Kodagu Landslide: ಮಡಿಕೇರಿ ನಗರದ 6 ಪ್ರದೇಶಗಳಲ್ಲಿ ಈ ಬಾರಿಯೂ ಭೂಕುಸಿತವಾಗುವ ಆತಂಕ

ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲದೆ ಈ ಜನರು ಇನ್ನಿಲ್ಲದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಭೂ ಕುಸಿತ ಪ್ರವಾಹದಿಂದ ತಮಗೆ ಮುಕ್ತಿ ಇಲ್ಲವೇ ಎಂದು ಬೇಸರದಿಂದ ಪ್ರಶ್ನಿಸುತ್ತಾರೆ.

ಅಪಾಯದಂಚಿನಲ್ಲಿರುವ ಮನೆಗಳು

ಅಪಾಯದಂಚಿನಲ್ಲಿರುವ ಮನೆಗಳು

  • Share this:
Kodagu Rain: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಗಾಲ (Rainy Season) ಶುರುವಾಗಿದೆ. ಜಿಲ್ಲೆಯ ಜನರು ಮಳೆ ಅಂದ್ರೆ ಸಾಕು ಕನಸಲ್ಲೂ ಬೆಚ್ಚಿ ಬೀಳ್ತಾರೆ. ಅದ್ರಲ್ಲೂ  ಬೆಟ್ಟ ಗುಡ್ಡಗಳ ಮೇಲಿರೋ ಮಡಿಕೇರಿ (Madikeri) ನಗರದ ಜನರಿಗೆ ಈಗಲೇ ನಡುಕ ಶುರವಾಗಿದೆ. ಯಾಕಂದ್ರೆ ನಗರದ ಆರು ಬಡಾವಣೆಗಳು (Six Area) ಅಪಾಯದಲ್ಲಿವೆ ಅಂತ ಮಡಿಕೇರಿ ನಗರಸಭೆಯೇ ಗುರುತು ಮಾಡಿ ಆಯಾ ಪ್ರದೇಶಗಳ ಜನರಿಗೆ ಮಾಹಿತಿ ನೀಡಿದೆ. ಮಡಿಕೇರಿ ಒಂದು ಕಾಲದಲ್ಲಿ ಧರೆಗಿಳಿದ ಸ್ವರ್ಗ. ಈಗಲೂ ಸ್ವರ್ಗವೇ. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲ ಬಂದಿತು ಅಂದ್ರೆ ಸಾಕು ಇಲ್ಲಿಯ ಜನರ ಬದುಕು ನರಕವಾಗುತ್ತಿದೆ. ಅದಕ್ಕೆ ಕಾರಣ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ.

ಕಳೆದ ಮೂರು ವರ್ಷಗಳ ಅನುಭವವೇ ಆ ರೀತಿ ಇದೆ. ವಿಶೇಷವಾಗಿ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರ ಬಹಳ ಅಪಾಯಕಾರಿಯಾಗಿವೆ. ಇವು ಹೇಳಿ ಕೇಳಿ ರಾಜಾಸೀಟಿನ ಪಕ್ಕದ ಕಡಿದಾದ ಬೆಟ್ಟದ ಮೇಲಿವೆ.

ಆರು ಪ್ರದೇಶಗಳಲ್ಲಿ ಭೂಕುಸಿತವಾಗುವ ಸಾಧ್ಯತೆ

2018 ರ ಮಹಾಪ್ರಳಯದಲ್ಲೇ ಇಲ್ಲಿ 100 ಕ್ಕೂ ಅಧಿಕ ಮನೆಗಳು ಧರೆಗುರುಳಿದ್ದವು. ಇಂದಿಗೂ ಇಲ್ಲಿ ಕುಸಿದ ಮನೆಗಳ‌ ಪಳೆಯುಳಿಕೆಗಳು ಆ ದಿನಗಳ ಕರಾಳತೆಯನ್ನು ನೆನಪಿಸುತ್ತವೆ. ಈ ವರ್ಷವೂ ಮಳೆ ಅತಿಯಾದರೆ ಚಾಮುಂಡೇಶ್ವರಿ ನಗರ, ಇಂದಿರಾ ನಗರ ಮಂಗಳಾದೇವಿ ನಗರ ಸೇರಿದಂತೆ ಆರು ಪ್ರದೇಶಗಳಲ್ಲಿ ಭೂ ಕುಸಿತವಾಗುವ ಅಪಾಯವಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:  ACB Raid: ಭ್ರಷ್ಟರ ಪಾಲಿಗೆ ಬ್ಲ್ಯಾಕ್ ಫ್ರೈಡೇ; ಹಣಬಾಕರ ಮನೆಯಲ್ಲಿ ರಾಶಿ ರಾಶಿ ಚಿನ್ನ-ಹಣದ ಹೊಳೆ ನೋಡಿ ACBಯೇ ಶಾಕ್​!

ಹಾಗಾಗಿ ಮಡಿಕೇರಿ‌ ನಗರಸಭೆ ಮಳೆ ತೀವ್ರಗೊಳ್ಳುವ ಮೊದಲೇ ಗುಡ್ಡಗಾಡು ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್ ನೀಡಲು ತೀರ್ಮಾನಿಸಿದೆ ಎಂದು ನಗರಸಭೆ ಆಯುಕ್ತ ರಾಮದಾಸ್ ಹೇಳಿದ್ದಾರೆ.

ಇಲ್ಲಿನ ಜನರು ಹೇಳೋದೇನು?

ನಗರಸಭೆಯೇನೋ ನೋಟಿಸ್ ನೀಡಿ ಕೈತೊಳೆದುಕೊಳ್ಳಬಹುದು. ಆದರೆ ಗುಡ್ಡಗಾಡು ನಿವಾಸಿಗಳ ಸಂಕಷ್ಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನೀಡಲಾಗಿದೆ. ಆದರೆ ಅಪಾಯಾಕಾರಿ ಪ್ರದೇಶದಲ್ಲಿ ನಾವುಗಳಿದ್ರು ನಿಮ್ಮ ಮನೆ ಯಾವುದೇ ಹಾನಿಗೀಡಾಗಿಲ್ಲ ಎಂದು ನಮಗೆ ಮಾತ್ರ ಮನೆ ಕೊಟ್ಟಿಲ್ಲ.

ಹೀಗಾಗಿ  ಪ್ರತಿ ವರ್ಷ ಮಳೆಗಾಲದಲ್ಲಿ ಅತಂತ್ರರಾಗಿ ಮನೆ ಬಿಟ್ಟು ಓಡುವುದು, ಅಬ್ಬೆಪಾರಿಗಳಂತೆ ಕಂಡಲ್ಲಿ‌ ಬದುಕುವುದು, ಮಳೆ ಕಡಿಮೆ ಆದಮೇಲೆ ಮತ್ತೆ ಮನೆಗೆ ಮರಳುವುದು ನಮ್ಮ ದುಸ್ಥಿತಿಯಾಗಿದೆ ಎನ್ನುವುದು ಚಾಮುಂಡೇಶ್ವರಿ ನಗರದ ನಿವಾಸಿ ಜುಲೇಕಾಬಿ ಅವರ ಅಳಲು.

ಇಲ್ಲಿಯ ಜನರ ಸ್ಥಿತಿ ಮಾತ್ರ ಶೋಚನೀಯ

ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಇಲ್ಲದೆ ಈ ಜನರು ಇನ್ನಿಲ್ಲದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಭೂ ಕುಸಿತ ಪ್ರವಾಹದಿಂದ ತಮಗೆ ಮುಕ್ತಿ ಇಲ್ಲವೇ ಎಂದು ಬೇಸರದಿಂದ ಪ್ರಶ್ನಿಸುತ್ತಾರೆ.

ಒಟ್ಟಿನಲ್ಲಿ ವರ್ಷದ ಆರೇಳು ತಿಂಗಳು ನೆಮ್ಮದಿಯಿಂದ ಕಾಲ ಕಳೆಯುವ ಜನರು ಜೂನ್ ಆರಂಭವಾಗುತ್ತಲೇ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಎದುರಾಗುತ್ತದೆ. ಇನ್ನೂ ಮಳೆಗಾಲ ಮುಗಿಯುವವರೆಗೂ ಇಲ್ಲಿನ ಜನರ ಪರಿಸ್ಥಿತಿ ಮಾತ್ರ ಶೋಚನೀಯ.

ಇದನ್ನೂ ಓದಿ:  Kuja Dosha: ಪ್ರೀತಿಸಿದವನ ಜೊತೆ ಮದುವೆಗೆ ಕುಜದೋಷವೇ ಅಡ್ಡಿಯಾಯ್ತು! ನೊಂದ ಲೇಡಿ ಕಾನ್ಸ್‌ಟೇಬಲ್ ಸಾವಿಗೆ ಶರಣು

ಬೆಂಗಳೂರಿನಲ್ಲಿ ಭಾರೀ ಮಳೆ

ಶುಕ್ರವಾರ ರಾತ್ರಿ ಬೆಂಗಳೂರಿನ (Bengaluru Rains) ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ವಸತಿ ಪ್ರದೇಶಗಳಿಗೆ (Residential Area)  ನೀರು ನುಗ್ಗಿರುವ ವರದಿಗಳು ಬಂದಿವೆ. ರಾತ್ರಿ ಏಳು ಗಂಟೆಯಿಂದ ಆರಂಭವಾದ ಮಳೆ, 1 ಗಂಟೆವರೆಗೆ ಸುರಿದಿದೆ. ಬೆಳಗಿನ ಜಾವವೂ ಸಹ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

ತಡರಾತ್ರಿ ಸುರಿದ ಮಳೆಗೆ 24 ವರ್ಷದ ಯುವಕನೋರ್ವ ರಾಜಕಾಲುವೆಯ (Rajakaluve) ಪಾಲು ಆಗಿದ್ದಾನೆ. ಶಿವಮೊಗ್ಗ (Shivamogga) ಮೂಲದ ಮಿಥುನ್ ನೀರು ಪಾಲಾದ ಯುವಕ. ಕೆ ಆರ್ ಪುರದ ಗಾಯತ್ರಿ ಬಡಾವಣೆಯಲ್ಲಿ (Gayatri Badavane, KR Pura) ಈ ಘಟನೆ ನಡೆದಿದೆ. ಗಾಯತ್ರಿ ಬಡವಾಣೆಯಲ್ಲಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು.

ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ನೀರಿನ ಜೊತೆ ಕೊಚ್ಚಿಹೋಗಿದ್ದಾರೆ.
Published by:Mahmadrafik K
First published: