Madikeri: ಡಿಜೆ ಸೌಂಡ್ಸ್ ಇಲ್ಲದೇ ಜನೋತ್ಸವವಾಗುವುದೇ ಮಡಿಕೇರಿ ದಸರಾ? ಸುಪ್ರೀಂಗೆ ಹೋಗಿ ಅನುಮತಿ ತರ್ತಾರಾ ಸಂಸದರು?

ಕೊಡಗು ಜಿಲ್ಲೆಯಲ್ಲಿ ಅದ್ಧೂರಿಯಿಂದ ನಡೆಯಬೇಕೆಂದುಕೊಂಡಿದ್ದ ದಸರಾ ಆಚರಣೆಗೆ ಇದೀಗ ಸುಪ್ರಿಂ ಕೋರ್ಟ್ ನ ಆದೇಶವಂತೂ ಬಹಳಷ್ಟು ಮಂದಿಗೆ ನಿರಾಸೆ ಮೂಡಿಸಿದೆ.

ಮಡಿಕೇರಿ ದಸರಾ

ಮಡಿಕೇರಿ ದಸರಾ

  • Share this:
ಕೊಡಗು: ಹಗಲು ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ನಡೆದರೆ, ರಾತ್ರಿ ಬೆಳಕಿನೋಕುಳಿಯಲ್ಲಿ ಮಿಂದೇಳುವ ಮಡಿಕೇರಿಯ ದಸರಾ (Madikeri Dasara) ಜನೋತ್ಸವ ನಡೆಯುತ್ತದೆ. ಅಲ್ಲಿನ ಹತ್ತು ಮಂಟಪಗಳು ಸಾದರಪಡಿಸುವ ಐತಿಹಾಸಿಕ ಮತ್ತು ಪೌರಾಣಿಕ ಕಥಾ ಹಂದರಗಳನ್ನು ಒಳಗೊಂಡ ಚಲವನಗಳ ಹೊಂದಿದ ಪುರಾಣದ ವ್ಯಕ್ತಿಗಳ ಗೊಂಬೆಗಳು ಕಿವಿಗಡಿಚಿಕ್ಕುವ ಧ್ವನಿ ಬೆಳಕಿನಲ್ಲಿ ಮಡಿಕೇರಿ (Madikeri) ನಗರದೊಳಗೆ ಸುರಾಸುರರ ಲೋಕವನ್ನೇ ಸೃಷ್ಟಿಸಿ ಬಿಡುತ್ತವೆ. ಅದೆಲ್ಲದಕ್ಕೂ ಮುಖ್ಯವಾಗಿ ಸಾಥ್ ನೀಡುವುದು ಧ್ವನಿವರ್ಧಕವೇ  (DJ Sounds). ಆದರೆ ಸುಪ್ರಿಂಕೋರ್ಟ್ (Supreme Court) ಹೊರಡಿಸಿರುವ ಆದೇಶದಿಂದಾಗಿ ಅದ್ಧೂರಿಯ ಜನೋತ್ಸವದ ಮೇಲೆ ತೂಗುಗತ್ತಿ ನೇತಾಡುತ್ತಿದೆ.

ಹೌದು ಕೋವಿಡ್ ಕಾರಣಗಳಿಂದ ಎರಡು ವರ್ಷಗಳಿಂದ ತೀರ ಸರಳವಾಗಿ ನಡೆದಿದ್ದ ಮಡಿಕೇರಿ ದಸರಾ ಜನೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಮಾಡಬೇಕೆಂಬ ಅಭಿಲಾಷೆಯಿಂದ ಈಗಾಗಲೇ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ತರಲಾಗಿದೆ. ಆದರೆ ರಾತ್ರಿ ಹತ್ತು ಗಂಟೆಯ ಬಳಿಕ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಸುಪ್ರಿಂಕೋರ್ಟ್ ಆದೇಶ ಮಾಡಿರುವುದರಿಂದ ಪೊಲೀಸ್ ಇಲಾಖೆ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲೇ ಬೇಕಾಗಿದೆ.

ಇದು ಮಡಿಕೇರಿ ದಸರಾವನ್ನು ವೈಭವೋಪೇತವಾಗಿ ನಡೆಸಬೇಕೆಂಬ ಕೊಡಗಿನ ಜನತೆಯ ಆಸೆಗೆ ತಣ್ಣೀರು ಎರಚಿಬಿಡುತ್ತಾ ಎನ್ನುವ ಆತಂಕ ಎದುರಾಗಿದೆ.

ಸುರಾಸುರರ ಭೀಕರ ಕಾಳಗ

ನಾಡ ಹಬ್ಬ ಮೈಸೂರು ದಸರಾವನ್ನು ಕಣ್ತುಂಬಿಕೊಂಡ ಅರ್ಧದಷ್ಟು ಜನರು ಅದು ಮುಗಿಯುತ್ತಿದ್ದಂತೆ ಮಡಿಕೇರಿಯಲ್ಲಿ ಬೆಳಕಿನ ಚಿತ್ತಾರದಲ್ಲಿ ಧರೆಗಿಳಿಯುವ ಸುರಾಸುರ ಭೀಕರ ಕಾಳಗವನ್ನು ನೋಡಿ ಪುಳಕಿತರಾಗಲು ಬರುತ್ತಾರೆ.

ಮಡಿಕೇರಿಯಲ್ಲಿರುವ ಗಾಂಧಿ ಮೈದಾನದಲ್ಲಿ ಕೂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳೂ ರಾತ್ರಿ ಇಡೀ ಮೇಳೈಸುತ್ತವೆ. ಇದೆಲ್ಲವನ್ನು ನೋಡಿ ಸಂಭ್ರಮಿಸಲು ಲಕ್ಷಾಂತರ ಜನರು ಕೊಡಗಿನತ್ತ ಧಾವಿಸುತ್ತಾರೆ. ಆದರೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಈಗ ಇದೆಲ್ಲದಕ್ಕೂ ಬೇಕ್ ಹಾಕುವ ಸಾಧ್ಯತೆ ಇದೆ.

ಮನವಿ ಸಲ್ಲಿಸಲಾಗಿದೆ ಶಾಸಕ ಅಪ್ಪಚ್ಚು ರಂಜನ್

ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಐತಿಹಾಸಿಕವಾಗಿರುವ ಹಬ್ಬಗಳನ್ನು ಆಚರಣೆ ಮಾಡುವುದಕ್ಕೆ ಧ್ವನಿವರ್ಧಕ ಅಗತ್ಯವಾಗಿದೆ. ಇದಕ್ಕಾಗಿ ಈಗಾಗಲೇ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಏನು ಮಾಡಲು ಸಾಧ್ಯವಿಲ್ಲವಾದರೂ ಸುಪ್ರೀಂಕೋರ್ಟ್ ಮೊರೆ ಹೋಗಿ ವಿಶೇಷ ಪ್ರಕರಣವೆಂದು ಮನವಿ ಸಲ್ಲಿಸಿ ಅವಕಾಶ ಕೇಳಬೇಕಾಗಿದೆ ಎಂದಿದ್ದಾರೆ.

Madikeri people demands to DJ Sound permission in dasara celebration rsk mrq
ಮಡಿಕೇರಿ ದಸರಾ


ಇದನ್ನೂ ಓದಿ:  Kodimutt Swamiji: ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನ; ವಿಷಜಂತುಗಳ ಆಗಮನ: ಮತ್ತೆ ಭವಿಷ್ಯ ನುಡಿದ ಶ್ರೀ

ಸುಪ್ರೀಂಕೋರ್ಟ್​ ಮೊರೆ ಹೋಗಲು ಒತ್ತಾಯ

165 ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿ ದಸರಾ ನಡೆಯುವುದೇ ರಾತ್ರಿ. ಶೋಭಾಯಾತ್ರೆ ನಡೆಯುವುದೇ ಧ್ವನಿವರ್ಧಕ ಮೂಲಕ. ಆದ್ದರಿಂದ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಸಾಕಷ್ಟು ಬೇಸರವಿದೆ. ಹೀಗಾಗಿ ಜಿಲ್ಲೆಯ ಇಬ್ಬರು ಶಾಸಕರು, ಸಂಸದರು ಕೋರ್ಟ್ ಮೊರೆಹೋಗಿ ಅವಕಾಶ ಕೇಳಬೇಕು ಎಂದು ಮನವಿ ಮಾಡುವುದಾಗಿ ದಸರಾ ಸಮಿತಿ ಕಾರ್ಯಾಧ್ಯಕ್ಷ ರಮೇಶ್ ಆಗ್ರಹಿಸಿದ್ದಾರೆ.

ಧ್ವನಿವರ್ದಕ ಬಳಕೆಗೆ ಅವಕಾಶ ಸಿಗುತ್ತಾ?

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಅದ್ಧೂರಿಯಿಂದ ನಡೆಯಬೇಕೆಂದುಕೊಂಡಿದ್ದ ದಸರಾ ಆಚರಣೆಗೆ ಇದೀಗ ಸುಪ್ರಿಂ ಕೋರ್ಟ್ ನ ಆದೇಶವಂತೂ ಬಹಳಷ್ಟು ಮಂದಿಗೆ ನಿರಾಸೆ ಮೂಡಿಸಿದ್ದು, ಸರ್ಕಾರ ಸುಪ್ರೀಂಗೆ ಮೊರೆ ಹೋಗಿ ಮಡಿಕೇರಿಯ ಅದ್ಧೂರಿ ದಸರಾ ಆಚರಣೆಗೆ ಅವಕಾಶ ಕೇಳುತ್ತಾ ಕಾದು ನೋಡಬೇಕಾಗಿದೆ.

ಇದನ್ನೂ ಓದಿ:  Ravi Katapadi: ಭಯಂಕರ ವೇಷದೊಳಗಿನ ಬಂಗಾರದ ಮನುಷ್ಯ! ಕೋಟಿಗೊಬ್ಬ ರವಿ ಕಟಪಾಡಿ

ಕನ್ನಡದಲ್ಲಿದ್ದ ಚೆಕ್ ತಿರಸ್ಕರಿಸಿದ್ದ ಬ್ಯಾಂಕ್​ಗೆ 85 ಸಾವಿರ ದಂಡ!

ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ವಾದಿರಾಜಾಚಾರ್ಯ ಇನಾಮದಾರ ಎಂಬುವರು ಹಳಿಯಾಳದ ಎಸ್‌ಬಿಐ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರು. ತಮ್ಮ ಉಳಿತಾಯ ಖಾತೆಯಲ್ಲಿ 9 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ಇತ್ತು. ಇದರಲ್ಲಿ ಕೇವಲ 6 ಸಾವಿರ ರೂಪಾಯಿ ಡ್ರಾ ಮಾಡಲು ಕನ್ನಡ ಭಾಷೆಯಲ್ಲಿ ಬರೆದುದಕ್ಕಾಗಿ ಬ್ಯಾಂಕ್ ಸಿಬ್ಬಂದಿ ಅಮಾನ್ಯ ಮಾಡಿದ್ದರು.

ಇದು ಕನ್ನಡ ಭಾಷೆಗೆ ಅವಮಾನ ಮಾಡಿದ ಹಾಗೆ ಎಂದು ಗ್ರಾಹಕ ಇಷ್ಟಕ್ಕೆ ಬಿಡದೆ ಧಾರವಾಡ (Dharwad) ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಇದರ ಪರಿಣಾಮ ಗ್ರಾಹಕರಿಗೆ ಜಯ ಸಿಗುವುದರ ಜೊತೆ ಬ್ಯಾಂಕ್ ಸಿಬ್ಬಂದಿಗೆ ದಂಡ ಹಾಕಲಾಗಿದೆ.
Published by:Mahmadrafik K
First published: