಿ ಧರಣಿ ಕುಳಿತಿದ್ದ ಪರಿಣಾಮ ಮೂಲ ಸೌಕರ್ಯಗಳಿಲ್ಲದೆ ಮಹಿಳಾ ಹೋರಾಟಗಾರರು ಪರದಾಟ ನಡೆಸಿದರು. ಅಲ್ಲದೆ ಕೆಲವು ಮಹಿಳೆಯರಿಗೆ ಚಳಿ ಜ್ವರ ಶುರುವಾದ ಹಿನ್ನಲೆ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಸವದತ್ತಿ ಮೂಲದ ಗದಿಗೆಮ್ಮ ಎಂಬುವವರಿಗೆ ಜ್ವರ ತೀವ್ರವಾಗಿದೆ ಎಂದು ತಿಳಿದುಬಂದಿದೆ.

ಇಬ್ಭರು ಮಹಿಳೆಯರನ್ನ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ. ಕೆಲ ವಯಸ್ಸಾದ ಮಹಿಳಾ ಹೋರಾಟಗಾರರು ಹೊದಿಕೆಯಿಲ್ಲದೆ ರಾತ್ರಿ ಚಳಿಯಲ್ಲೇ ರೈಲ್ವೆ ನಿಲ್ದಾಣದಲ್ಲಿ ಮಲಗುವಂತಾಯಿತು.

ಸಿದ್ದರಾಮಯ್ಯ ಆಪ್ತ ಶಾಸಕ ಭೈರತಿ ಸುರೇಶ್ ಹತ್ಯೆಗೆ ಯತ್ನ; ಆರೋಪಿ ಕಾರ್ಪೆಂಟರ್ ಶಿವು ಬಂಧನ

ಮಳೆಯನ್ನು ಲೆಕ್ಕಿಸದೆ ಟರ್ಪಲ್ಸ್ ಹಿಡಿದು ಅಹೋರಾತ್ರಿ ಹೋರಟಗಾರರು ಪ್ರತಿಭಟನೆ ನಡೆಸಿದರು. ಉತ್ತರ ಕರ್ನಾಟಕದ ಜನಪ್ರತಿನಿಗಳ ವಿರುದ್ದ ಹಾಗೂ ಸರ್ಕಾರದ ಧೋರಣೆಗೆ ಅನ್ನದಾತರು ಆಕ್ರೋಶ ಹೊರಹಾಕುತ್ತಿದ್ದಾರೆ.

11 ಗಂಟೆಗೆ ಡೆಡ್ ಲೈನ್:

ಇಂದು ಬೆಳಗ್ಗೆ 11 ಗಂಟೆ ಒಳಗೆ ನಮ್ಮ ಮನವಿ ಸ್ವೀಕರಿಸಲಿಲ್ಲ ಎಂದಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿರುವ ವೀರೇಶ್ ಸೊಬರದಮಠ ಹೇಳಿದ್ದಾರೆ. ರಾಜ್ಯಪಾಲರು ನಮ್ಮ ಮನವಿಯನ್ನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಾದರೆ  ಪತ್ರ ನೀಡಲಿ. ನೀರು ಬಿಟ್ಟು, ಆಹಾರ ಸೇವನೆ ನಿಲ್ಲಿಸಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ನಾವು ಮಹಾತ್ಮ ಗಾಂಧೀಜಿ ಅವರ ತತ್ವವನ್ನು ಪಾಲಿಸಲಿದ್ದೇವೆ. ನಮ್ಮ ಮನವಿಯನ್ನು ಪಡೆದುಕೊಳ್ಳದಿದ್ದರೆ ಬೆಂಗಳೂರಿನಿಂದ ಹೊರಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.ಭಾರತ ರತ್ನ ಗೌರವವನ್ನು ಸಾವರ್ಕರ್​ಗೆ ಆ‌ಮೇಲೆ ಕೊಡುವಿರಂತೆ, ಮೊದಲು ಸಿದ್ಧಗಂಗಾ ಶ್ರೀಗೆ ನೀಡಿ; ಸಿದ್ದರಾಮಯ್ಯ ಆಗ್ರಹ

ಅಲ್ಲದೆ ನಮಗೆ ಯಾರಿಗಾದರು ಸಮಸ್ಯೆ ಆದರೆ ಅದಕ್ಕೆ ಈ ವ್ಯವಸ್ಥೆಯೇ ಕಾರಣ ಎಂದು ವೀರೇಶ್ ಸೊಬರದಮಠ ಎಚ್ಚರಿಕೆಯನ್ನೂ ನೀಡಿದ್ದಾರೆ.

ಒಟ್ಟಾರೆ ಇಂದಾದರೂ ರಾಜ್ಯಪಾಲರನ್ನು ಭೇಟಿ‌ ಮಾಡಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ರಾಜ್ಯಪಾಲರು ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವಂತೆ ರೈತ ಹೋರಾಟಗಾರರು ಮನವಿ ಮಾಡಲಿದ್ದಾರೆ.

First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading