ರಾಮನಗರ: ಜಿಲ್ಲೆಯ ಮಾಗಡಿ ತಾಲೂಕು (Magadi Taluk) ತಹಶೀಲ್ದಾರ್ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ತಹಶೀಲ್ದಾರ್ (Tehsildar) ಶ್ರೀನಿವಾಸ್ ಪ್ರಸಾದ್ ಕಳೆದ 15 ದಿನಗಳಿಂದ ತಹಶೀಲ್ದಾರ್ ಕಚೇರಿಗೆ ಆಗಮಿಸಿಲ್ಲ, ಅವರ ಫೋನ್ ಕೂಡ ಸ್ವಿಚ್ಆಫ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಮನಗರ (Ramanagara) ಜಿಲ್ಲಾಧಿಕಾರಿಗಳು (District Commissioner) ತಹಶೀಲ್ದಾರ್ ಅವರಿಗೆ ಅಧಿಕೃತವಾಗಿ ಯಾವುದೇ ರಜೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ (Bribe)ಇಟ್ಟ ಆರೋಪದ ಅಡಿ ಪ್ರಕರಣ ದಾಖಲಾಗುತ್ತಿದ್ದಂತೆ ತಹಶೀಲ್ದಾರ್ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಯಾರ ಸಂಪರ್ಕಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಲಂಚ ಪಡೆದ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ತಹಶೀಲ್ದಾರ್
ಅಂದಹಾಗೇ, ನಾಪತ್ತೆಯಾಗಿರುವ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಅವರು ಪ್ರಕರಣ ಒಂದರಲ್ಲಿ ಎ2 ಆರೋಪಿಯಾಗಿದ್ದಾರೆ. ಜನವರಿ 3ರಂದು ತಾಲೂಕು ಕಚೇರಿ ಬಳಿ ಏಜೆಂಟ್ ಮಂಜುನಾಥ್ ಎಂಬಾತನ ಬಂಧನ ಮಾಡಲಾಗಿತ್ತು.
ಇದನ್ನೂ ಓದಿ: Bengaluru: ಪುಂಡ-ಪೋಕರಿಗಳ ತಾಣವಾಯ್ತಾ ಬೆಂಗಳೂರು ಜ್ಞಾನಭಾರತಿ ವಿವಿ ಆವರಣ? ಎಲ್ಲೆಂದರಲ್ಲಿ ಬಿಯರ್ ಬಾಟಲ್, ಕಾಂಡೋಮ್ ಪತ್ತೆ!
ಜಮೀನು ವಿಚಾರದಲ್ಲಿ ಸಾರ್ವಜನಿಕರೊಬ್ಬರಿಂದ 60 ಸಾವಿರ ರೂಪಾಯಿ ಬೇಡಿಕೆ ಇಟ್ಟು, ಮುಂಗಡವಾಗಿ 20 ಸಾವಿರ ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಏಜೆಂಟ್ ಮಂಜುನಾಥ್ ಎಂಬಾತನನ್ನು ಬಂಧಿಸಲಾಗಿತ್ತು. ಬಂಧಿತ ವ್ಯಕ್ತಿ ಮಂಜುನಾಥ್ ವಿಚಾರಣೆ ನಡೆಸಿದ ವೇಳೆ ಆತನ ನಾಪತ್ತೆಯಾಗಿರುವ ತಹಶೀಲ್ದಾರ್ ಶ್ರೀನಿವಾಸ್ ಪರಮಾಪ್ತ ಏಜೆಂಟ್ ಮಂಜುನಾಥ್ ಎಂಬ ಮಾಹಿತಿ ಲಭ್ಯವಾಗಿತ್ತಂತೆ.
ಅಲ್ಲದೇ, ತಹಶೀಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಕೂಡ ಲೋಕಾಯುಕ್ತ ಅಧಿಕಾರಗಳಿಗೆ ಲಭ್ಯವಾಗಿತ್ತು. ಆಡಿಯೋ ಆಧಾರವಾಗಿ ಇಟ್ಟಿಕೊಂಡು ತಹಶೀಲ್ದಾರ್ ಮೇಲೆ ಅಧಿಕಾರಿಗಳು ಎಫ್ಐಆರ್ ದಾಖಲು ಮಾಡಿದ್ದರು. ಈ ಕುರಿತು ವಿಚಾರಣೆ ನಡೆಸಲು ನೋಟಿಸ್ ನೀಡುತ್ತಿದ್ದಂತೆ ವಿಚಾರಣೆಗೂ ಬಾರದೆ, ಕೆಲಸಕ್ಕೂ ಬಾರದೆ 15 ದಿನಗಳಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Bengaluru: ಕರ್ತವ್ಯನಿರತ ಸರ್ಕಲ್ ಇನ್ಸ್ಪೆಕ್ಟರ್ ಕತ್ತಿನ ಪಟ್ಟಿ ಹಿಡಿದು ಹಲ್ಲೆ; ಬಿಜೆಪಿ ಮಾಜಿ ಕಾರ್ಪೊರೇಟರ್ ಅರೆಸ್ಟ್
ಸದ್ಯ ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಅವರ ಮೊಬೈಲ್ ಫೋನ್ ಸ್ವಿಚ್ಆಫ್ ಆಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಮನಗರ ಜಿಲ್ಲಾಧಿಕಾರಿಗಳು, ಮಾಗಡಿ ತಹಶೀಲ್ದಾರ್ ಅವರಿಗೆ ಯಾವುದೇ ರಜೆ ನೀಡಿಲ್ಲವೆಂದು ತಿಳಿಸಿದ್ದಾರೆ. ಇನ್ನು ತಹಶೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಸಚಿವರಾದ ಆರ್.ಅಶೋಕ್ ಹಾಗೂ ಅಶ್ವಥ್ ನಾರಾಯಣ್ ಸಹ ಕಿತ್ತಾಡಿಕೊಂಡಿದ್ದರು. ಆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಕೃಪಾಕಟಾಕ್ಷದಿಂದ ಮಾಗಡಿಗೆ ಶ್ರೀನಿವಾಸ್ ಪ್ರಸಾದ್ ಬಂದಿದ್ದರು ಎನ್ನಲಾಗಿತ್ತು.
ಸ್ಯಾಂಟ್ರೋ ರವಿ ಪ್ರಕರಣ; ಸಿಐಡಿಗೆ ತನಿಖಾ ವರದಿ ಹಸ್ತಾಂತರ
ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ಹಸ್ತಾಂತರ ಹಿನ್ನಲೆಯಲ್ಲಿ CIDಗೆ ಪ್ರಕರಣದ ಸಂಪೂರ್ಣ ತನಿಖಾ ವರದಿ ನೀಡಿರುವ ಮೈಸೂರು ಕಮಿಷನರ್ ರಮೇಶ್ ಬಾನೋತ್, ಇನ್ನೂ ಮೈಸೂರಿನ ವಿಜಯನಗರ ಠಾಣೆಯಲ್ಲಿ ದಾಖಲಾದ ಕೇಸ್ ನ ತನಿಖಾ ಸಂಪೂರ್ಣ ವರದಿ CID ಅಧಿಕಾರಿಗಳಿಗೆ ನೀಡಿದ್ದಾರೆ.
ಸ್ಯಾಂಟ್ರೋ ರವಿ ಪತ್ನಿ ಕೊಟ್ಟ ದೂರಿನನ್ವಯ CID ಕಛೇರಿ ಗೆ ರವಿ ಪತ್ನಿ ಹೇಳಿಕೆ ನೀಡಲು ಆಗಮಿಸುವ ಸಾಧ್ಯತೆ ಇದ್ದು, ರವಿ ಪತ್ನಿಯ ಹೇಳಿಕೆ ಕುರಿತು ಪ್ರತಿಯೊಂದು ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ CID ಕಛೇರಿಯಲ್ಲಿರುವ ಸ್ಪೆಷಲ್ ಎಂಕ್ವಿರಿ ರೋಮ್ ನಲ್ಲಿ ಇರುವ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್ ಮಂಜುನಾಥ್ ಮತ್ತೆಗೆ ವೈದ್ಯಕೀಯ ಪರೀಕ್ಷೆಗೆ ಮಾಡಿದ್ದಾರೆ. ಸಿಐಡಿ ಡಿವೈಎಸ್ಪಿ ನರಸಿಂಹಮೂರ್ತಿ ಟೀಂ ನಿಂದ ವಿಚಾರಣೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ