Maha Shivaratri: ಇಂದು ರಾಜ್ಯದೆಲ್ಲೆಡೆ ಅದ್ದೂರಿಯಿಂದ ಮಹಾಶಿವರಾತ್ರಿ ಆಚರಣೆ

ದೇಶದೆಲ್ಲೆಡೆ ಇಂದು ಎಲ್ಲ ಶಿವನ ದೇವಾಲಯಗಳಲ್ಲೂ ರಾತ್ರಿಯಿಡೀ ಭಜನೆ, ಪೂಜೆಗಳು ನೆರವೇರುತ್ತವೆ. ವಿಭೂತಿ ಹಾಗೂ ರುದ್ರಾಕ್ಷಿ ಮಾಲೆ, ಹೂಗಳು, ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಬೆಳಗ್ಗೆಯಿಂದಲೇ ಉಪವಾಸವಿದ್ದು, ಅಹೋರಾತ್ರಿ ಜಾಗರಣೆ ಮಾಡಲಾಗುತ್ತದೆ.

sushma chakre | news18
Updated:March 4, 2019, 9:32 AM IST
Maha Shivaratri: ಇಂದು ರಾಜ್ಯದೆಲ್ಲೆಡೆ ಅದ್ದೂರಿಯಿಂದ ಮಹಾಶಿವರಾತ್ರಿ ಆಚರಣೆ
ಮುರುಡೇಶ್ವರದಲ್ಲಿರುವ ಶಿವನ ಬೃಹತ್​ ಪ್ರತಿಮೆ
  • News18
  • Last Updated: March 4, 2019, 9:32 AM IST
  • Share this:
ಬೆಂಗಳೂರು (ಮಾ.4): ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬವನ್ನು ಇಂದು ರಾಜ್ಯಾದ್ಯಂತ ಅದ್ದೂರಿಯಿಂದ ಆಚರಿಸಲಾಗುತ್ತಿದೆ. ದುಷ್ಟಸಂಹಾರಕ ಶಿವ ಈ ದಿನ ತನ್ನನ್ನು ಪೂಜಿಸುವ ಭಕ್ತರಿಗೆ ವಿಶೇಷ ಅನುಗ್ರಹ ನೀಡುತ್ತಾನೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಇಡೀ ದಿನ ಉಪವಾಸವಿದ್ದು, ಈ ರಾತ್ರಿ ಜಾಗರಣೆ ಮಾಡಿದ ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದೂ ಹೇಳಲಾಗುತ್ತದೆ.

ರಾಜ್ಯದೆಲ್ಲೆಡೆ ಇಂದು ಶಿವರಾತ್ರಿಯನ್ನು ಆಚರಿಸಲಾಗುತ್ತಿದ್ದು, ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ ಪ್ರತೀವರ್ಷ ವಿಶೇಷ ಆಚರಣೆ ಇರುತ್ತದೆ. ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ರಾಜ್ಯ ಮತ್ತು ಹೊರರಾಜ್ಯದ ನಾನಾ ಭಾಗಗಳಿಂದ ಬರುವ ಭಕ್ತರು ಕಾಲ್ನಡಿಗೆಯಲ್ಲೇ ಧರ್ಮಸ್ಥಳಕ್ಕೆ ಆಗಮಿಸಿ ಅಹೋರಾತ್ರಿ ಭಜನೆ ಮಾಡುತ್ತಾ ಜಾಗರಣೆ ಮಾಡುತ್ತಾರೆ. ಸಾವಿರಾರು ಭಕ್ತರು ಮಂಜುನಾಥಸ್ವಾಮಿ ದೇವಸ್ಥಾನದ ಎದುರು ಕುಳಿತು ಜಾಗರಣೆ ಮಾಡುವುದು ಬಹಳ ಅನಾದಿ ಕಾಲದಿಂದಲೂ ಇಲ್ಲಿ ನಡೆದುಕೊಂಡು ಬಂದಿರುವ ಆಚರಣೆ.

ಇಂದು ಅರಮನೆ ಮೈದಾನದಲ್ಲಿ ಕಾಂಗ್ರೆಸ್​ನಿಂದ​ ಅಲ್ಪಸಂಖ್ಯಾತರ ಸಮಾವೇಶ

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಬೃಹತ್​ ಶಿವನ ವಿಗ್ರಹ ಇರುವುದರಿಂದ ಇಲ್ಲಿನ ಶಿವರಾತ್ರಿ ಆಚರಣೆಯೂ ಬಹಳ ವಿಶೇಷವಾಗಿರುತ್ತದೆ. ಹಾಗೇ, ಕೋಲಾರ ಜಿಲ್ಲೆಯ ಕೋಟಿಲಿಂಗ ಕ್ಷೇತ್ರದಲ್ಲೂ ಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗೋಕರ್ಣದ ಆತ್ಮಲಿಂಗ ಮಹಾಬಲೇಶ್ವರ, ನಂಜನಗೂಡು ನಂಜುಂಡೇಶ್ವರ ದೇಗುಲಗಳು ರಾಜ್ಯದ ಪ್ರಮುಖ ಶಿವನ ದೇವಾಲಯಗಳಾಗಿವೆ.

ದೇಶದೆಲ್ಲೆಡೆ ಇಂದು ಎಲ್ಲ ಶಿವನ ದೇವಾಲಯಗಳಲ್ಲೂ ರಾತ್ರಿಯಿಡೀ ಭಜನೆ, ಪೂಜೆಗಳು ನೆರವೇರುತ್ತವೆ. ವಿಭೂತಿ ಹಾಗೂ ರುದ್ರಾಕ್ಷಿ ಮಾಲೆ, ಹೂಗಳು, ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಿಂದ ಶಿವಲಿಂಗವನ್ನು ಅಲಂಕರಿಸಲಾಗುತ್ತದೆ. ಬೆಳಗ್ಗೆಯಿಂದಲೇ ಉಪವಾಸವಿದ್ದು, ಅಹೋರಾತ್ರಿ ಜಾಗರಣೆ ಮಾಡಲಾಗುತ್ತದೆ.

ಮಂಡ್ಯದಲ್ಲಿ ಸುಮಲತಾ ಕಣಕ್ಕಿಳಿದರೆ ಮೈತ್ರಿಗೆ ಕುತ್ತು; ಕಾಂಗ್ರೆಸ್​​ ಹೈಕಮಾಂಡ್​ಗೆ ಆರಂಭವಾಯ್ತು ಭಯ

ಶಿವರಾತ್ರಿ ಆಚರಣೆ ಹಿನ್ನೆಲೆ:ಪ್ರತಿ ಸಂವತ್ಸರದಲ್ಲಿ ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬ ಪ್ರತೀತಿಯಿದೆ.

ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ  ಪಾರ್ವತಿಯನ್ನು ವಿವಾಹವಾಗಿದ್ದು ಶಿವರಾತ್ರಿಯ ದಿನವೇ. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು. ಅಷ್ಟೇ ಅಲ್ಲ, ಶಿವನು ಸಮುದ್ರ ಮಂಥನದಿಂದ ಉದ್ಭವಿಸಿದ ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡ ಇದೇ ಸಮಯದಲ್ಲಿ. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ.

First published:March 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ