National Highway: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣ ಬಂದ್

ಶನಿವಾರ ತಡರಾತ್ರಿ ಅಧಿಕಾರಿಗಳ ಸಲಹೆ ಮೇರೆಗೆ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳು & ಹೆದ್ದಾರಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಡಿಕೇರಿ (Madikeri) ನಗರದ ಡಿಸಿ ಕಛೇರಿ (DC Office) ಬಳಿ ತಡೆಗೋಡೆ ಕುಸಿಯುವ ಆತಂಕ ಎದುರಾದ ಹಿನ್ನೆಲೆ ಮಡಿಕೇರಿ-ಮಂಗಳೂರು (Madikeri To Mangaluru) ರಾಷ್ಟ್ರೀಯ ಹೆದ್ದಾರಿ 275ನ್ನು (National Highway 275) ನಿನ್ನೆ ರಾತ್ರಿಯಿಂದಲೇ ಸಂಪೂರ್ಣ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮಡಿಕೇರಿ ಟೋಲ್ ಗೇಟ್ (Madikeri Toll Gate) ಬಳಿಯೇ ಹೆದ್ದಾರಿ ಬಂದ್ (Highway Bandh) ಮಾಡಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಪರಿಣಾಮ ಮಡಿಕೇರಿ ಮತ್ತು ಮಂಗಳೂರು ನಡುವಿನ ಸಂಚಾರ ಸಂಪೂರ್ಣ ಕಡಿತಗೊಂಡಿದೆ. ವಾಹನ ಸವಾರರು ಮಡಿಕೇರಿಯ ಮೇಕೇರಿ ರಸ್ತೆಯ (Mekeri Road) ಮೂಲಕ ತೆರಳಲು ಪೊಲೀಸರು ವ್ಯವಸ್ಥೆ ಕಲ್ಪಿಸಲಾಗಿದೆ. ಮೇಕೇರಿ ರಸ್ತೆ ಕಿರಿದಾಗಿದ್ದು, ಬೃಹತ್ ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ.

ವರ್ಷದ ಹಿಂದೆ ಮಡಿಕೇರಿ ಡಿಸಿ ಕಚೇರಿ ಬಳಿ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ತಡೆಗೋಡೆಗೆ ಹಾಕಿದ್ದ ಸ್ಲ್ಯಾಬ್‌ಗಳು ಉಬ್ಬಿ ಬೀಳುವ ಆತಂಕ ಎದುರಾಗಿತ್ತು.

ಈ ಹಿನ್ನಲೆ ಶನಿವಾರ ತಡೆಗೋಡೆಗೆ ರಂಧ್ರ ಕೊರೆಸಿ ಬೋಲ್ಟ್ ಫಿಕ್ಸ್ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಆದ್ರೆ ರಂಧ್ರ  ಕೊರೆದ ಬಳಿಕ ತಡೆಗೋಡೆ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ.

ಇದನ್ನೂ ಓದಿ:  Kodagu: ಪದೇ ಪದೇ ಭೂಕಂಪ ಹಿನ್ನೆಲೆ ಕೊಡಗಿಗೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ

ಸ್ಥಳದಲ್ಲಿ ಪೊಲೀಸರು, ಅಧಿಕಾರಿಗಳು ಮೊಕ್ಕಾಂ

ಶನಿವಾರ ತಡರಾತ್ರಿ ಅಧಿಕಾರಿಗಳ ಸಲಹೆ ಮೇರೆಗೆ ಹೆದ್ದಾರಿಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸ್ಥಳದಲ್ಲೇ ಪೊಲೀಸ್ ಅಧಿಕಾರಿಗಳು & ಹೆದ್ದಾರಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಮಳೆಯ ಅವಾಂತರಗಳು ಭೀಕರ

ಕೊಡಗು ಜಿಲ್ಲೆಯಲ್ಲಿ ಮಳೆ (Kodagu Rains) ಪ್ರಮಾಣ ಒಂದಷ್ಟು ಕಡಿಮೆಯಾಗಿದ್ದರೂ ಅದರಿಂದ ಆಗುತ್ತಿರುವ ಅನಾಹುತಗಳು (Rain Effects) ಮಾತ್ರ ಭೀಕರ ಎನಿಸುವಂತಿವೆ. ಮಡಿಕೇರಿ (Madikeri) ತಾಲ್ಲೂಕಿನ ಕಾಟಿಕೇರಿಯಲ್ಲಿ ಅರ್ಧ ಎಕರೆಯಷ್ಟು ಪ್ರದೇಶದ ಭೂಮಿ ಅದೇ ಜಾಗದಲ್ಲಿ ಆಳಕ್ಕೆ ಕುಸಿದಿರುವುದು (LandSlide) ಆತಂಕಕ್ಕೆ ಕಾರಣವಾಗಿದೆ.

ಕಾಟಿಕೇರಿಯ ನಿವಾಸಿ ಬೋಪಯ್ಯ ಎಂಬವರ ಮನೆ ಮುಂಭಾಗದಲ್ಲಿಯೇ ಇದ್ದ ಕಾಫಿ ತೋಟದಲ್ಲಿ (Coffee Plant) ಭೂಮಿ ಆಳಕ್ಕೆ ಕುಸಿದಿದೆ. ಅರ್ಧ ಎಕರೆಯಷ್ಟು ಭೂಮಿ ಕುಸಿದಿರುವುದರಿಂದ ಆ ಪ್ರದೇಶದಲ್ಲಿದ್ದ ಕಾಫಿ, ಬಾಳೆ ಮತ್ತು ಅಡಿಕೆ ಬೆಳೆಗಳು ಕೂಡ ಹತ್ತು ಅಡಿ ಆಳಕ್ಕೆ ಇರುವ ಸ್ಥಳದಲ್ಲಿಯೇ ಕುಸಿದು ಹೋಗಿವೆ.

ಬೋಟ್ ಬಳಕೆಗೆ ಜಿಲ್ಲಾಡಳಿತದಿಂದ ವ್ಯವಸ್ಥೆ

ಮತ್ತೊಂದೆಡೆ ಮಳೆ ಜಾಸ್ತಿ ಆದಂತೆಲ್ಲಾ ಕಾವೇರಿ ನದಿ ನೀರಿನ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು ಹಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭಾಗಮಂಡಲದಲ್ಲಿ ಭಾರಿ ಪ್ರಮಾಣದಲ್ಲಿ ಕಾವೇರಿ ನದಿ ನೀರು ಹರಿಯುತ್ತಿದ್ದು ನಾಪೋಕ್ಲು ರಸ್ತೆಯಲ್ಲಿ ಸಂಪರ್ಕ ಕಡಿತವಾಗಿದೆ. ಹೀಗಾಗಿ ಜಿಲ್ಲಾಡಳಿತ ಬೋಟಿಂಗ್ ವ್ಯವಸ್ಥೆ ಮಾಡಿದ್ದು, ಜನರು ಬೋಟ್ ಬಳಸಿ ರಸ್ತೆ ದಾಟುತ್ತಿದ್ದಾರೆ.

ರಸ್ತೆ ಮೇಲೆ 5 ಅಡಿಯಷ್ಟು ನೀರು

ಇನ್ನು ಮಡಿಕೇರಿ ತಾಲ್ಲೂಕಿನ ಚೆರಿಯಪರಂಬು ಗ್ರಾಮ ಬಹುತೇಕ ಜಲಾವೃತವಾಗಿದ್ದು, ಕಲ್ಲುಮೊಟ್ಟೆ ರಸ್ತೆ ಮೇಲೆ ಐದು ಅಡಿಯಷ್ಟು ಎತ್ತರದ ಪ್ರವಾಹದ ನೀರು ಹರಿಯುತ್ತಿದೆ. ಇದರಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಪ್ರಮಾಣದಲ್ಲಿ ಹರಿಯುತ್ತಿರುವ ಪ್ರವಾಹದ ನೀರಿನಲ್ಲಿ ಓಡಾಡುವುದಕ್ಕೂ ಸಾಧ್ಯವಾಗದೆ ಜನರು ತೆಪ್ಪ ಬಳಸಿ ಹಗ್ಗ ಕಟ್ಟಿ ಅದರ ಸಹಾಯದಿಂದ ಓಡಾಡುತ್ತಿದ್ದಾರೆ.

ಇದನ್ನೂ ಓದಿ:  Kodagu: ಭೂಕುಸಿತವಾಗುವ ಎತ್ತರದ ಪ್ರದೇಶಗಳಲ್ಲಿ ಭೂಪರಿವರ್ತನೆಗೆ ಅವಕಾಶ ಇಲ್ಲ; ಆರ್ ಅಶೋಕ್

ಕಾಫಿ ಬೆಳೆಗೆ ಕೊಳೆ ರೋಗ ತಗಲುವ ಆತಂಕದಲ್ಲಿ ರೈತರು

ಬಲಮುರಿ ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಜನರು ಆತಂಕಕ್ಕೆ ಈಡಾಗೀದ್ದಾರೆ. ಹೊಲ, ಗದ್ದೆಗಳಿಗೆ ನೀರು ನುಗ್ಗಿರುವುದರಿಂದ ರೈತರು ಬೆಳೆದಿದ್ದ ಭತ್ತದ ಬೆಳೆ ಸಂಪೂರ್ಣ ಪ್ರವಾಹದ ಪಾಲಾಗಿದೆ. ಪ್ರವಾಹದ ನೀರು ಕಾಫಿ ತೋಟಗಳಲ್ಲಿ ಹೀಗೆ ನಿಂತಿರುವುದರಿಂದ ಕಾಫಿ ಬೆಳೆಗೆ ಕೊಳೆ ರೋಗ ಬಂದು ಎಲ್ಲವೂ ಹಾಳಾಗುವ ಆತಂಕ ಎದುರಾಗಿದೆ.
Published by:Mahmadrafik K
First published: