• Home
  • »
  • News
  • »
  • state
  • »
  • Madikeri Dasara: ಸುರಾಸುರರ ಯುದ್ಧ ಭೂಮಿಯಾದ ಮಂಜಿನ ನಗರಿ ಮಡಿಕೇರಿ

Madikeri Dasara: ಸುರಾಸುರರ ಯುದ್ಧ ಭೂಮಿಯಾದ ಮಂಜಿನ ನಗರಿ ಮಡಿಕೇರಿ

ಮಡಿಕೇರಿ ದಸರಾ

ಮಡಿಕೇರಿ ದಸರಾ

ಚೌಡೇಶ್ವರಿ ದೇವಾಲಯದಿಂದ ನಿರ್ಮಿಸಿದ್ದ ಶುಂಭ ನಿಶುಂಭರ ವದೆ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿದ ರೀತಿ ನೆರೆದಿದ್ದ ಜನರ ಎದೆ ಝಲ್ ಎನ್ನುವಂತೆ ಮಾಡಿತ್ತು. ಸಂಪ್ರದಾಯದಂತೆ ಮೈಸೂರು ದಸರಾ ಮುಗಿಸಿ ಕೊಡಗಿನತ್ತ ಈ ಬಾರಿಯೂ ಲಕ್ಷ ಲಕ್ಷ ಜನರ ದಂಡೇ ಹರಿದುಬಂದಿತ್ತು.

  • Share this:

ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ (Madikeri Dasara 2022) ದೇವ ಲೋಕವೇ ಧರೆಗಿಳಿದು ಬಂದಿತ್ತು. ದೇವತೆಗಳು ಅಸುರರ ನಡುವೆ ಯುದ್ಧ , ಭೀಕರ ಕಾಳಗವೇ ನಡೆದಿತ್ತು. ಪೌರಾಣಿಕ ಜಗತ್ತೇ ಅಲ್ಲಿ ತೆರೆದುಕೊಂಡಿತ್ತು. ವರ ಶಾಪ, ಪಾಪ ಪುಣ್ಯಗಳ ಅನಾವರಣವೂ ಆಗಿತ್ತು. ಬಣ್ಣ ಬಣ್ಣದ ವಿದ್ಯುತ್ ದೀಪಗಳ (Electric Lightings) ಕೋಲ್ಮಿಂಚಿನ ನಡುವೆ ಮಡಿಕೇರಿಯು ಅಕ್ಷರಶಃ ಸುರಾಸುರರ ನಡುವಿನ ಯುದ್ಧ ಭೂಮಿಯಾಗಿತ್ತು. ಧ್ವನಿ ಮತ್ತು ಬೆಳಕಿನ‌ ಚಿತ್ತಾರ ಬೆಳ್ಳಿ ಮೋಡಗಳನ್ನ ಸೀಳಿ ಸಾಗಿತ್ತು. ಇಂತಹ ಗಂಧರ್ವ ಲೋಕದ ಅವಿಸ್ಮರಣೀಯ ಕ್ಷಣಗಳನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡು ಭಕ್ತಿ ಭಾವದ ಪರಾಕಾಷ್ಠೆ ತಲುಪಿದ್ದರು. ಮಂಜಿನ‌ ನಗರಿ ಮಡಿಕೇರಿಯ ದಸರಾ ಅಂದ್ರೆ ಹೀಗೇನೆ. ಬುಧವಾರ ರಾತ್ರಿ ಮಡಿಕೇರಿಯಲ್ಲಿ ದೇವಲೋಕವೇ ಧರೆಗಿಳಿದಿತ್ತು. ಮಡಿಕೇರಿ ದಸರಾ ಜನೋತ್ಸವದ (Dasara Janotsava) ಕಡೆಯ ದಿನದ ಒಂದು ಝಲಕ್ ಇದು.


ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಕಳೆಗುಂದಿದ್ದ ದಸರಾ ಜನೋತ್ಸವ ಈ ಬಾರಿ ಹಿಂದೆಂದೂ ಕಾಣದ ಅದ್ಧೂರಿತನಕ್ಕೆ ಸಾಕ್ಷಿಯಾಯ್ತು. ಗಾಂಧಿ ಮೈದಾನದ ಬೃಹತ್ ವೇದಿಕೆಯಲ್ಲಿ ಕಣ್ಮನ ಸೂರೆಗೊಳ್ಳುವ ಹಾಡು, ನೃತ್ಯಗಳು ಸಾಂಸ್ಕೃತಿಕ ಲೋಕವನ್ನ ಅನಾವರಣಗೊಳಿಸಿತ್ತು. ಜೊತೆಗೆ ಸ್ಯಾಂಡಲ್‌ವುಡ್ ನಟ, ನಟಿಯರ ಉಪಸ್ಥಿತಿ ವೇದಿಕೆ ಕಾರ್ಯಕ್ರಮದ ಸೊಬಗನ್ನ ಹೆಚ್ಚಿಸಿತ್ತು.


ದೇವತೆಗಳು ಅಸುರರ ನಡುವೆ ಯುದ್ಧ


ಅತ್ತ ವೇದಿಕೆಯಲ್ಲಿ ಸಾಂಸ್ಕೃತಿಕ ಲೋಕ ಅನಾವರಣಗೊಂಡಿದ್ರೆ, ಇತ್ತ ಮಂಜಿನ‌ ನಗರಿ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಇದರ ನಡುವೆ ಬೆಳ್ಳಿಯ ಮೋಡಗಳ ಸೀಳಿ, ಇಡೀ ಗಂಧರ್ವ ಲೋಕ ಧರೆಗಿಳಿದಿತ್ತು. ದೇವತೆಗಳು ಅಸುರರ ನಡುವೆ ಯುದ್ಧ ನಡೆದಿತ್ತು.


Madikeri Dasara Concludes With Grand shobha yatra Procession rsk mrq
ಮಡಿಕೇರಿ ದಸರಾ


ಶೋಭಾಯಾತ್ರೆ


ಮಡಿಕೇರಿಯ ದಶ ಮಂಟಪಗಳ ಶೋಭಾಯಾತ್ರೆ. ನಗರದ ಶ್ರೀ ಪೇಟೆ ಶ್ರೀರಾಮ ಮಂದಿರ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಚೌಡೇಶ್ವರಿ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ಕೋದಂಡರಾಮ, ಶ್ರೀ ಕೋಟೆ ಗಣಪತಿ ಹಾಗೂ ಶ್ರೀ ಕರವಲೆ ಭಗವತಿ ದೇವಾಲಯಗಳು ಒಂದೊಂದು ದೇವಾಲಯಗಳ ಒಂದೊಂದು ಮಂಟಪವೂ ಅಹೋರಾತ್ರಿ ಶೋಭಾಯಾತ್ರೆಯಲ್ಲಿ ಚಲನವಲನಗಳ ಮೂಲಕ ಪೌರಾಣಿಕ ಕಥಾಹಂದರವನ್ನ ಸಾಧರಪಡಿಸಿದ್ದು ಜನರನ್ನ ಮೂಕವಿಸ್ಮತಿರನ್ನಾಗಿಸಿದವು.


Madikeri Dasara Concludes With Grand shobha yatra Procession rsk mrq
ಮಡಿಕೇರಿ ದಸರಾ


ಲಕ್ಷ ಲಕ್ಷ ಜನರು


ಅದರಲ್ಲೂ ಚೌಡೇಶ್ವರಿ ದೇವಾಲಯದಿಂದ ನಿರ್ಮಿಸಿದ್ದ ಶುಂಭ ನಿಶುಂಭರ ವದೆ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿದ ರೀತಿ ನೆರೆದಿದ್ದ ಜನರ ಎದೆ ಝಲ್ ಎನ್ನುವಂತೆ ಮಾಡಿತ್ತು. ಸಂಪ್ರದಾಯದಂತೆ ಮೈಸೂರು ದಸರಾ ಮುಗಿಸಿ ಕೊಡಗಿನತ್ತ ಈ ಬಾರಿಯೂ ಲಕ್ಷ ಲಕ್ಷ ಜನರ ದಂಡೇ ಹರಿದುಬಂದಿತ್ತು.


Madikeri Dasara Concludes With Grand shobha yatra Procession rsk mrq
ಮಡಿಕೇರಿ ದಸರಾ


ಇದನ್ನೂ ಓದಿ:  Rahul Gandhi: ಗಾಯಗೊಂಡ ಆನೆ ಕಂಡು ಮರುಗಿತು ರಾಹುಲ್ ಗಾಂಧಿ ಹೃದಯ; ಸಿಎಂ ಬೊಮ್ಮಾಯಿಗೆ 'ರಾಗಾ' ಪತ್ರ


ಹೀಗಾಗಿ ನಗರದ ರಸ್ತೆಗಳಲ್ಲಿ ವಾಹನಗಳಿರಲಿ ಜನರೇ ನಡೆದಾಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ನಡುವೆ ದಶ ಮಂಟಪಗಳ ಶೋಭಾಯಾತ್ರೆ ಡಿಜೆ ಹಾಡುಗಳೊಂದಿಗೆ ಸಾಗಿತ್ತು. ಯುವ ಸಮೂಹ ಡಿಜೆ ಹಾಡಿಗೆ ಅಹೋರಾತ್ರಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.


ಒಟ್ನಲ್ಲಿ ಅಹೋರಾತ್ರಿ ಅದ್ಧೂರಿಯಾಗಿ ನಡೆದ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಮುಂಜಾನೆ ಬನ್ನಿಮಂಟಪದ ಬಳಿ ಬನ್ನಿ ಕಡಿಯುವ ಮೂಲಕ ವೈಭವ ಮತ್ತು ಅರ್ಥಪೂರ್ಣವಾದ ತೆರೆ ಬಿತ್ತು.


Madikeri Dasara Concludes With Grand shobha yatra Procession rsk mrq
ಮಡಿಕೇರಿ ದಸರಾ


ಮೈಸೂರು ದಸರಾ


ಕೊರೊನಾ ಹಾವಳಿಯಿಂದ ಕಳೆದ 2 ವರ್ಷ ಮೈಸೂರು ದಸರಾ ಅರಮನೆಯ ಆವರಣಕ್ಕಷ್ಟೇ ಸೀಮಿತವಾಗಿತ್ತು. ಈ ಬಾರಿ ಅದ್ಧೂರಿಯಾಗಿ ದಸರಾ ಉತ್ಸವ ನಡೀತು. ನಿನ್ನೆ ಮೈಸೂರಿನಲ್ಲಿ ನಡೆದ ಜಂಬೂ ಸವಾರಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ರು.


ಇದನ್ನೂ ಓದಿ:  Ram Mandir: ಕನ್ನಡಿಗ ಗೋಪಾಲ್ ನಾಗರಕೆಟ್ಟೆ ಉಸ್ತುವಾರಿಯಲ್ಲಿ ರಾಮ ಮಂದಿರ ನಿರ್ಮಾಣ ಕೆಲಸ! 2024ಕ್ಕೆ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ


ಸಂಜೆ 5.37ಕ್ಕೆ ಅರಮನೆ ಆವರಣದಲ್ಲಿ ಚಾಲನೆ ದೊರಕಿದ ಬಳಿಕ ಜಂಬೂಸವಾರಿ ರಾಜಪಥವನ್ನು ಪ್ರವೇಶಿಸಿದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಭಿಮನ್ಯು750 ಕೆ.ಜಿ ತೂಕದ ಅಂಬಾರಿಯಲ್ಲಿ ಹೊತ್ತು ಹೆಜ್ಜೆ ಹಾಕಿತು. ಯಶಸ್ವಿಯಾಗಿ ಜಂಬೂಸವಾರಿ ಸಂಪನ್ನವಾಗಿದೆ.

Published by:Mahmadrafik K
First published: