ಮಂಗಳೂರು ಗೋಲಿಬಾರ್​; ವಿಚಾರಣೆಗೆ ಹಾಜರಾಗುವಂತೆ ಪೊಲೀಸ್​ ಕಮೀಷನರ್​ ಸೇರಿದಂತೆ ಇಲಾಖೆಯ 50 ಜನರಿಗೆ ನೊಟೀಸ್​

ಉಡುಪಿ ಜಿಲ್ಲಾಧಿಕಾರಿಯಾಗಿರುವ ಜಗದೀಶ್ ತನಿಖಾಧಿಕಾರಿಯಾಗಿರುವ ಮ್ಯಾಜಿಸ್ಟ್ರಿಯಲ್ ಕೋರ್ಟ್​ನಲ್ಲಿ ಮಂಗಳೂರು ಗೋಲಿಬಾರ್​ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಹೀಗಾಗಿ ಮಾರ್ಚ್​09 ಮತ್ತು 12 ರಂದು ನಡೆಯಲಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್​ ಕಮೀಷನರ್​ ಡಾ|ಪಿ.ಎಸ್​. ಹರ್ಷ, ಡಿಸಿಪಿ ಅರುಣಾಂಗ್ಯುಗಿರಿ ಸೇರಿದಂತೆ ಒಟ್ಟು 9 ಡಿಸಿಪಿ ಮತ್ತು 40 ಜನ ಪೊಲೀಸರಿಗೆ ಇಂದು ನೊಟೀಸ್​ ನೀಡಲಾಗಿದೆ. 

ಮಂಗಳೂರು ಗಲಭೆಯ ದೃಶ್ಯ.

ಮಂಗಳೂರು ಗಲಭೆಯ ದೃಶ್ಯ.

  • Share this:
ಮಂಗಳೂರು (ಮಾರ್ಚ್​ 05); ಮಂಗಳೂರು ಗೋಲಿಬಾರ್​ನಲ್ಲಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್​ ಕಮೀಷನರ್​ ಡಾ|ಪಿ.ಎಸ್. ಹರ್ಷಾ ಸೇರಿದಂತೆ​ ಪೊಲೀಸ್​ ಇಲಾಖೆಯ ಸುಮಾರು 50 ಜನರಿಗೆ ಜಿಲ್ಲಾಧಿಕಾರಿ ಜಗದೀಶ್​ ನೊಟೀಸ್​ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಯಾಗಿರುವ ಜಗದೀಶ್ ತನಿಖಾಧಿಕಾರಿಯಾಗಿರುವ ಮ್ಯಾಜಿಸ್ಟ್ರಿಯಲ್ ಕೋರ್ಟ್​ನಲ್ಲಿ ಮಂಗಳೂರು ಗೋಲಿಬಾರ್​ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಹೀಗಾಗಿ ಮಾರ್ಚ್​09 ಮತ್ತು 12 ರಂದು ನಡೆಯಲಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್​ ಕಮೀಷನರ್​ ಡಾ|ಪಿ.ಎಸ್​. ಹರ್ಷ, ಡಿಸಿಪಿ ಅರುಣಾಂಗ್ಯುಗಿರಿ ಸೇರಿದಂತೆ ಒಟ್ಟು 9 ಡಿಸಿಪಿ ಮತ್ತು 40 ಜನ ಪೊಲೀಸರಿಗೆ ಇಂದು ನೊಟೀಸ್​ ನೀಡಲಾಗಿದೆ.

ಕಳೆದ ಡಿಸೆಂಬರ್​​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಂತೆಯೇ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಈ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಈ ಬೆನ್ನಲ್ಲೇ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಾದ್ ವಿರುದ್ಧವೇ ಎಫ್​ಐಆರ್ ದಾಖಲಿಸುವ ಮೂಲಕ ಪೊಲೀಸರು ವಿವಾದಕ್ಕೆ ಕಾರಣರಾಗಿದ್ದರು. ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರನ್ನು ಕೊಲ್ಲು ಸಂಚು ರೂಪಿಸಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿತ್ತು.ಈ ಘಟನೆಗೆ ಸಂಬಂಧಿಸಿದಂತೆ ಮೃತ ಅಬ್ದುಲ್ ಜಲೀಲ್ ಮತ್ತು ನೌಶಾದ್ ಸೇರಿದಂತೆ 29 ಜನರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಪೊಲೀಸ್ ಗುಂಡಿನ ದಾಳಿಗೆ ಬಲಿಯಾದ ಜಲೀಲ್​ನನ್ನು 3ನೇ ಆರೋಪಿಯೆಂದು ಹಾಗೂ ನೌಶಾದ್​ನನ್ನು 8ನೇ ಆರೋಪಿಯೆಂದು ನಮೂದಿಸಲಾಗಿದೆ. ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು, ಅವರ ಸಾವಿಗೆ ನ್ಯಾಯ ದೊರಕಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೃತರ ವಿರುದ್ಧವೇ ಎಫ್​ಐಆರ್ ದಾಖಲಿಸಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮಧ್ಯೆಯೇ ಪೊಲೀಸರ ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಜೆಡಿಎಸ್ ಮುಖಂಡ ಮುಹಮ್ಮದ್ ಇಕ್ಬಾಲ್ ಹೈಕೋರ್ಟ್​​ ಮೆಟ್ಟಿಲೇರಿದ್ದರು.

ಇದನ್ನೂ ಓದಿ : ಮಂಗಳೂರು ಗೋಲಿಬಾರ್​​ ಕೇಸ್: 16 ಮಂದಿಗೆ ಷರತ್ತುಬದ್ಧ ಜಾಮೀನು; ಹೈಕೋರ್ಟ್​ ಆದೇಶ
First published: