Madikeri Dasara: ಈ ಬಾರಿ ಅದ್ದೂರಿ ಮಡಿಕೇರಿ ದಸರಾ ನಡೆಯುವುದು ಅನುಮಾನ

ಮೈಸೂರಿನಲ್ಲಿ ಹಗಲು ವೇಳೆ ದಸರಾ ನಡೆದರೆ, ಅದನ್ನು ಕಣ್ತುಂಬಿಕೊಳ್ಳುತ್ತಿದ್ದ ಲಕ್ಷಾಂತರ ಜನರು, ಮಡಿಕೇರಿಯಲ್ಲಿ ಬೆಳಕಿನ ಚಿತ್ತಾರದಲ್ಲಿ ನಡೆಯುವ ದಸರಾ ಜನೋತ್ಸವಕ್ಕೆ ಬರುತ್ತಿದ್ದರು

ಮಡಿಕೇರಿ ದಸರಾ

ಮಡಿಕೇರಿ ದಸರಾ

  • Share this:
ಮಡಿಕೇರಿ(ಸೆ.08): ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿ ಐದು ತಿಂಗಳು ಕಳೆದಿದ್ದು, ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಆದರೆ ಉತ್ಸವ, ಜಾತ್ರೆ ಮುಂತಾದವುಗಳಿಗೆ ಇನ್ನೂ ಅವಕಾಶ ನೀಡಿಲ್ಲ. ಹೀಗಾಗಿ ಪ್ರತೀ ವರ್ಷ ಬೆಳಕಿನೋಕುಳಿಯಲ್ಲಿ ಮಿಂದೇಳುವ ಮಡಿಕೇರಿ ದಸರಾಗೆ ಕೊರೋನಾದ ಕರಿನೆರಳು ಬೀಳುವ ಸಾಧ್ಯತೆ ಇದೆ. ವಿಶ್ವವಿಖ್ಯಾತ ಮೈಸೂರು ದಸರಾ ವೈಭವನ್ನು ಲಕ್ಷಾಂತರ ನೋಡುಗರು ಹಗಲು ವೇಳೆ ಕಣ್ತುಂಬಿಕೊಂಡರೆ, ರಾತ್ರಿ ಇಡೀ ಬೆಳಕಿನ ಓಕುಳಿಯಲ್ಲಿ ಮಿಂದೇಳುವ ಮಡಿಕೇರಿ ದಸರಾಗೆ ತನ್ನದೆ ಆದ ಇತಿಹಾಸವಿದೆ. ಮೊದಲಿಗೆ ಕರಗ ಆರಂಭವಾಗುವ ಮೂಲಕ ದಸರಾಕ್ಕೆ ಚಾಲನೆ ನೀಡಲಾಗುತ್ತದೆ. ಮಡಿಕೇರಿಯ ಕಂಚಿ ಕಾಮಾಕ್ಷಿ, ಕೋಟೆ ಗಣಪತಿ, ದಂಡಿನ ಮಾರಿಯಮ್ಮ, ಚೌಟಿ ಮಾರಿಯಮ್ಮ ಸೇರಿದಂತೆ ಹತ್ತು ಶಕ್ತಿ ದೇವತೆಗಳು ಒಂಭತ್ತು ದಿನಗಳ ಕಾಲ ನಗರದ ಎಲ್ಲಾ ಬೀದಿಗಳಲ್ಲಿ ಕರಗ ಉತ್ಸವ ನಡೆಸುತ್ತವೆ.

ವಿಜಯ ದಶಮಿಯಂದು ದಶಮಂಟಪಗಳು ಪೌರಾಣಿಕ ಕಥಾಹಂದರಗಳ ಆಧಾರದಲ್ಲಿ ಬೃಹತ್ ಯಾಂತ್ರೀಕೃತ ಪ್ರತಿಮೆಗಳ ಮಂಟಪ ನಿರ್ಮಿಸಿ ಅಂದು ಪೌರಾಣಿಕ ಲೋಕವನ್ನೇ ಧರೆಗಿಳಿಸಿಬಿಡುತ್ತಿದ್ದವು. ಚಿತ್ತಾಕರ್ಷಕ ಬೆಳಕಿನ ಓಕುಳಿಯಲ್ಲಿ ಕಿವಿಗಡಿಚಿಕ್ಕುವ ಡಿಜೆ ಸೌಂಡ್‍ನಲ್ಲಿ ಸುರಾಸುರರ ಕಾಳಗವೇ ನಡೆಯುತಿತ್ತು. ಈ ಬಾರಿ ಕೊರೋನಾ ಮಹಾಮಾರಿಯಿಂದಾಗಿ ಇದ್ಯಾವುದೂ ನಡೆಯೋದು ಡೌಟ್ ಎನ್ನಲಾಗುತ್ತಿದೆ. ಆದರೆ ಪೂಜೆ ನಿಲ್ಲಿಸದೆ, ಪ್ರತೀ ವರ್ಷದಂತೆ ಈ ಬಾರಿಯೂ ಶಕ್ತಿ ದೇವತೆಗಳಿಗೆ ಕರಗ ಉತ್ಸವ ಮಾಡಲಾಗುತ್ತಿದೆ ಎನ್ನುತ್ತಾರೆ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ವಿಘ್ನೇಶ್ ಹೇಳುತ್ತಾರೆ.

Mysuru Dasara 2020: ಮೈಸೂರು ದಸರಾ, ಜಂಬೂ ಸವಾರಿ ಸಂಬಂಧ ಬೆಂಗಳೂರಿನಲ್ಲಿ ಇಂದು ಉನ್ನತ ಮಟ್ಟದ ಸಭೆ

ಮೈಸೂರಿನಲ್ಲಿ ಹಗಲು ವೇಳೆ ದಸರಾ ನಡೆದರೆ, ಅದನ್ನು ಕಣ್ತುಂಬಿಕೊಳ್ಳುತ್ತಿದ್ದ ಲಕ್ಷಾಂತರ ಜನರು, ಮಡಿಕೇರಿಯಲ್ಲಿ ಬೆಳಕಿನ ಚಿತ್ತಾರದಲ್ಲಿ ನಡೆಯುವ ದಸರಾ ಜನೋತ್ಸವಕ್ಕೆ ಬರುತ್ತಿದ್ದರು. ಆದರೆ ಮುಂದಿನ ತಿಂಗಳೇ ದಸರಾ ಮಹೋತ್ಸವ ನಡೆಯಬೇಕಾಗಿರುವುದರಿಂದ ಕೊರೋನಾ ವೈರಸ್ ಇನ್ನೂ ಹರಡುತ್ತಲೇ ಇದೆ.

ಒಂದು ವೇಳೆ ಎಂದಿನಂತೆ ಅದ್ಧೂರಿ ನಡೆಸಿದರೆ ಪ್ರತಿವರ್ಷದಂತೆ ಪ್ರವಾಸಿಗರು ದಸರಾಗೆ ಬರುವುದು ಅನುಮಾನ. ಒಂದು ವೇಳೆ ಬಂದರೂ ಕೊರೋನಾ ರೋಗ ಹರಡುವ ಆತಂಕವಿದೆ. ಹೀಗಾಗಿ ಈ ಬಾರಿ ಅದ್ಧೂರಿ ದಸರಾ ನಡೆಸದೆ ಸಾಂಪ್ರಾದಾಯಿಕ ದಸರಾ ಆಚರಿಸಲು ನಿರ್ಧರಿಸಿದ್ದೇವೆ. ಅಕ್ಟೋಬರ್ ನಂತರ ರೋಗ ಕಡಿಮೆಯಾಗುವ ವಿಶ್ವಾಸವಿದ್ದು, ಆ ಸಂದರ್ಭಕ್ಕೆ ಪ್ರವಾಸಿ ಉತ್ಸವ ಮಾಡಿ, ಕೊಡಗಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತೇವೆ ಎನ್ನುತ್ತಾರೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್.

ಒಟ್ಟಿನಲ್ಲಿ ಬೆಳಕಿನ ಚಿತ್ತಾರದ ದಸರಾ ಜನೋತ್ಸವದಲ್ಲಿ ಮಿಂದೇಳುತ್ತಿದ್ದ ಜನರಿಗೆ ಈ ಬಾರಿ ಆ ಸಂಭ್ರಮ ತಪ್ಪಿಹೋಗುವುದು ಖಚಿತ ಎನಿಸುತ್ತಿದೆ.  ಲಾಕ್ ಡೌನ್ ಸಡಿಲಿಕೆಯಲ್ಲಿ ಅದಕ್ಕೇನಾದರೂ ಅವಕಾಶ ಸಿಕ್ಕಿ, ರಾಜ್ಯ ಸರ್ಕಾರವೂ ಯಾವ ನಿರ್ಧಾರ ಕೈಗೊಳ್ಳುತ್ತೋ ಎನ್ನುವುದನ್ನು ಕಾದು ನೋಡಬೇಕಾಗಿದೆ.
Published by:Latha CG
First published: