ಬುಧವಾರ ‘ದೆಹಲಿ ಚಲೋ’ – ರಾಜಧಾನಿಗೆ ತೆರಳಿದ ಮಹದಾಯಿ ಹೋರಾಟಗಾರರು

ಮಹದಾಯಿ ಹೋರಾಟ ಒಕ್ಕೂಟದ ಮುಖಂಡರಾದ ವಿಜಯ ಕುಲಕರ್ಣಿ, ಸುಭಾಷ್‌ಚಂದ್ರಗೌಡ ಪಾಟೀಲ್, ಕುಮಾರಸ್ವಾಮಿ ಹಿರೇಮಠ, ಹೇಮನಗೌಡ ಬಸನಗೌಡರ್ ಮತ್ತು ವೀರಣ್ಣ ಮಳಗಿ ನೇತೃತ್ವದಲ್ಲಿ ದೆಹಲಿ ಚಲೋ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ ಭಾಗದ ನಲ್ವತ್ತು ರೈತರು ದೆಹಲಿ ಚಲೋ ಹೋರಾಟದಲ್ಲಿ ಭಾಗವಹಿಸಿದ್ದಾರೆ.

news18
Updated:November 24, 2019, 7:29 PM IST
ಬುಧವಾರ ‘ದೆಹಲಿ ಚಲೋ’ – ರಾಜಧಾನಿಗೆ ತೆರಳಿದ ಮಹದಾಯಿ ಹೋರಾಟಗಾರರು
ಮಹದಾಯಿ ಹೋರಾಟಗಾರರು
  • News18
  • Last Updated: November 24, 2019, 7:29 PM IST
  • Share this:
ಹುಬ್ಬಳ್ಳಿ(ನ. 24): ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು ದೆಹಲಿ ಚಲೋ ಹೋರಾಟ ಹಮ್ಮಿಕೊಂಡಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬುಧವಾರ ದೆಹಲಿಯ ಸಂಸತ್ ಭವನಕ್ಕೆ ತೆರಳಲಿರುವ ಮಹದಾಯಿ ಹೋರಾಟಗಾರರು, ಪ್ರಧಾನಿ ಮತ್ತು ಕೇಂದ್ರ ನಿರಾವರಿ ಸಚಿವರ ಭೇಟಿಗೆ ಸಮಯ ಕೇಳಿದ್ದಾರೆ.

ನ್ಯಾಯಾಧಿಕರಣದ ತೀರ್ಪನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು. ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು‌. ಕುಡಿಯುವ ನೀರಿನ ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿಸಬೇಕು. ಯೋಜನೆಯ ಕುರಿತು ಮರು ಪರಿಶೀಲನಾ ಸಮಿತಿ ನೇಮಕ ಮಾಡಬಾರದು ಎಂಬುದು ಮಹದಾಯಿ ಹೋರಾಟಗಾರರ ಪರಮುಖ ಬೆಡಿಕೆಗಳಾಗಿವೆ. ಬುಧವಾರ ಸಂಸತ್ ಭವನಕ್ಕೆ ತೆರಳಲಿರುವ ಮಹದಾಯಿ ಹೋರಾಟಗಾರರು ಕೇಂದ್ರ ನಾಯಕರಿಗೆ ಮನವಿ ಸಲ್ಲಿಸಲಿದ್ದಾರೆ.

ಮಹದಾಯಿ ಹೋರಾಟ ಒಕ್ಕೂಟದ ಮುಖಂಡರಾದ ವಿಜಯ ಕುಲಕರ್ಣಿ, ಸುಭಾಷ್‌ಚಂದ್ರಗೌಡ ಪಾಟೀಲ್, ಕುಮಾರಸ್ವಾಮಿ ಹಿರೇಮಠ, ಹೇಮನಗೌಡ ಬಸನಗೌಡರ್ ಮತ್ತು ವೀರಣ್ಣ ಮಳಗಿ ನೇತೃತ್ವದಲ್ಲಿ ದೆಹಲಿ ಚಲೋ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ, ನವಲಗುಂದ, ನರಗುಂದ ಭಾಗದ ನಲ್ವತ್ತು ರೈತರು ದೆಹಲಿ ಚಲೋ ಹೋರಾಟದಲ್ಲಿ ಭಾಗವಹಿಸಿದ್ದಾರೆ.

ಇದನ್ನೂ ಓದಿ: ನಾನು ಉಪಮುಖ್ಯಮಂತ್ರಿ ಆಗಲಿಲ್ಲ ಎಂಬ ನೋವು ಜನರಲ್ಲಿದೆ: ಶ್ರೀರಾಮುಲು

ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯೆ ದಶಕಗಳಿಂದ ವ್ಯಾಜ್ಯದಲ್ಲಿರುವ ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆಗೆ 2018ರಲ್ಲಿ ನ್ಯಾಯಾಧೀಕರಣವು ಪರಿಹಾರ ಸೂತ್ರ ಪ್ರಕಟಿಸಿತು. ಅದರಂತೆ ಗೋವಾಕ್ಕೆ 26, ಕರ್ನಾಟಕಕ್ಕೆ 13.4 ಮತ್ತು ಮಹಾರಾಷ್ಟ್ರಕ್ಕೆ 1.3 ಟಿಎಂಸಿ ನೀರಿನ ಪಾಲು ಸಿಗಬೇಕೆಂದು ಮಹದಾಯಿ ನದಿ ನೀರು ಹಂಚಿಕೆ ನ್ಯಾಯಾಧಿಕರಣವು ತೀರ್ಪು ನೀಡಿತು. ಇದಕ್ಕೆ ಕೇಂದ್ರ ಸರ್ಕಾರ ಅಧಿಸೂಚನೆ ನೀಡುವವರೆಗೂ ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳುವಂತಿಲ್ಲ. ಇತ್ತೀಚೆಗಷ್ಟೇ ಕೇಂದ್ರ ಪರಿಸರ ಇಲಾಖೆಯು ಕುಡಿಯುವ ನೀರಿಗೆ ಕಳಸಾ ಬಂಡೂರಿ ನಾಲೆ ಯೋಜನೆಯನ್ನು ಪ್ರಾರಂಭಿಸಬಹುದು ಎಂದು ಕರ್ನಾಟಕಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತು. ಆದರೆ, ಐದು ದಿನಗಳ ಹಿಂದೆ ಅಂದರೆ ನ. 19ರಂದು ಗೋವಾ ಸರ್ಕಾರ ಮತ್ತೆ ತಕರಾರು ಎತ್ತಿದೆ. ಕರ್ನಾಟಕದ ಮಹದಾಯಿ ಯೋಜನೆ ಪ್ರಾರಂಭವಾಗಲು ತಾನು ಸಮ್ಮತಿಸುವುದಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ಧಾರೆ. ಅಲ್ಲದೇ, ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನೂ ಭೇಟಿಯಾಗಿ ತಮ್ಮ ಆಕ್ಷೇಪ ಸಲ್ಲಿಸಿದ್ದಾರೆನ್ನಲಾಗಿದೆ.

ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳೆನಿಸಿರುವ ಬೆಳಗಾವಿ, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಿಗೆ ಕುಡಿಯಲು ನೀರು ಒದಗಿಸಲು ಕಳಸಾ, ಬಂಡೂರಿ ನಾಲೆಗಳ ಮೂಲಕ ಮಹದಾಯಿ ನದಿಯನ್ನು ಬಳಸಿಕೊಳ್ಳುವ ಯೋಜನೆ ಇದಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 24, 2019, 7:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading