• Home
  • »
  • News
  • »
  • state
  • »
  • Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ 

Madikeri Dasara: ಶಕ್ತಿದೇವತೆಗಳ ಕರಗೋತ್ಸವದ ಮೂಲಕ ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ 

ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ

ಮಡಿಕೇರಿ ದಸರಾ ಜನೋತ್ಸವಕ್ಕೆ ಚಾಲನೆ

ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಂಜಿನ ನಗರಿ ಮಡಿಕೇರಿ ದಸರಾಕ್ಕೂ ಚಾಲನೆ ದೊರೆತಿದೆ. ನಗರದ ಪಂಪಿನ ಕೆರೆ ಬಳಿಯಲ್ಲಿ ನಾಲ್ಕೂ ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ‌ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮತ್ತು ಜಿಲ್ಲಾಧಿಕಾರಿ ಬಿ. ಸಿ ಸತೀಶ್​ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.

ಮುಂದೆ ಓದಿ ...
  • Share this:

ಕೊಡಗು : ಮೈಸೂರು ದಸರಾ (Mysuru Dasara) ಜೊತೆಗೆ ಮಡಿಕೇರಿ ದಸರಾ ಕೂಡ ಅಷ್ಟೇ ಜನಪ್ರಿಯಗೊಂಡಿದೆ.  ಮಡಿಕೇರಿ (Madikeri) ನಗರದ ಶಕ್ತಿ ದೇವತೆಗಳ ಕರಗ ಉತ್ಸವದ ಮೂಲಕ ಐತಿಹಾಸಿಕ ಮಡಿಕೇರಿ ದಸರಾ (Madikeri Dasara) ಜನೋತ್ಸವಕ್ಕೆ ಸೋಮವಾರ ಸಂಜೆ ಚಾಲನೆ ಸಿಕ್ಕಿದೆ. ಸೋಮವಾರ ಸಂಜೆಯಿಂದಲೇ ಮಡಿಕೇರಿ ನಗರ ಪ್ರದಕ್ಷಿಣೆ ಆರಂಭಿಸಿರುವ ಶಕ್ತಿದೇವತೆಗಳು ಮುಂದಿನ ಒಂಭತ್ತು ದಿನಗಳ ಕಾಲವೂ ಮಡಿಕೇರಿ ನಗರದಲ್ಲಿ ಪ್ರದಕ್ಷಿಣೆ ನಡೆಸಲಿವೆ. 


ಒಂದು ವಾರಗಳ ಕಾಲ ದಸರಾ ಕಾರ್ಯಕ್ರಮ


ಪ್ರತಿ ಮನೆ ಮನೆಯಲ್ಲೂ ಶಕ್ತಿ ದೇವತೆಗಳು ಪೂಜೆ ಸ್ವೀಕರಿಸಲಿವೆ. ಮತ್ತೊಂದೆಡೆ ಮುಂದಿನ ಒಂದು ವಾರಗಳ ಕಾಲ ನಗರದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ. ದಸರಾ ಪ್ರಯುಕ್ತ ಮಂಜಿನ ನಗರಿ ನವವಧುವಿನಂತೆ ಸಿಂಗಾರಗೊಂಡಿದ್ದು ಇಡೀ ನಗರವೇ ಹೊಸ ಕಳೆಯೊಂದಿಗೆ ಕಂಗೊಳಿಸುತ್ತಿದೆ.


ಮಡಿಕೇರಿ ದಸರಾಗೂ ಸಿಕ್ತು ಚಾಲನೆ


ಜಗತ್ ಪ್ರಸಿದ್ದ ಮೈಸೂರು ದಸರಾಕ್ಕೆ ಇಂದು ವಿದ್ಯುಕ್ತ ಚಾಲನೆ ಸಿಕ್ಕಿದ್ದು, ಇತ್ತ ಐತಿಹಾಸಿಕ ಮಡಿಕೇರಿ ದಸರಾಕ್ಕೂ ಕೂಡ ಚಾಲನೆ ನೀಡಲಾಗಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರೋ ಮಂಜಿನ ನಗರಿ ಮಡಿಕೇರಿ ದಸರಾಕ್ಕೂ ಚಾಲನೆ ದೊರೆತಿದೆ. ನಗರದ ಪಂಪಿನ ಕೆರೆ ಬಳಿಯಲ್ಲಿ ನಾಲ್ಕೂ ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ‌ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮತ್ತು ಜಿಲ್ಲಾಧಿಕಾರಿ ಡಾ. ಬಿ. ಸಿ ಸತೀಶ್​ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.
9 ದಿನಗಳು ನಗರದ ಬೀದಿ ಬೀದಿಗಳಲ್ಲಿ ಮೆರವಣಿಗೆ


ಕರಗಾ ಹೊರುವ ಮೂಲಕ ದಸರಾ ಪ್ರಾರಂಭಗೊಂಡಿದ್ದು, ಕರಗಗಳಿಗೆ ಪೂಜೆ ಸಲ್ಲಿಸಿದ ದಸರಾ ಸಮಿತಿ ಸದಸ್ಯರು ದಸರಾ ಯಶಸ್ಸಿಗೆ ದೇವರಿಗೆ ಮೊರೆಯಿಟ್ಟಿದ್ದಾರೆ. ನಗರದ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ ದೇವಾಲಯಗಳ ಕರಗಗಳನ್ನು ಹೊತ್ತ ವ್ರತಧಾರಿಗಳು ನವರಾತ್ರಿಯ ಒಂಭತ್ತು ದಿನಗಳು ನಗರದ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಲಿದ್ದಾರೆ.


ಇದನ್ನೂ ಓದಿ: Sunil Kumar: ಇಂಧನ ಸಚಿವರು ಕೊಟ್ರು ಗುಡ್​ ನ್ಯೂಸ್​; ರೈತರಿಗೆ ಎಷ್ಟು ಗಂಟೆಗಳ ಕಾಲ ಸಿಗಲಿದೆ ವಿದ್ಯುತ್?


ದಸರಾ ಸಂದರ್ಭದಲ್ಲಿ ಕರಗ ಉತ್ಸವ 


ಶತಮಾನಗಳ ಹಿಂದೆ ಬರಗಾಲದಿಂದ ಮಡಿಕೇರಿಯಲ್ಲಿ ಭೀಕರ ಕಾಲರಾ, ಆವರಿಸಿದ್ದ ಸಂದರ್ಭ ನಗರದ ದೇವತೆಗಳನ್ನು ಕರಗದ ಮೂಲಕ ನಗರದ ಪ್ರದಕ್ಷಿಣೆ ಮಾಡಿ ಪೂಜೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ವರ್ಷಕ್ಕೆ ಒಂದು ಬಾರಿ ದಸರಾ ಸಂದರ್ಭದಲ್ಲಿ ಕರಗ ಉತ್ಸವ ನಡೆಸಲಾಗುತ್ತದೆ.
ಶೋಭಾ ಯಾತ್ರೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗಿ ಸಾಧ್ಯತೆ


ಮಡಿಕೇರಿಯ ಶಕ್ತಿ ದೇವತೆಗಳೆಂದು ಕರೆಸಿಕೊಳ್ಳೋ ನಾಲ್ಕೂ ದೇವಿಯರನ್ನು ಆರಾಧಿಸಿ ಜನರು ಪೂಜಿಸುತ್ತಾರೆ. ನಗರದಲ್ಲಿ ಕರಗ ಸಂಚರಿಸೋ ವೇಳೆ ಪ್ರತಿ ಮನೆ ಮುಂದೆ ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿ ದೇವರನ್ನ ಸ್ವಾಗತಿಸಲಾಗುತ್ತೆ. ನಾಡಿಗೆ ಶುಭವಾಗಲಿ ಎಂದು ಹಾರೈಸಿ ಪೂಜೆ ಸಲ್ಲಿಸಲಾಗುತ್ತದೆ. 10 ನೇ ಅಂದರೆ ವಿಜಯ ದಶಮಿಯಂದು ನಡೆಯುವ ಶೋಭಾ ಯಾತ್ರೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.


ಮಡಿಕೇರಿ ದಸರಾದ ಸ್ಪೆಷಲ್ ದಶಮಂಟಪಗಳ ಉತ್ಸವ


ಒಟ್ನಲ್ಲಿ ದಸರಾ ಜನೋತ್ಸವವೆಂದೇ ಖ್ಯಾತಿ ಪಡೆದಿರುವ ದಸರಾ ಉತ್ಸವಕ್ಕೆ ಇಂದಿನಿಂದ ಚಾಲನೆ ಸಿಕ್ಕಿದೆ, ಶಕ್ತಿದೇವತೆಗಳ ಆರಾಧನೆಗೆ ಹೆಸರಾದ ಈ ನವರಾತ್ರಿ ಉತ್ಸವದ ವೇಳೆ ನಾನಾ ವೈವಿದ್ಯಮಯ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ. ಕೊನೆಯ ದಿನ ಮಡಿಕೇರಿ ದಸರಾದ ಸ್ಪೆಷಲ್ ದಶಮಂಟಪಗಳ ಉತ್ಸವ ಎಲ್ಲರನ್ನು ಬೆರಗುಗೊಳಿಸಲು ಮಡಿಕೇರಿ ಸಜ್ಜಾಗುತ್ತಿದೆ.

Published by:ಪಾವನ ಎಚ್ ಎಸ್
First published: