• Home
  • »
  • News
  • »
  • state
  • »
  • Audio Leak: ಕೊಡಗಿನ ಮೇಲೆ ಪೆಟ್ರೋಲ್ ಬಾಂಬ್​ಗೆ ನಡೆದಿತ್ತಾ ಸಂಚು? ಬೆಚ್ಚಿ ಬೀಳಿಸುವ ಸ್ಫೋಟಕ ಆಡಿಯೋ ಲೀಕ್

Audio Leak: ಕೊಡಗಿನ ಮೇಲೆ ಪೆಟ್ರೋಲ್ ಬಾಂಬ್​ಗೆ ನಡೆದಿತ್ತಾ ಸಂಚು? ಬೆಚ್ಚಿ ಬೀಳಿಸುವ ಸ್ಫೋಟಕ ಆಡಿಯೋ ಲೀಕ್

ಸಾಂದರ್ಭಿಕ  ಚಿತ್ರ

ಸಾಂದರ್ಭಿಕ ಚಿತ್ರ

50ಕ್ಕೂ ಹೆಚ್ಚು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಮಲೆಯಾಳಂ ಭಾಷೆಯಲ್ಲಿ ಮಾತನಾಡಿರುವ ಆಡಿಯೋ ಲೀಕ್ ಆಗಿದೆ.

  • Share this:

ಕೊಡಗಿನಲ್ಲಿ (Kodagu) ಹಿಂದಿನಿಂದಲೂ ಒಬ್ಬರಲ್ಲಾ ಒಬ್ಬ ಉಗ್ರರು (Terrorist) ಬಂದು ನೆಲೆ ಕಂಡುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಬ್ದುಲ್ ಮದನಿ (Abdul Madani) ಕೂಡ ಕೊಡಗಿನ ಹೊಸತೋಟಕ್ಕೆ ಬಂದು ತಂಗಿದ್ದು ಹೊಸ ವಿಚಾರವೇನು ಅಲ್ಲ. ಆದರೆ ಈಗ ಮಡಿಕೇರಿ ನಗರಕ್ಕೆ (Madikeri City) ಪೆಟ್ರೋಲ್ ಬಾಂಬ್ (Petrol Bomb) ಹಾಕಬೇಕು ಎಂದು ಮಾತನಾಡಿರುವ ಆಡಿಯೋ ಮಡಿಕೇರಿ ನಗರದ ಜನತೆಯನ್ನು ಆತಂಕಕ್ಕೆ ದೂಡಿದೆ. ದೇಶದಲ್ಲಿ ಅಪಾಯಕಾರಿ ಬೆಳವಣಿಗೆಗಳು, ದೇಶ ದ್ರೋಹಿ ಚಟುವಟಿಕೆಗಳು ನಡೆಯಲು ಸಂಚು ರೂಪಿಸಲಾಗುತ್ತಿದೆ ಎಂದು ಪಿಎಫ್‍ಐ ಸಂಘಟನೆಯನ್ನು (PFI Organization Ban) ಇತ್ತೀಚೆಗಷ್ಟೇ ನಿಷೇಧ ಮಾಡಲಾಗಿದೆ.


ಕಳೆದ ಆರು ತಿಂಗಳ ಹಿಂದೆ ಅಂದರೆ ಏಪ್ರಿಲ್ 25 ರಂದು ಮಡಿಕೇರಿ ನಗರ ಸಭೆ ಸದಸ್ಯ ಜೆಡಿಎಸ್‍ನ ಮುಸ್ತಫಾ ಎಂಬುವರು ಆತನ ಸ್ನೇಹಿತ ಬೆಟ್ಟಗೇರಿಯ ಅಬ್ದುಲ್ಲಾ ಎಂಬುವರೊಂದಿಗೆ ಮಡಿಕೇರಿ ನಗರಕ್ಕೆ ಬಾಂಬ್ ಹಾಕಬೇಕು. ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು. ನಮ್ಮವರು ಒಂದಷ್ಟು ಜನರು ಸತ್ತರೂ ಪರವಾಗಿಲ್ಲ ಎಂದು ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು, ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.


ಮಲಯಾಳಂ ಭಾಷೆಯಲ್ಲಿರುವ ಆಡಿಯೋ


50ಕ್ಕೂ ಹೆಚ್ಚು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಮಲೆಯಾಳಂ ಭಾಷೆಯಲ್ಲಿ ಮಾತನಾಡಿರುವ ಆಡಿಯೋ ಲೀಕ್ ಆಗಿದೆ.


madikeri leaders audio leak two arrested mrq
ಮಡಿಕೇರಿ ಪೊಲೀಸ್ ಠಾಣೆ


ಕಾಲ್ ರೆಕಾರ್ಡ್​ ಆಗಿದ್ದು ಹೇಗೆ?


ಮಡಿಕೇರಿ ನಗರದ ನಿವಾಸಿ ಶೇಷಪ್ಪ ರೈ ಎನ್ನುವರು ಮುಸ್ತಫಾ ಅವರಿಗೆ ಯಾವುದೋ ವ್ಯವಹಾರದ ವಿಷಯ ಮಾತನಾಡುವುದಕ್ಕೆ ಕರೆ ಮಾಡಿದ್ದಾರೆ. ಈ ವೇಳೆ ಮುಸ್ತಫಾ ಶೇಷಪ್ಪ ಅವರ ಫೋನ್ ಅನ್ನು ತುಂಡರಿಸುವ (ಕಟ್) ಬದಲು, ಮಿಸ್ ಆಗಿ ರಿಸೀವ್ ಮಾಡಿ ಫೋನ್ ಅನ್ನು ತನ್ನ ಜೇಬಿಗೆ ಇರಿಸಿಕೊಂಡಿದ್ದಾರೆ. ಬಳಿಕ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಹಾಕುವ ವಿಷಯವನ್ನು ತನ್ನ ಸ್ನೇಹಿತ ಅಬ್ದುಲ್ಲಾ ಎಂಬುವವನೊಂದಿಗೆ ನೇರವಾಗಿ ಮಾತನಾಡಿದ್ದಾರೆ.


ಇದನ್ನೂ ಓದಿ: Hassan Deadly Accident: ಟೆಂಪೋ, ಲಾರಿ, ಬಸ್ ನಡುವೆ  ಭೀಕರ ಸರಣಿ ಅಪಘಾತ, 9 ಮಂದಿ ಸಾವು; 12 ಜನಕ್ಕೆ ಗಂಭೀರ ಗಾಯ


ಈ ಎಲ್ಲಾ ವಿಷಯ ಮುಸ್ತಫಾಗೆ ಕರೆ ಮಾಡಿದ್ದ ಶೇಷಪ್ಪ ರೈ ಅವರ ಫೋನ್ ನಲ್ಲಿ ಕಾಲ್ ರೆಕಾರ್ಡ್ ಆಗಿದೆ. ಇತ್ತೀಚೆಗೆ ಕಾಲ್ ರೆಕಾರ್ಡ್‍ಗಳನ್ನು ಪರಿಶೀಲನೆ ನಡೆಸುವಾಗ ಇದು ಬೆಳಕಿಗೆ ಬಂದಿದ್ದು ಶೇಷಪ್ಪ ರೈ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


madikeri leaders audio leak two arrested mrq
ಮಡಿಕೇರಿ ಪೊಲೀಸ್ ಠಾಣೆ


ಆಡಿಯೋದಲ್ಲಿ ಸಿದ್ದರಾಮಯ್ಯ, ಡಿಕೆಶಿ ಹೆಸರು ಪ್ರಸ್ತಾಪ


ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕೆ.ಜಿ. ಬೋಪಯ್ಯ ಪಿಎಫ್‍ಐ ಸಂಘಟನೆ ಬ್ಯಾನ್ ಆಗುವ ಮೊದಲು ಇಂತಹ ಒಂದು ಪ್ಲಾನ್ ಆಗಿರುವುದು ಬಹಳ ಆತಂಕಕಾರಿ ವಿಷಯ. ಅವರಿಬ್ಬರು ಮಾತನಾಡುವಾಗ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಇಬ್ಬರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಬಿಜೆಪಿ ಸರ್ಕಾರ ಬಂದ ಮೇಲೆ ಇದೆಲ್ಲಾ ನಡೆಯುತ್ತಿದೆ ಎನ್ನುವಂತೆ ಕೆಟ್ಟ ಹೆಸರು ಬರುವಂತೆ ಮಾಡಬೇಕು ಎಂದೆಲ್ಲಾ ಮಾತನಾಡಿದ್ದಾರೆ.


madikeri leaders audio leak two arrested mrq
ಮಡಿಕೇರಿ ಪೊಲೀಸ್ ಠಾಣೆ


ಇದನ್ನೂ ಓದಿ:  Murugha Swamy Case: 'ಮುರುಘಾ' ನಗ್ನ ಸತ್ಯ, ಸ್ವಾಮಿಜಿಯ ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ; ಮಠದಲ್ಲಿದ್ದ ಕಂದಮ್ಮನ ತಂದೆ ಇವರೇನಾ?


ಇಬ್ಬರ ಬಂಧನ, ತೀವ್ರ ವಿಚಾರಣೆ


ಈ ಕುರಿತು ತನಿಖೆ ಆಗಬೇಕು ಎಂದು ವಿರಾಜಪೇಟೆಯ ಬಿಜೆಪಿ ಶಾಸಕ ಕೆಜಿ ಬೋಪಯ್ಯ ಒತ್ತಾಯಿಸಿದ್ದಾರೆ. ಸದ್ಯ ಶೇಷಪ್ಪ ರೈ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರದ ಪೊಲೀಸರು ಮಡಿಕೇರಿ ನಗರಸಭೆ ಸದಸ್ಯ ಮುಸ್ತಫಾ, ಬೆಟ್ಟಗೇರಿಯ ಅಬ್ದುಲ್ಲಾ ಇಬ್ಬರನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡುತ್ತಿದ್ದಾರೆ.

Published by:Mahmadrafik K
First published: