Maha Shivaratri 2021: ದೇಶದೆಲ್ಲೆಡೆ ಇಂದು ಶಿವರಾತ್ರಿ‌ ಸಂಭ್ರಮ; ದಕ್ಷಿಣ ಕಾಶಿ ಉಪ್ಪಿನಂಗಡಿಯಲ್ಲಿ ಮಖೆ‌  ಶಿವರಾತ್ರಿ ಜಾತ್ರೆ

ನೇತ್ರಾವತಿ ನದಿ ನೀರು, ಹಾಲು ಹಾಗೂ ಸೀಯಾಳಾಭಿಷೇಕವನ್ನು ಈ ಶಿವಲಿಂಗಕ್ಕೆ ಮಾಡುವ ಮೂಲಕ ಭಕ್ತಾಧಿಗಳು ಮಹಾಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ನೇತ್ರಾವತಿ ನದಿಯಲ್ಲಿ ಸಂಪೂರ್ಣ ಮುಳುಗಡೆಯಾಗಿರುವ ಈ ಉದ್ಭವ ಲಿಂಗವನ್ನು ಮಖೆ ಜಾತ್ರೆ ಸಂದರ್ಭದಲ್ಲಿ ಈ ಲಿಂಗದ ಮೇಲೆ ತುಂಬಿರುವ ಮರಳನ್ನು ಸರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಮಖೆ‌ ಶಿವರಾತ್ರಿ ಜಾತ್ರೆ

ಮಖೆ‌ ಶಿವರಾತ್ರಿ ಜಾತ್ರೆ

  • Share this:
ದಕ್ಷಿಣ ಕನ್ನಡ(ಮಾ.11): ದೇಶದೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲಾ ಶಿವ ದೇವಸ್ಥಾನಗಳಲ್ಲಿ ಇಂದು ಭಕ್ತರ ದಂಡು ಶಿವನ ಆರಾಧನೆಯಲ್ಲಿ ಮಗ್ನವಾಗಿದೆ. ಶಿವನಿಗೆ ವಿಶೇಷ ಅಭಿಷೇಕ ಸೇವೆಯ ಜೊತೆಗೆ ರಾತ್ರಿ ಪೂರ್ತಿ ಜಾಗರಣೆಯನ್ನೂ ನಡೆಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿಯ ವಿಶೇಷ ಮಖೆ ಜಾತ್ರೆ ಆರಂಭಗೊಂಡಿದೆ. ನೇತ್ರಾವತಿ ಹಾಗೂ ಕುಮಾರಧಾರ ನದಿಗಳ ಸಂಗಮ ಕ್ಷೇತ್ರದ ಉದ್ಭವಲಿಂಗಕ್ಕೆ ಭಕ್ತರೇ ಅಭಿಷೇಕ ಮಾಡುವುದು ಇಲ್ಲಿನ ವಿಶೇಷತೆ. ದೇಶದೆಲ್ಲೆಡೆ ಕೊರೋನಾ ಮಹಾಮಾರಿಯ ಆತಂಕ ಇನ್ನೂ ಇರುವ ಕಾರಣ, ಉಪ್ಪಿನಂಗಡಿಯ ಪುಣ್ಯ ನದಿಗಳ ಸಂಗಮ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡುವ ಮೂಲಕ ಭಕ್ತರು ಮಹಾಮಾರಿ ಕಳೆಯಲು ಶಿವನ ಮೊರೆ ಹೋಗುತ್ತಿದ್ದಾರೆ.

ದಕ್ಷಿಣ ಕಾಶಿ ಎಂದೇ ಹೆಸರು ವಾಸಿಯಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ಕ್ಷೇತ್ರದಲ್ಲಿ ಇದೀಗ ಶಿವರಾತ್ರಿಯ ವಿಶೇಷ ಮಖೆ ಜಾತ್ರೆ ಆರಂಭಗೊಂಡಿದೆ. ಜಿಲ್ಲೆಯ ಪವಿತ್ರ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಭೂಮಿಯಲ್ಲಿ ನೆಲೆನಿಂತ ಈ ಕ್ಷೇತ್ರ  ಸಾವಿರಾರು ಸಂಖ್ಯೆಯ ಭಕ್ತಾಧಿಗಳ ಪುಣ್ಯಭೂಮಿಯೂ ಆಗಿದೆ. ಶಿವರಾತ್ರಿಯ ಈ ಸಂದರ್ಭದಲ್ಲಿ ಕ್ಷೇತ್ರದ ಉದ್ಭವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ.

Kodagu: ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಿ ಕರೆ ನೀಡಿದ್ದ ಪೊನ್ನಂಪೇಟೆ ತಾಲ್ಲೂಕು ಬಂದ್ ಯಶಸ್ವಿ

ನೇತ್ರಾವತಿ ನದಿ ಹಾಗೂ ಕುಮಾರಧಾರಾ ನದಿಗಳು ಸಂಗಮವಾಗುವ ಸ್ಥಳದಲ್ಲಿ ಈ ಉದ್ಭವಲಿಂಗವಿದ್ದು, ಶಿವರಾತ್ರಿಯ ಸಂದರ್ಭದಲ್ಲಿ ನದಿಯ ಮರಳನ್ನು ಸರಿಸಿ ಉದ್ಭವಲಿಂಗವನ್ನು ಭಕ್ತಾಧಿಗಳ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ನೇತ್ರಾವತಿ ನದಿ ನೀರು, ಹಾಲು ಹಾಗೂ ಸೀಯಾಳಾಭಿಷೇಕವನ್ನು ಈ ಶಿವಲಿಂಗಕ್ಕೆ ಮಾಡುವ ಮೂಲಕ ಭಕ್ತಾಧಿಗಳು ಮಹಾಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ನೇತ್ರಾವತಿ ನದಿಯಲ್ಲಿ ಸಂಪೂರ್ಣ ಮುಳುಗಡೆಯಾಗಿರುವ ಈ ಉದ್ಭವ ಲಿಂಗವನ್ನು ಮಖೆ ಜಾತ್ರೆ ಸಂದರ್ಭದಲ್ಲಿ ಈ ಲಿಂಗದ ಮೇಲೆ ತುಂಬಿರುವ ಮರಳನ್ನು ಸರಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಕೊರೋನಾ ಎನ್ನುವ ಮಹಾಮಾರಿ ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿದೆ. ಮಹಾಮಾರಿಯಿಂದ ಭಕ್ತರನ್ನು ರಕ್ಷಿಸಲು ಶಿವನೊಬ್ಬನಿಂದಲೇ ಸಾಧ್ಯ ಎನ್ನುವುದು ಭಕ್ತರ ನಂಬಿಕೆ. ಈ ಕಾರಣಕ್ಕಾಗಿ ಈ ಬಾರಿ ಶಿವನಿಗೆ ಜಲ, ಕ್ಷೀರ ಹಾಗೂ ಸಿಯಾಳಾಭಿಷೇಕದ ಜೊತೆಗೆ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಳದಲ್ಲಿ ತೀರ್ಥಸ್ನಾನವನ್ನೂ ಭಕ್ತರು ಮಾಡುತ್ತಿದ್ದಾರೆ. ಅಲ್ಲದೆ ಇತರ ದೇವಸ್ಥಾನಗಳಂತೆ ದೇವರನ್ನು ದೂರದಿಂದಲೇ ನೋಡಬೇಕಾದ ಪದ್ಧತಿಯೂ ಈ ಕ್ಷೇತ್ರದಲ್ಲಿಲ್ಲ.

ಉದ್ಭವಲಿಂಗಕ್ಕೆ ತಾವೇ ಅಭಿಷೇಕ ಮಾಡುವ ಮೂಲಕ ದೇವರನ್ನು ಹತ್ತಿರದಿಂದಲೇ ಬೇಡುವ ಭಕ್ತಾಧಿಗಳು ಇಲ್ಲಿ ಭಕ್ತಿಯಿಂದ ಪುಳಕಿತರಾಗುತ್ತಿದ್ದಾರೆ. ಊರ ಹಾಗೂ ಪರವೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಇಲ್ಲಿ ಆಗಮಿಸುತ್ತಿದ್ದು, ಶಿವರಾತ್ರಿಯಂದು ಕ್ಷೇತ್ರದಲ್ಲಿ ವಿಶೇಷ ಪೂಜೆಯೂ ನೆರವೇರುತ್ತದೆ. ವರ್ಷಕ್ಕೆ ಮೂರು ಬಾರಿ ಸಹಸ್ತ್ರಲಿಂಗೇಶ್ವರ ದೇವಸ್ಥಾನದಲ್ಲಿ ಮಖೆ ಜಾತ್ರೆ ನಡೆಯುತ್ತದೆ. ಆದರೆ ಮಾಘ ಮಾಸದ ಶಿವರಾತ್ರಿಯಂದು ನಡೆಯುವ ಮಖೆ ಜಾತ್ರೆಗೆ ವಿಶೇಷ ಮಹತ್ವವೂ ಇಲ್ಲಿದೆ.
Published by:Latha CG
First published: