Road Dispute: ರಸ್ತೆಗಾಗಿ ಜಗಳ, ದಯಾಮರಣಕ್ಕೆ ಅವಕಾಶ ಕೊಡಿ ಎಂದು ಕಾರ್ಮಿಕನ ಮನವಿ 

ಮಡಿಕೇರಿ

ಮಡಿಕೇರಿ

ಬಾಕಿ ವೇತನ ನೀಡುವ ಬದಲು ಕ್ವಾಟ್ರಸ್ ಸುತ್ತ ಕಂದಕ ತೋಡಿದ ತೋಟದ ಮಾಲೀಕ

  • Share this:

ಕೊಡಗು(ಮಾ.12): ಹಲವು ವರ್ಷಗಳಿಂದ ತಾನು ದುಡಿದ ಕೂಲಿ ಮತ್ತು ಬೋನಸ್ ಕೊಡಿ ಎಂದು ಕೇಳಿದ ಕೂಲಿ ಕಾರ್ಮಿಕನ ಮನೆಯ ಸಂಪರ್ಕ ದಾರಿಯನ್ನೇ ಕಡಿತ ಮಾಡಿದ ತೋಟದ ಮಾಲೀಕನಿಂದ ಬೇಸತ್ತ ಆ ಕಾರ್ಮಿಕ ಮತ್ತು ಕುಟುಂಬದವರು ತಮಗೆ ದಯಾಮರಣ (Mercy Killing) ಕಲ್ಪಿಸಿ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಹೌದು ಕೊಡಗು (kodagu) ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪಾಲಿಬೆಟ್ಟದ ದುಬಾರಿ ಗ್ರೂಪ್‌ಗೆ ಸೇರಿದ ಮಸ್ಕಲ್ ಕಾಫಿ ತೋಟದಲ್ಲಿ (Coffee Plantation) ಕಾರ್ಮಿಕ ಸುಬ್ರಮಣಿ ಎಸ್ ಎಂಬವರು ಕಳೆದ 25 ವರ್ಷದಿಂದ ಚಾಲಕನಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಅವರ ಮಗಳು ಕೂಡ ಇದೇ ತೋಟದಲ್ಲಿ 2012 ರಿಂದ ದುಡಿಯುತ್ತಿದ್ದರು.


ಆದರೆ 2016 ರಲ್ಲಿ ಯಾವುದೇ ನೋಟೀಸ್ ಕೂಡ ನೀಡದೇ ತೋಟದ ಮಾಲೀಕ ಕಾರ್ಮಿಕರಾದ ಸುಬ್ರಹ್ಮಣಿ ಮತ್ತು ಆತನ ಮಗಳು ಪವಿತಾ ಇಬ್ಬರನ್ನು ಸೇವೆಯಿಂದ ತೆಗೆದು ಹಾಕಿದ್ದಾರೆ ಎನ್ನೋದು ಕಾರ್ಮಿಕ ಸುಬ್ರಮಣಿ ಮತ್ತು ಅವರ ಮಗಳು ಪವಿತಾ ಅವರ ಆರೋಪ. ನಾಲ್ಕು ವರ್ಷದ ಇಬ್ಬರ ಸಂಬಳ ಮತ್ತು ಬೋನಸ್ ಸೇರಿದಂತೆ ಮಾಲೀಕ ಒಟ್ಟು 19 ಲಕ್ಷ ರೂಪಾಯಿ ಹಣ ನೀಡಬೇಕಾಗಿದೆ. ಇದನ್ನು ಕೊಡುವಂತೆ ಕೇಳಿದ್ದಕ್ಕೆ ನಮ್ಮಿಬ್ಬರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಲಾಗಿದೆ ಎನ್ನೋದು ಸುಬ್ರಹ್ಮಣಿ ಅವರ ಗಂಭೀರ ಆರೋಪ.


ಈ ಬಗ್ಗೆ ಚಾಲಕ ಸುಬ್ರಮಣಿ ಜಿಲ್ಲಾ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯದ ತೀರ್ಪು ಬರುವವರೆಗೂ ಕಾಫಿ ತೋಟದಲ್ಲಿ ಕಾರ್ಮಿಕರಿಗಾಗಿ ನೀಡಿದ್ದ ಮನೆಯಲ್ಲೇ ಅವರು ವಾಸವಿದ್ರು. ಹೇಗಾದರೂ ಮಾಡಿ ಚಾಲಕ ಸುಬ್ರಹ್ಮಣಿ ಮತ್ತು ಆತನ ಕುಟುಂಬವನ್ನು ಅಲ್ಲಿಂದ ಹೊರಗೆ ಕಳುಹಿಸಬೇಕೆಂದು ಕಾರ್ಮಿಕ ಕುಟುಂಬವು ವಾಸವಿದ್ದ ಮನೆಯಿಂದ ಸುತ್ತ ಎರಡು ಹಿಟಾಚಿಗಳನ್ನು ಬಳಸಿ 25 ಅಡಿ ಅಗಲ ಮತ್ತು 15 ಅಡಿ ಆಳದ ದೊಡ್ಡ ಕಂದವನ್ನು ತೆಗೆಸಲಾಗಿದೆ.


ಪತ್ನಿಗೆ ತೀವ್ರ ಅನಾರೋಗ್ಯ


ಇದರಿಂದ ಕಾರ್ಮಿಕ ಸುಬ್ರಹ್ಮಣಿ ಮತ್ತು ಆತನ ಕುಟುಂಬ ಮನೆಯಿಂದ ಹೊರಗೆ ಬಂದು ಹೋಗಲು ಏಣಿಯ ಮೊರೆ ಹೋಗಬೇಕಾಗಿದೆ. ಸುಬ್ರಮಣಿ ಮತ್ತು ಆತನ ಮಗಳು ಪವಿತಾ ಏಣಿಯ ಸಹಾಯದಿಂದಲೇ ಓಡಾಡುತ್ತಿದ್ದಾರೆ. ಆದರೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಸುಬ್ರಹ್ಮಣಿ ಅವರ ಪತ್ನಿ ಸಂಪೂರ್ಣ ಮನೆಯಲ್ಲಿಯೇ ಲಾಕ್ ಆಗಿದ್ದಾರೆ. ಮನೆಗೆ ಏನೆ ವಸ್ತುಗಳನ್ನು ಕೊಂಡೊಯ್ಯಬೇಕಾದರೂ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ.


ಇದನ್ನೂ ಓದಿ: Mandya: ಆಸ್ತಿಗಾಗಿ ಮಾನವೀಯತೆ ಮರೆತರು: ಮನೆಯ ಹಿರಿಯ ಮಗನಿಗೆ ಹೀಗೆ ಮಾಡೋದಾ?


ಈ ಬಗ್ಗೆ ಸುಬ್ರಮಣಿ ಅವರು ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ದೂರು ನೀಡಿದ್ದರು ಯಾರೂ ಅವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎನ್ನೋದು ಇವರ ಅಳಲು. ಜೊತೆಗೆ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರಿಗೂ ಸುಬ್ರಹ್ಮಣಿ ದೂರು ನೀಡಿದ್ದರು.


ನ್ಯಾಯ ಕೊಡಿಸಿ, ಇಲ್ಲವಾದರೆ ದಯಾಮರಣವಾದರೂ ಅನುಮತಿಸಿ


ಅವರ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಅವರು ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇವರು ಯಾರಿಂದಲೂ ನನಗೆ ನ್ಯಾಯ ದೊರೆತ್ತಿಲ್ಲ. ದಯಮಾಡಿ ನೀವಾದರೂ ನಮಗೆ ನ್ಯಾಯ ಕೊಡಿಸಿ.


ಇದನ್ನೂ ಓದಿ: Karwar: ವಧು ಎಡಗೈಯಲ್ಲಿ ಊಟ ಮಾಡ್ತಾಳೆ, ಗಂಟೆಗಳ ಹಿಂದೆ ತಾಳಿ ಕಟ್ಟಿದ ಪತ್ನಿಯನ್ನ ಬಿಟ್ಟು ಹೊರಟ ವರ

top videos


    ನಮ್ಮ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದೇ ನಿಮಗೆ ಪತ್ರ ಬರೆದಿದ್ದೇವೆ. ಇಲ್ಲವೇ ನಮಗೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಸುಬ್ರಮಣಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಮಾಡಿದ್ದಾರೆ.

    First published: