ವಿಪ್ ಚರ್ಚೆ ಕುರಿತು ನಮಗೆ ನೋಟಿಸ್​ ನೀಡಿರಲಿಲ್ಲ: ಸದನದಲ್ಲಿ ಬಿಜೆಪಿಯ ಮಾಧುಸ್ವಾಮಿ ಆಕ್ಷೇಪ

Karnataka Trust vote: ಸಿದ್ದರಾಮಯ್ಯ ನ್ಯಾಯಾಲಯದ ಆದೇಶದ ಕುರಿತು ಚರ್ಚೆ ನಡೆಸುತ್ತೇವೆ ಎಂದು ನಮಗೆ ನೋಟಿಸ್​ ನೀಡಿರಲಿಲ್ಲ. ಈ ಕುರಿತು ನಮಗೆ ಮೊದಲೇ ತಿಳಿಸಿದ್ದರೆ, ನಾವು ಈ ಬಗ್ಗೆ ಚರ್ಚೆಗೆ ತಯಾರಾಗುತ್ತಿದ್ದೇವು

Seema.R | news18
Updated:July 18, 2019, 2:27 PM IST
ವಿಪ್ ಚರ್ಚೆ ಕುರಿತು ನಮಗೆ ನೋಟಿಸ್​ ನೀಡಿರಲಿಲ್ಲ: ಸದನದಲ್ಲಿ ಬಿಜೆಪಿಯ ಮಾಧುಸ್ವಾಮಿ ಆಕ್ಷೇಪ
ಮಾಧುಸ್ವಾಮಿ-ಕೃಷ್ಣಭೈರೇಗೌಡ
  • News18
  • Last Updated: July 18, 2019, 2:27 PM IST
  • Share this:
ಬೆಂಗಳೂರು (ಜು.18):  ಸಿಎಂ ಕುಮಾರಸ್ವಾಮಿ ವಿಶ್ವಾಸ ಗೊತ್ತುವಳಿ ಮಂಡನೆ ಮಾಡುತ್ತಾರೆ ಎಂದು ನಾವು ಬಂದಿದ್ದೇವೆ. ಆದರೆ, ಸಿದ್ದರಾಮಯ್ಯ ವಿಪ್​ ಹಕ್ಕು ಚ್ಯುತಿ ಕುರಿತು ಪ್ರಸ್ತಾಪ ಮಾಡುತ್ತಿದ್ದಾರೆ. ಸದನದಲ್ಲಿ ಚರ್ಚೆಯಾಗುವ ಈ ವಿಷಯದ ಕುರಿತು ನಮಗೆ ಆಡಳಿತ ಪಕ್ಷ ನೋಟಿಸ್​ ನೀಡಿಲ್ಲ ಎಂದು ಬಿಜೆಪಿ ನಾಯಕ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ನಿಯಾಮಾವಳಿ 350ರ ಪ್ರಕಾರ ಸದನದಲ್ಲಿ ಸ್ಪೀಕರ್​ ಮಾತಿಗೆ ಕ್ರಿಯಾಲೋಪ ಪ್ರಸ್ತಾಪ ಮಾಡಿ ಮಾತನಾಡಿದ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್​ ತೀರ್ಪಿನಲ್ಲಿ ಸಂವಿಧಾನಿಕ ಬಿಕ್ಕಟು ಮೂಡಿದೆ. ಕಾರಣ ವಿಪ್​ ಜಾರಿ ಮಾಡಿದರೂ ಶಾಸಕರು ಬರುವುದು ಬಿಡುವುದು ಅವರ ಇಚ್ಛೆ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ. ಇದರಿಂದಾಗಿ ಶಾಸಕಾಂಗ ಪಕ್ಷದ ನಾಯಕನಾದ ನನ್ನ ಹಕ್ಕಿನ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದರು.

ಪರಿಚ್ಛೇದ 10 ಹಾಗೂ ವಿಪ್​ ಉಲ್ಲಂಘನೆಯಾಗಿರುವ ಕುರಿತು ಸುದೀರ್ಘ ಭಾಷಣ ಮಾಡಿದ ಸಿದ್ದರಾಮಯ್ಯ ಅವರ ಮಾತಿಗೆ ಆಕ್ಷೇಪಿಸಿದ ಬಿಜೆಪಿ ನಾಯಕರು, "ಇಂದು ಸದನದಲ್ಲಿ ವಿಶ್ವಾಸ ಗೊತ್ತುವಳಿ ಮಂಡನೆಗೆ ದಿನ ನಿಗದಿಯಾಗಿದೆ. ಆದರೆ, ಇಲ್ಲಿ ಕ್ರಿಯಾಲೋಪ ಪ್ರಸ್ತಾಪ ಮಾಡುತ್ತಿದ್ದಾರೆ" ಎಂದು ಅಡ್ಡಿಪಡಿಸಿದರು.

ಅಲ್ಲದೆ ಸಿದ್ದರಾಮಯ್ಯ ನ್ಯಾಯಾಲಯದ ಆದೇಶದ ಕುರಿತು ಚರ್ಚೆ ನಡೆಸುತ್ತೇವೆ ಎಂದು ನಮಗೆ ನೋಟಿಸ್​ ನೀಡಿರಲಿಲ್ಲ. ಇದರಿಂದ ಬಿಜೆಪಿ ಈ ವಿಚಾರದ ಕುರಿತು ತಯಾರಾಗಿಲ್ಲ. ನಮಗೆ ಮೊದಲೇ ತಿಳಿಸಿದ್ದರೆ, ನಾವು ಕೂಡ ಈ ಬಗ್ಗೆ ಚರ್ಚೆಗೆ ತಯಾರಾಗುತ್ತಿದ್ದೆವು ಎಂದು ಮಾಧುಸ್ವಾಮಿ ಹೇಳಿದರು.

ಇದನ್ನು ಓದಿ: ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾರಕ ಖಾಯಿಲೆ, ಇದನ್ನು ಹೋಗಲಾಡಿಸದೆ ಗಾಂಧಿ ಆತ್ಮಕ್ಕೆ ಶಾಂತಿ ಇಲ್ಲ; ಕಿಡಿಕಾರಿದ ಸಿದ್ದರಾಮಯ್ಯ!

ಅದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ಕೃಷ್ಣಭೈರೇಗೌಡ, ಶಾಸಕರ ರಾಜೀನಾಮೆ ಕುರಿತು ಸ್ಪೀಕರ್​ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂಚೆ ವಿಶ್ವಾಸಮತ ಯಾಚನೆಗೆ ಮುಂದಾದರೆ ಅದು ಅಪರಿಪೂರ್ಣವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಈ ಕುರಿತು ಸದನದಲ್ಲಿ ನಾವು ಪ್ರಶ್ನಿಸಬಹುದು ಎಂದರು.

First published:July 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading