• Home
  • »
  • News
  • »
  • state
  • »
  • Madikeri: ಶಾಸಕರ ಮನೆ ಬಳಿಯೇ ಕಳಪೆ ಕಾಮಗಾರಿ? ಹೀಗಾದ್ರೆ ಜನ ಸಾಮಾನ್ಯರ ಪಾಡೇನು?

Madikeri: ಶಾಸಕರ ಮನೆ ಬಳಿಯೇ ಕಳಪೆ ಕಾಮಗಾರಿ? ಹೀಗಾದ್ರೆ ಜನ ಸಾಮಾನ್ಯರ ಪಾಡೇನು?

ಶಾಸಕರ ಮನೆ ಬಳಿ ಕಳಪೆ ಕಾಮಗಾರಿ

ಶಾಸಕರ ಮನೆ ಬಳಿ ಕಳಪೆ ಕಾಮಗಾರಿ

ಈಗ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದಿಂದ ಮಾದಾಪುರದವರೆಗಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಿರುಸೇತುವೆಗಳು, ನಾಲ್ಕು ಕಿಲೋ ಮೀಟರ್ ಉದ್ದದ ಚರಂಡಿ ಮತ್ತು ರಸ್ತೆ ಅಗಲೀಕರಣದ ಕಾಮಗಾರಿ ಭಾರೀ ಕಳಪೆಯಾಗಿದೆ ಎನ್ನುವ ಮತ್ತೊಂದು ಹೊಸ ಆರೋಪ ಸೇರ್ಪಡೆಯಾಗಿದೆ.

  • News18 Kannada
  • Last Updated :
  • Kodagu, India
  • Share this:

ಕೊಡಗು(ಅ.05): ಕೊಡಗು ಜಿಲ್ಲೆಯಲ್ಲಿ (Kodagu District) ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಕಳಪೆ ಎನ್ನುವ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ. ಜೊತೆಗೆ ಈ ಸರ್ಕಾರ ಶೇ 40 ರಷ್ಟು ಕಮಿಷನ್ (Corruption) ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪ ವರ್ಷಗಳ ಹಿಂದಿನಿಂದಲೂ ಬಾರಿ ಸದ್ದು ಮಾಡುತ್ತಿದೆ. ಈಗ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದಿಂದ ಮಾದಾಪುರದವರೆಗಿನ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಿರುಸೇತುವೆಗಳು, ನಾಲ್ಕು ಕಿಲೋ ಮೀಟರ್ ಉದ್ದದ ಚರಂಡಿ ಮತ್ತು ರಸ್ತೆ ಅಗಲೀಕರಣದ ಕಾಮಗಾರಿ ಭಾರೀ ಕಳಪೆಯಾಗಿದೆ ಎನ್ನುವ ಮತ್ತೊಂದು ಹೊಸ ಆರೋಪ ಸೇರ್ಪಡೆಯಾಗಿದೆ.


ಇದನ್ನೂ ಓದಿ:  Dose Habba: ದೀಪಾವಳಿಗೆ ದೋಸೆಹಬ್ಬ! ಬೆಳ್ತಂಗಡಿಯಲ್ಲಿ ದೋಸೆ ಸವಿದ ಸಾವಿರಾರು ಜನ!


ಹೌದು ಸೋಮವಾರಪೇಟೆ ತಾಲೂಕಿನ ಬೈಂದೂರು- ವಿರಾಜಪೇಟೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 27 ರಲ್ಲಿ ಚೈನ್ಹೇಜ್ 53 ರಿಂದ 60 ವರೆಗೆ 4 ಕೋಟಿ ರೂಪಾಯಿ ವೆಚ್ಚದಲ್ಲಿ ಆಯ್ದ ಕಾಮಗಾರಿಗಳನ್ನು ಮಾಡಲು ಈಗಾಗಲೇ ಕೆಲಸ ಶುರು ಮಾಡಲಾಗಿದೆ. ಒಟ್ಟು 11 ಕಿರುಸೇತುವೆ ಮಾಡಲಾಗುತ್ತಿದ್ದು, ಗುಣಮಟ್ಟ ಕಾಪಾಡಿಲ್ಲ. ಸೇತುವೆಗೆ ಒಟ್ಟು 8 ಕಬ್ಬಿಣದ ರಾಡುಗಳನ್ನು ಬಳಸಬೇಕು. ಆದರೆ ಇವರು ಕೇವಲ ಆರು ರಾಡುಗಳನ್ನು ಬಳಸಿದ್ದಾರೆ. ತಿರುವುಗಳಲ್ಲಿ ಮಾತ್ರವೇ ರಸ್ತೆ ಅಗಲೀಕರಣ ಮಾಡಲಾಗುತ್ತಿದ್ದು ಅದೂ ಕೂಡ ಕೇವಲ ಒಂದು ಭಾಗದಲ್ಲಿ ಮಾತ್ರವೇ ಅಗಲೀಕರಣ ಮಾಡಲಾಗುತ್ತಿದೆ. ಅಗಲೀಕರಣ ಮಾಡಿದ ಸ್ಥಳದಲ್ಲೂ ಜಿಎಸ್‍ಪಿ ಮತ್ತು ವೆಟ್‍ಮಿಕ್ಸ್ ಹಾಕಬೇಕು. ಆದರೆ ಅದನ್ನೂ ಹಾಕಿಲ್ಲ.


ಕಾಂಕ್ರಿಟ್ ವಾಲ್ ಬಿರುಕು


ಈಗಾಗಲೇ ನಿರ್ಮಿಸಿರುವ ಕಿರುಸೇತುವೆಗಳ ಕಾಂಕ್ರಿಟ್ ವಾಲ್ ಬಿರುಕು ಬಿಟ್ಟಿವೆ. ಜೊತೆಗೆ ಅಗತ್ಯದಷ್ಟು ಸಿಮೆಂಟ್ ಮತ್ತು ವೆಟ್‍ಮಿಕ್ಸ್ ಬಳಸದೆ ಕಾಮಗಾರಿ ಮಾಡಲಾಗಿದೆ. ಇದೆಲ್ಲವೂ ಕಳಪೆ ಎನ್ನುವುದು ಸ್ಪಷ್ಟವಾಗಿ ಘೋಚರಿಸುತ್ತದೆ ಎಂದು RTI ಕಾರ್ಯಕರ್ತ ಅನಿಲ್  ದೂರಿದ್ದಾರೆ. ಇದು ಗುತ್ತಿಗೆದಾರರನಿಗೆ ಲಾಭ ಮಾಡಿ ಕೊಡುವ ರೀತಿಯಲ್ಲಿ ಕಾಮಗಾರಿ ಇದೆ ಎಂದು ರಾಜ್ಯ ರೈತ ಸಂಘ ಮತ್ತು RTI ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.


ಕಳಪೆ ಕಾಮಗಾರಿ ಆಗಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೂರನೇ ಪಾರ್ಟಿ ಗುಣಮಟ್ಟ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ ಸಂದರ್ಭ ಕಳಪೆ ಕಾಮಗಾರಿಯಾಗಿರುವುದು ದೃಢಪಟ್ಟಿದೆ. ಹೀಗಾಗಿ ಕೆಲವು ಕಾಮಗಾರಿಗಳನ್ನು ತೆರವು ಮಾಡಿ ಮರು ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.


ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ ಜಿವಿಜಯ ಇಬ್ಬರ ಮನೆ


ಇನ್ನು ಇದೇ ರಸ್ತೆಯ ಕೇವಲ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿಯೇ ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವ ಬಿ.ಎ ಜಿವಿಜಯ ಇಬ್ಬರ ಮನೆಗಳಿದ್ದು, ಇಬ್ಬರೂ ಎರಡೊತ್ತೂ ಇಲ್ಲಿಯೇ ಓಡಾಡುತ್ತಾರೆ. ಇವರಿಗೆ ಇಲ್ಲಿ ಕಳಪೆ ಕಾಮಗಾರಿ ಆಗುತ್ತಿರುವುದು ಗೊತ್ತಿಲ್ಲವೇ.? ಅಥವಾ ಗೊತ್ತಿದ್ದರೂ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಸ್ಥಳಕ್ಕೆ ಬಂದ ಎಂಜಿನಿಯರ್​ಗಳನ್ನು ತರಾಟೆಗೆ ತೆಗೆದುಕೊಂಡ ಜನರು ಕಿರುಸೇತುವೆಗೆ ಕಟ್ಟಿದ್ದ ತಡೆಗೋಡೆಯನ್ನು ಒಡೆದು ಇಷ್ಟೊಂದು ಕಳಪೆ ಆಗಿದೆ ಎನ್ನುವುದು ತೋರಿಸಿದ್ದಾರೆ.


ಇದನ್ನೂ ಓದಿ:  Male Mahadeshwara Temple: ಮಲೆ ಮಹದೇಶ್ವರನಿಗೆ ಹಾಲರುವೆ ಸೇವೆ; ಬಾಲಕಿಯರು ಹೊತ್ತು ತಂದ ನೀರಲ್ಲಿ ಮಾದಪ್ಪನಿಗೆ ಅಭಿಷೇಕ


ನಾನು ಒಂದು ಪರ್ಸೆಂಟ್ ಕೂಡ ಕಮಿಷನ್ ತೆಗೆದುಕೊಳ್ಳುತ್ತಿಲ್ಲ


ಈ ಕುರಿತು ಪ್ರತಿಕ್ರಿಯಿಸಿರುವ ನನ್ನ ಕ್ಷೇತ್ರದಲ್ಲಿ ನೂರಾರು ಕಾಮಗಾರಿಗಳು ನಡೆಯುತ್ತಿವೆ. ಅವುಗಳೆಲ್ಲವನ್ನು ಗಮನಿಸಲು ಸಾಧ್ಯವಿಲ್ಲ. ಆದರೆ ಕೆಲವರು ರಾಜಕಾರಣಕ್ಕಾಗಿ ಕಾಮಗಾರಿಗಳು ಸರಿಯಿಲ್ಲ ಎಂದು ದೂರುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತಿದ್ದಾರೆ. ನಾನು ಒಂದು ಪರ್ಸೆಂಟ್ ಕೂಡ ಕಮಿಷನ್ ತೆಗೆದುಕೊಳ್ಳುತ್ತಿಲ್ಲ. ಕೊಟ್ಟಿದ್ದರೆ ಅವರು ಎದೆ ಮುಟ್ಟಿಕೊಂಡು ಹೇಳಲಿ. ರಾಜಕಾರಣಕ್ಕಾಗಿ ದೂರುತ್ತಿರುವವರಿಗೆ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡುತ್ತೇನೆ ಎಂದಿದ್ದಾರೆ.

Published by:Precilla Olivia Dias
First published: